ಗಾರ್ಮೆಂಟ್ಸ್ ಮಾಲೀಕರ ವರ್ತನೆ ಖಂಡಿಸಿ ಕಾರ್ಮಿಕರ ಪ್ರತಿಭಟನೆ
ಮೈಸೂರು

ಗಾರ್ಮೆಂಟ್ಸ್ ಮಾಲೀಕರ ವರ್ತನೆ ಖಂಡಿಸಿ ಕಾರ್ಮಿಕರ ಪ್ರತಿಭಟನೆ

January 10, 2020

ಮೈಸೂರು,ಜ.9(ವೈಡಿಎಸ್)- ಗಾರ್ಮೆಂಟ್ಸ್ ಮಾಲೀ ಕರು ಮಹಿಳಾ ನೌಕರರೊಂದಿಗೆ ಅನುಚಿತವಾಗಿ ವರ್ತಿಸಿ ದ್ದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸ ಬೇಕೆಂದು ಒತ್ತಾಯಿಸಿ ಸಾಯಿ ಗಾರ್ಮೆಂಟ್ಸ್ ಕಾರ್ಖಾ ನೆಯ ಮಹಿಳಾ ನೌಕರರು ಪ್ರತಿಭಟನೆ ನಡೆಸಿದರು.

ಗುರುವಾರ ಬೆಳಿಗ್ಗೆ ಮೇಟಗಳ್ಳಿ ಬಳಿಯ ಜಯದೇವ ನಗರದಲ್ಲಿನ ಸಾಯಿ ಗಾರ್ಮೆಂಟ್ಸ್ ಎದುರು ಜಮಾಯಿಸಿದ ಮಹಿಳಾ ಕಾರ್ಮಿಕರು, ಗಾರ್ಮೆಂಟ್ಸ್ ಮಾಲೀಕರ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರದಲ್ಲಿ ಬುಧವಾರ ಗಾರ್ಮೆಂಟ್ಸ್‍ನ ಮಹಿಳಾ ನೌಕರರು ಪಾಲ್ಗೊಂ ಡಿದ್ದು, ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರಿಂದ ಗಾರ್ಮೆಂಟ್ಸ್ ಮಾಲೀಕರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿರುವುದು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಬೇಡಿಕೆಗಳು: ಕಾರ್ಖಾನೆ ಸಿಬ್ಬಂದಿ ಕನಿಷ್ಠ ಕೂಲಿ ಜಾರಿ ಗೊಳಿಸಬೇಕೆಂದು ಒತ್ತಾಯಿಸುತ್ತಿದ್ದರೂ ಇನ್ನೂ ಜಾರಿ ಯಾಗಿಲ್ಲ. 9 ತಿಂಗಳ ಬಾಕಿ ವೇತನವನ್ನು ಕೂಡಲೇ ನೀಡಬೇಕು. ಇಪಿಎಫ್ ಕಟ್ಟಿರುವುದಕ್ಕೆ ಸೂಕ್ತ ದಾಖಲೆ ನೀಡಬೇಕು. ಕೆಲಸ ಮಾಡುವ ವೇಳೆ ಗೌರವಯುತವಾಗಿ ನಡೆಸಿಕೊಳ್ಳ ಬೇಕು. ಊಟದ ಸಮಯದಲ್ಲಿ ಯಾವುದೇ ಸಭೆ ನಡೆಸ ಬಾರದು. 8 ಗಂಟೆಗೂ ಹೆಚ್ಚಿನ ಅವಧಿ ಕೆಲಸ ಮಾಡುವ ಸಿಬ್ಬಂ ದಿಗೆ ಹೆಚ್ಚುವರಿ ವೇತನ(ಓಟಿ) ನೀಡಬೇಕು. ವಾರದ ರಜೆ, ತಿಂಗಳಿಗೊಂದು ಸಾಂದರ್ಭಿಕ ರಜೆ, ರಾಷ್ಟ್ರೀಯ ಹಬ್ಬಗಳಿಗೆ ರಜೆ, ವೈದ್ಯಕೀಯ ರಜೆ, ವೈದ್ಯಕೀಯ ರಜೆ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡಬೇಕು. ಕಾಲ ಕಾಲಕ್ಕೆ ವೈದ್ಯಕೀಯ ತಪಾ ಸಣೆ ಮಾಡಿಸಬೇಕು. ಮಹಿಳಾ ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ ನೀಡಬೇಕೆಂದು ಆಗ್ರಹಿಸಿದರು. ಕಾರ್ಖಾನೆಯ ನೂರಾರು ಮಹಿಳಾ ನೌಕರರು ಪ್ರತಿಭಟನೆಯಲ್ಲಿದ್ದರು.

Translate »