ಮೈಸೂರು, ಜು.11(ಆರ್‍ಕೆಬಿ)- ಮೈಸೂರಿನ ದಿವಾನ್ಸ್ ಮತ್ತು ಡಿ.ದೇವರಾಜ ಅರಸು ರಸ್ತೆಗಳು ಕೂಡುವ ಸ್ಥಳದಲ್ಲಿ ಇದ್ದೂ ಇಲ್ಲದಂತೆ ಮುಚ್ಚಿರುವ ಇ-ಟಾಯ್ಲೆಟ್ ಅನ್ನು ಸಾರ್ವಜನಿಕರ ಬಳಕೆಗೆ ತೆರೆಯಬೇಕೆಂದು ಆಗ್ರ ಹಿಸಿ ಮೈಸೂರು ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ಇ-ಟಾಯ್ಲೆಟ್ ಬಳಿ ಪ್ರತಿಭಟನೆ ನಡೆಸಿದರು.
ಮಹಾನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ವೇದಿಕೆ ಅಧ್ಯಕ್ಷ ಎಂ.ಎಸ್.ಗುರುರಾಜ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಕೈಯ್ಯಲ್ಲಿ ಬಹಿರ್ದೆಸೆಗೆ ಹೋಗುವಾಗ ಬಳಸುವ ಚೊಂಬು ಹಿಡಿದು `ಅಣಕು ಪ್ರದರ್ಶನ’ ನಡೆಸಿದರು.
ಪಾಲಿಕೆ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾ ಕಾರರು, ಪಾಲಿಕೆ ಅಧಿಕಾರಿಗಳು ಕೂಡಲೇ ಮುಚ್ಚಿ ರುವ ಇ-ಟಾಯ್ಲೆಟ್‍ನ್ನು ತೆರೆಯದಿದ್ದರೆ ಪಾಲಿಕೆ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಡಿ.ದೇವರಾಜ ಅರಸು ರಸ್ತೆಯಲ್ಲಿ ಎಲ್ಲಿಯೂ ಸಾರ್ವ ಜನಿಕ ಶೌಚಾಲಯ ಇಲ್ಲ. ಈ ರಸ್ತೆ ಮತ್ತು ಸುತ್ತಲಿನ ಅಂಗಡಿಗಳಲ್ಲಿ ಹೆಚ್ಚಾಗಿ ಮಹಿಳಾ ಕಾರ್ಮಿಕರೇ ಕೆಲಸ ನಿರ್ವಹಿಸುತ್ತಿದ್ದು, ಅವರಿಗೆ ಶೌಚಾಲಯದ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಇಲ್ಲಿ ಇ-ಶೌಚಾಲಯ ನಿರ್ಮಿಸಲಾಗಿತ್ತು. ಆದರೆ, ಆರಂಭವಾದ ಕೆಲ ದಿನಗಳಲ್ಲೇ ಇ-ಶೌಚಾಲಯ ಮುಚ್ಚಿಹೋಗಿರುವ ಹಿನ್ನೆಲೆಯಲ್ಲಿ ಈ ಭಾಗದ ಅಂಗಡಿ ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ಅದರಲ್ಲೂ ಮಹಿಳಾ ಕಾರ್ಮಿಕರು ತೀವ್ರ ತೊಂದರೆ ಅನುಭವಿಸುತ್ತಿ ದ್ದಾರೆ. ಕೂಡಲೇ ಇದನ್ನು ತೆರೆಯಲು ಕ್ರಮ ಕೈಗೊಳ್ಳು ವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಮೈ.ಕಾ.ಪ್ರೇಮ್‍ಕುಮಾರ್, ಮೈಸೂರು ರಕ್ಷಣಾ ವೇದಿಕೆ ಕಾರ್ಯದರ್ಶಿ ಪ್ರಮೋದ್‍ಗೌಡ, ಸಂತೋಷ್, ಪ್ರಶಾಂತ್, ನಿತಿನ್, ಶಿವು, ಉಮೇಶ್, ಭರತ್, ರವಿ, ಮಂಜುನಾಥ್ ಇನ್ನಿತರರು ಭಾಗವಹಿಸಿದ್ದರು.