ಮೈವಿವಿ ಮುದ್ರಣಾಲಯದ ಆನಂದ್‍ಗೆ ಆತ್ಮೀಯ ಬೀಳ್ಕೊಡುಗೆ
ಮೈಸೂರು

ಮೈವಿವಿ ಮುದ್ರಣಾಲಯದ ಆನಂದ್‍ಗೆ ಆತ್ಮೀಯ ಬೀಳ್ಕೊಡುಗೆ

December 31, 2019

ಮೈಸೂರು,ಡಿ.30(ಎಂಕೆ)- ಮೈಸೂರು ವಿವಿ ಮುದ್ರಣಾ ಲಯದ ಹಂಗಾಮಿ ನಿರ್ದೇಶಕ ಹಾಗೂ ಮೇಲ್ವಿಚಾರಕ ರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗುತ್ತಿರುವ ಎಸ್.ಆನಂದ ಅವರಿಗೆ ಮೈಸೂರು ವಿವಿ ದಲಿತ ನೌಕರರ ಸಂಘದ ವತಿಯಿಂದ ಆತ್ಮೀಯವಾಗಿ ಅಭಿನಂದಿಸಿ, ಬೀಳ್ಕೊಡಲಾಯಿತು.

ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂ ಗಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರು ಆನಂದ್ ಅವರನ್ನು ಸನ್ಮಾನಿಸಿದರು. ಬಳಿಕ ಮಾತನಾಡಿದ ಕುಲಪತಿಗಳು, ಮುದ್ರಣಾಲಯ ವಿವಿಯ ಅವಿಭಾಜ್ಯ ಅಂಗವಾಗಿದ್ದು, ಮುಂದಿನ ದಿನಗಳಲ್ಲಿ ಮುದ್ರಣಾಲಯವನ್ನು ಆಧುನಿಕ ತಂತ್ರಜ್ಞಾನಗಳಿಂದ ಉನ್ನತೀಕರಿಸಲಾಗುವುದು ಎಂದು ಹೇಳಿದರು.

ಆನಂದ ಅವರು ಸೌಮ್ಯ ಸ್ವಭಾವದ ವ್ಯಕ್ತಿ. ಅವರ ಕೆಲಸ ವನ್ನು ಬಹಳ ಜವಾಬ್ದಾರಿಯಿಂದ ಮಾಡಿದ್ದಾರೆ. ಒಂದು ಮುದ್ರಣಾಲಯ ನಡೆಸುವುದು ಸುಲಭದ ಕೆಲಸವಲ್ಲ. ಯಾವುದೇ ರೀತಿಯ ಕಳಂಕ ಬರದ ರೀತಿಯಲ್ಲಿ ತಮ್ಮ ಕರ್ತವ್ಯ ವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರ ಮುಂದಿನ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.

ಕುವೆಂಪು ಕನ್ನಡ ಅಧ್ಯಯನ ಕೇಂದ್ರ ನಿರ್ದೇಶಕ ಪೆÇ್ರ.ಎನ್.ಎಂ.ತಳವಾರ ಮಾತನಾಡಿ, ಒಂದು ವಿವಿಯ ಮುದ್ರಣಾಲಯ ನಿರ್ದೇಶಕ ಆಗಿ ಕಾರ್ಯ ನಿರ್ವಹಿಸು ವುದು ತುಂಬಾ ಕಷ್ಟದ ಕೆಲಸ. ಒತ್ತಡಗಳ ನಡುವೆಯೇ ಆನಂದ ಅವರು ತಮ್ಮ ಕೆಲಸವನ್ನು ಸಮರ್ಥವಾಗಿ ನಿಭಾ ಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುದ್ರಣಾಲಯದ ಎಲ್ಲಾ ವಿಭಾಗದ ಸಿಬ್ಬಂದಿಯನ್ನು ಸಮಾನವಾಗಿ ಕಾಣುವ ಸ್ನೇಹ ಜೀವಿ. ಕೆಲಸದಲ್ಲಿ ಬದ್ಧತೆ ಮತ್ತು ವಿಶ್ವಾಸವಿಡುವ ವ್ಯಕ್ತಿತ್ವ ಅವರದು. ಸಣ್ಣ ಹುದ್ದೆಯಿಂದ ಇಂದು ಮುದ್ರಣಾಲಯದ ನಿರ್ದೇಶಕ ಹುದ್ದೆಯವ ರೆಗೂ ವಿವಿಧ ಸ್ಥಾನ ಅಲಂಕರಿಸಿ ನಿವೃತ್ತಿ ಹೊಂದುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ದಲಿತ ನೌಕರರ ಸಂಘದ ಅಧ್ಯಕ್ಷ ಪೆÇ್ರ. ದಯಾನಂದ ಮಾನೆ, ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್, ಮೈಸೂರು ವಿವಿ ಮುದ್ರಣಾಲಯ ನಿರ್ದೇಶಕ ಎಸ್.ಸತೀಶ್, ಡಾ.ಡಿ.ಗಿಡ್ಡಯ್ಯ, ಪುರುಷೋತ್ತಮ್, ಮಾದೇಶ್, ಡಾ.ವಿಜಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.

Translate »