30 ವರ್ಷದ ಹಿಂದೆ ಮೈಸೂರಿಗಿಂತ ಕೆಳ ದರ್ಜೆಯ ಪುಣೆ ಈಗ ಹತ್ತು ಪಟ್ಟು ಅಭಿವೃದ್ಧಿ
ಮೈಸೂರು

30 ವರ್ಷದ ಹಿಂದೆ ಮೈಸೂರಿಗಿಂತ ಕೆಳ ದರ್ಜೆಯ ಪುಣೆ ಈಗ ಹತ್ತು ಪಟ್ಟು ಅಭಿವೃದ್ಧಿ

June 23, 2019

ಮೈಸೂರು,ಜೂ.22(ಎಸ್‍ಪಿಎನ್)-ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ದಿಂದ ಮರು ಆಯ್ಕೆಯಾಗಿರುವ ಸಂಸದ ಪ್ರತಾಪಸಿಂಹ ಅವರನ್ನು ಪತ್ನಿ ಸಮೇತ ವಿಷನ್ ಟೀಂ ಆಫ್ ಮೈಸೂರು ತಂಡದ ಸದಸ್ಯರು ಶನಿವಾರ ಆತ್ಮೀಯವಾಗಿ ಅಭಿನಂದಿಸಿದರು.

ಮೈಸೂರು ವಿವಿ ಮಾನಸಗಂಗೋತ್ರಿ ಆವರಣದ ರಾಣಿ ಬಹದ್ದೂರ್ ಸಭಾಂಗಣ ದಲ್ಲಿ ವಿಷನ್ ಟೀಂ ಆಫ್ ಮೈಸೂರು ವತಿ ಯಿಂದ ಸಿಂಹ ದಂಪತಿಯನ್ನು ಮೈಸೂರುಪೇಟ ತೊಡಿಸಿ, ಗುಲಾಬಿ ಹಾರ ಹಾಕಿ, ಬೋನ್ಸಾಯ್ ಸಸಿ ನೀಡಿ ಅಭಿನಂದಿಸಲಾಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರತಾಪ ಸಿಂಹ, 2019ರ ಲೋಕಸಭಾ ಚುನಾವಣೆ ಜನಸಾಮಾನ್ಯರು ವರ್ಸಸ್ ವಿರೋಧ ಪಕ್ಷಗಳು ಎಂಬಂತೆ ನಡೆಯಿತು. ಎದುರಾಳಿಗಳ ಕುತಂತ್ರಕ್ಕೆ ದೇಶದ ಮತ ದಾರರು ಕಿಮ್ಮತ್ತ್ತು ನೀಡಲಿಲ್ಲ. ಅದರಂತೆ ಮೈಸೂರು-ಕೊಡಗು ಕ್ಷೇತ್ರದ ಮತದಾರ, ಪ್ರಧಾನಿ ಮೋದಿ ಅವರನ್ನು ಅದೇ ಹುದ್ದೆ ಯಲ್ಲಿ ಮುಂದುವರೆಸಲು ನನ್ನನ್ನು ಗೆಲ್ಲಿಸಿ ದ್ದಾರೆ. ಈ ಅಭಿಮಾನವನ್ನು ಮನದಲ್ಲಿಟ್ಟು ಕೊಂಡು ಮೈಸೂರು-ಕೊಡಗು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಅನೇಕ ವಿರೋಧದ ನಡುವೆ ಮೈಸೂರು ರೈಲ್ವೆ ನಿಲ್ದಾಣ ನವೀಕರಣ ಕಾರ್ಯ ಆರಂಭವಾಗಿದ್ದು, ಕಾಲಮಿತಿಯೊಳಗೆ ಮುಗಿಯಲಿದೆ. ಆಗಸ್ಟ್ 15ರೊಳಗೆ ನವೀ ಕೃತ ರೈಲ್ವೆ ನಿಲ್ದಾಣವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು. ಈ ವೇಳೆ ಬೃಹತ್ ರಾಷ್ಟ್ರಧ್ವಜವನ್ನು ಹಾರಿಸ ಲಾಗುವುದು ಎಂದರು. ಕಳೆದ 30 ವರ್ಷ ಗಳ ಹಿಂದೆ ಮಹಾರಾಷ್ಟ್ರದ ಪುಣೆ ನಗರ ಅಭಿವೃದ್ಧಿಯಲ್ಲಿ ಮೈಸೂರಿಗಿಂತ ಕೆಳ ದರ್ಜೆಯಲ್ಲಿತ್ತು. ಇಂದು ಪುಣೆ-ಮುಂಬೈ ಅಭಿವೃದ್ಧಿಯಲ್ಲಿ ಅವಳಿನಗರಗಳಾಗಿ ಬೆಳೆದಿವೆ. ಇಂದು ಪುಣೆ ಮೈಸೂರಿಗಿಂತ ಹತ್ತುಪಟ್ಟು ಬೆಳೆದಿದೆ. ಮೈಸೂರಿನಲ್ಲಿ ಉದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾ ಗುತ್ತಿದೆ. ಇದಕ್ಕೆ ಕಾರಣ ಏನೆಂಬುದನ್ನು ಯಾರೂ ತಿಳಿದುಕೊಳ್ಳುತ್ತಿಲ್ಲ ಎಂದರು.

1994-95ರಲ್ಲಿ ಬೆಂಗಳೂರು-ಮೈಸೂರು ನೈಸ್ ಎಕ್ಸ್‍ಪ್ರೆಸ್ ಕಾರಿಡಾರ್ ಯೋಜನೆಯನ್ನು ಘೋಷಣೆ ಮಾಡ ಲಾಗಿತ್ತು. ಇಂದಿಗೂ ಆ ಯೋಜನೆಗೆ ಚಾಲನೆ ಸಿಗಲಿಲ್ಲ. ಅಭಿವೃದ್ಧಿ ವಿಷಯ ದಲ್ಲಿ ಇಂಥ ತಾತ್ಸಾರ ಮನೋಭಾವ ಬೆಳೆಯುತ್ತ ಹೋದರೆ, ಮೈಸೂರಿನ ಅಭಿವೃದ್ಧಿ ಹೇಗೆ ಸಾಧ್ಯ?. ಕಾಲಕಾಲಕ್ಕೆ ನಗರದ ರಸ್ತೆ, ಫುಟ್‍ಪಾತ್ ಆಧುನಿಕರಣ ವಾಗಬೇಕು. ಆದರೆ, ನವೀಕರಣ ಮಾಡಲು ಹೊರಟರೆ, ಅದಕ್ಕೆ ಇಲ್ಲದ-ಸಲ್ಲದ ಪ್ರತಿ ರೋಧಗಳು ಸಮಾಜದಿಂದ ವ್ಯಕ್ತವಾಗು ತ್ತದೆ. ಇದಕ್ಕೆ ಕೇಂದ್ರ ಸರ್ಕಾರವನ್ನು ದೂಷಿಸಿ ದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಮೈಸೂರು ಕೆ.ಆರ್.ವಿಧಾನ ಸಭಾ ವ್ಯಾಪ್ತಿಯಲ್ಲಿ ಅತೀ ಹೆಚ್ಚು ತೆರಿಗೆ ಹಣ ಸಂಗ್ರಹವಾಗುತ್ತಿದೆ. ನಂತರದ ಸ್ಥಾನದಲ್ಲಿ ಚಾಮರಾಜ ಕ್ಷೇತ್ರ ಸೇರಿಕೊಳ್ಳುತ್ತದೆ. ಆದರೆ, ಎನ್.ಆರ್.ಕ್ಷೇತ್ರದಲ್ಲಿ ಅತೀ ಕಡಿಮೆ ತೆರಿಗೆ ಸಂಗ್ರಹವಾಗುತ್ತಿದೆ. ಇದರ ಬಗ್ಗೆ ಮೈಸೂರಿನ ಪ್ರಜ್ಞಾವಂತ ನಾಗರಿಕರು, ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳನ್ನು ಪ್ರಶ್ನಿಸುತ್ತಿಲ್ಲ. ನಗರ ಪಾಲಿಕೆ ಹಿರಿಯ ಸದಸ್ಯರೊಬ್ಬರು ಎನ್.ಆರ್.ಮೊಹಲ್ಲಾ ಖಬರ್‍ಸ್ಥಾನ ಅಭಿವೃದ್ಧಿಗೆ 80 ಲಕ್ಷ ಅನುದಾನ ಪಡೆದಿದ್ದಾರೆ. ಅದೇ ರೀತಿ ಪ್ರಥಮ ಬಾರಿಗೆ ಆಯ್ಕೆಯಾದ ಸದಸ್ಯರಿಗೆ ಕೇವಲ 25 ರಿಂದ 40 ಲಕ್ಷ ಅನುದಾನ ನೀಡಿದ್ದಾರೆ. ಈ ರೀತಿ ಸ್ಥಳೀಯ ಮಟ್ಟದ ಅಭಿವೃದ್ಧಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ವಾದರೆ, ಯಾರನ್ನು ಪ್ರಶ್ನಿಸಬೇಕು ಎಂಬುದನ್ನು ನೀವೇ ಹೇಳಿ ಎಂದು ಸಭಿಕರನ್ನು ಪ್ರಶ್ನಿಸಿದರು.

ಮಂಗಳೂರಿನಲ್ಲಿ 22 ಇಂಜಿನಿಯ ರಿಂಗ್, 12 ಮೆಡಿಕಲ್ ಕಾಲೇಜುಗಳು ಸ್ಥಾಪನೆಯಾಗಿ ವಿದ್ಯಾಕಾಶಿಯಾಗಿ ರೂಪುಗೊಳ್ಳುತ್ತಿದೆ. ಇದಕ್ಕೆ ಬೇಕಾದ ಮೂಲಸೌಕರ್ಯಗಳೂ ಅಭಿವೃದ್ಧಿ ಯಾಗಿವೆ. ಅದು ಕೈಗಾರಿಕೆ ಆಗಿರಲಿ, ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಬಂದರುಗಳ ಅಭಿವೃದ್ಧಿಯಲ್ಲೂ ಮುಂಚೂಣಿ ಯಲ್ಲಿದೆ. ಅದೇ ರೀತಿ ಬೆಳಗಾವಿ ನಗರವೂ ಅತೀ ವೇಗವಾಗಿ ಅಭಿವೃದ್ಧಿ ಹೊಂದು ತ್ತಿರುವ ನಗರವಾಗಿದೆ. ಕರ್ನಾಟಕ ರಾಜಧಾನಿ ಪಕ್ಕದಲ್ಲಿದ್ದರೂ ಮೈಸೂರಿನ ಅಭಿವೃದ್ಧಿ ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

2021ರ ದಸರಾ ವೇಳೆಗೆ ಮೈಸೂರು-ಬೆಂಗಳೂರು ಹೆದ್ದಾರಿ ಪೂರ್ಣ: ಕಳೆದ 25 ವರ್ಷಗಳಿಂದ ಸಾಧ್ಯವಾಗದ ಕೆಲಸ ವನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಸಾಧ್ಯವಾಗಿದೆ. ಮೈಸೂರು-ಬೆಂಗಳೂರು 10 ಪಥದ ರಸ್ತೆ ಅಭಿವೃದ್ಧಿಗೆ 7550 ಕೋಟಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಕಾಮಗಾರಿ 2021ರ ದಸರಾ ವೇಳೆಗೆ ಪೂರ್ಣಗೊಳಿಸುವ ಜವಾಬ್ದಾರಿ ನನ್ನದು. ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ಸುಮಾರು 1.44 ಲಕ್ಷ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಳೆದ 5 ವರ್ಷ ಗಳಿಂದ 13500 ಕಿ.ಮೀ ಹೆದ್ದಾರಿಗಳ ಅಭಿವೃದ್ಧಿಯಾಗಿದೆ ಎಂದು ಅಂಕಿ-ಅಂಶಗಳನ್ನು ವಿವರಿಸಿದರು.

ಮುಡಾ ಸರಿಯಾಗಿ ಕಾರ್ಯ ನಿರ್ವಹಿ ಸುತ್ತಿಲ್ಲ: ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ. ತಿಂಗಳಿಗೊಮ್ಮೆ ಮುಡಾ ಸಾಮಾನ್ಯ ಸಭೆ ನಡೆಯುತ್ತದೆ. ಇದರಲ್ಲಿ ಕೆಲವರಿಗೆ ಬೇಕಾ ದಂತೆ ಹೊಸ ಬಡಾವಣೆಗಳಿಗೆ ಅನುಮತಿ ಪಡೆದು ಸಭೆಗಳು ಮುಕ್ತಾಯಗೊಳ್ಳುತ್ತವೆ. ಇದು ಮುಡಾ ಮಾಡುತ್ತಿರುವ ಕೆಲಸ. ಕಳೆದ 20 ವರ್ಷಗಳ ಹಿಂದೆ ವಿಜಯ ನಗರ 1 ರಿಂದ 4 ಹಂತದವರೆಗೆ ನಿವೇಶನ ಅಭಿವೃದ್ಧಿಪಡಿಸಿ, ಜನಸಾಮಾ ನ್ಯರಿಗೆ ಹಂಚಿಕೆ ಮಾಡಿತ್ತು. ಇದರಲ್ಲಿ ವಿಜಯನಗರ 4ನೇ ಹಂತದಲ್ಲಿ ಪೂರ್ಣ ಪ್ರಮಾಣದ ಮನೆಗಳನ್ನು ಕಟ್ಟಿಕೊಂಡಿಲ್ಲ. ಕಾರಣ ರಿಯಲ್ ಎಸ್ಟೇಟ್ ದಂಧೆ. ಮೈಸೂ ರಿನ 25 ಕಿ.ಮೀ ವ್ಯಾಪ್ತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು ಭೂಭಾಗವನ್ನು ಆಕ್ರಮಿಸಿ ಕೊಂಡಿರುವುದರಿಂದ ಬೇರೆ ಉದ್ಯಮಗಳ ಬೆಳವಣಿಗೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

198 ಕೋಟಿ ಹಣ ಏನಾಯಿತು !
ಕಳೆದ ವರ್ಷ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ನೂರಾರು ಹೆಕ್ಟೇರ್ ಕೃಷಿಭೂಮಿ ಹಾಳಾಯಿತು. ಇದರಿಂದ ನೂರಾರು ಕೊಡವರು ಸಂಕಷ್ಟದಲ್ಲಿ ಸಿಲುಕಿದರು. ಇದನ್ನು ಮನಗಂಡ ಮೋದಿ ಸರ್ಕಾರ 525 ಕೋಟಿ ರೂ. ಕೊಡಗಿನ ಅಭಿವೃದ್ಧಿಗೆ ಬಿಡುಗಡೆಗೊಳಿಸಿದರಲ್ಲದೆ, ಸಾರ್ವಜನಿಕರಿಂದಲೂ ಮುಖ್ಯಮಂತ್ರಿ ಪರಿಹಾರ ನಿಧಿಗೆ 198 ಕೋಟಿ ರೂ. ದೇಣಿಗೆ ಬಂದಿದೆ. ಈ ಹಣದಲ್ಲಿ ಈಗಾಗಲೇ 100 ಕೋಟಿ ವೆಚ್ಚವಾಗಿದೆ. ಆದರೂ ಕೊಡಗಿನ ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರದಿಂದ ಸಣ್ಣ ಪರಿ ಹಾರ ಸಿಕ್ಕಿಲ್ಲ. ಕೇಂದ್ರದಲ್ಲೊಂದು, ರಾಜ್ಯದಲ್ಲೊಂದು ಸರ್ಕಾರ ಅಧಿಕಾರಕ್ಕೆ ಬಂದರೆ ಇದೇ ಪರಿಸ್ಥಿತಿ. ಉಳಿದ 98 ಕೋಟಿ ಹಣದಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು.

ಕೊಡಗಿಗೆ ಹೈಟೆಕ್ ಆಸ್ಪತ್ರೆ ಬೇಕು.:ಕೊಡಗಿಗೆ ಹೈಟೆಕ್ ಆಸ್ಪತ್ರೆ ಅನಿವಾರ್ಯವಾಗಿದೆ. ಅದನ್ನು ಮಂಜೂರು ಮಾಡ ಬೇಕಾಗಿರುವುದು ರಾಜ್ಯ ಸರ್ಕಾರದ ಕೆಲಸ. ಇದರ ಬಗ್ಗೆ ಅನೇಕ ಬಾರಿ ಗಮನ ಸೆಳೆದರೂ ಈಗಿನ ಸರ್ಕಾರ ನಮ್ಮ ಮನವಿಯನ್ನು ಕೇಳಿಸಿಕೊಳ್ಳುತ್ತಿಲ್ಲ. ನಾನು ಸಾಕಷ್ಟು ಬಾರಿ ಮನವಿ ಮಾಡಿದ್ದೇನೆ. ಮತ್ತೊಮ್ಮೆ ಮನವಿ ಮಾಡುತ್ತೇನೆ ಎಂದರಲ್ಲದೆ, ರಾಜ್ಯದಲ್ಲಿರುವ ಇಎಸ್‍ಐ ಆಸ್ಪತ್ರೆಗಳ ಅಭಿವೃದ್ದಿ ಮತ್ತು ನಿರ್ವಹಣೆಗೆ 950 ಕೋಟಿ ಅನುದಾನ ವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಆದರೆ, ರಾಜ್ಯ ಕಾರ್ಮಿಕ ಇಲಾಖೆ ಇದರ ಅಭಿವೃದ್ಧಿ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಕುಡಿ ಯುವ ನೀರಿನ ಸಮಸ್ಯೆ ತಲೆದೋರಿದೆ ಎಂದರು.

ಮೈಸೂರು-ಹುಣಸೂರು ರಸ್ತೆಯ ಜಲದರ್ಶಿನಿಯಿಂದ ಹಿನಕಲ್ ವೃತ್ತದವರೆಗಿನ ರಸ್ತೆ ಅಭಿವೃದ್ಧಿಗೆ 12 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಲೋಕೋಪ ಯೋಗಿ ಅಧಿಕಾರಿಗಳು ಈ ಕಾಮಗಾರಿಗೆ ಪೂರ್ಣ ಪ್ರಮಾಣದ ಅನುದಾನ ವೆಚ್ಚ ಮಾಡಿರಲಿಲ್ಲ. ನಂತರ ಅಧಿಕಾರಿಗಳ ವಿರುದ್ಧ ಗರಂ ಆದ ಮೇಲೆ ಮತ್ತೆ ಫುಟ್ ಪಾತ್ ಹಾಗೂ ರಸ್ತೆ ಅಗಲೀಕರಣ ಕಾರ್ಯ ಮುಂದು ವರೆಸಿದ ಪ್ರಸಂಗವನ್ನು ವಿವರಿಸಿದರಲ್ಲದೆ, ಇದರಲ್ಲಿ ಸ್ಥಳೀಯರು ಯಾರ್ಯಾರು ಕಮಿಷನ್ ಪಡೆದಿದ್ದಾರೆ ಎಂಬುದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು. ವೇದಿಕೆಯಲ್ಲಿ ಆರ್‍ಎಸ್‍ಎಸ್ ಮೈಸೂರು ವಿಭಾಗದ ಸಂಚಾಲಕರಾದ ರಾಜೇಶ್‍ಜೀ, ನಿವೃತ್ತ ಇಂಜಿನಿಯರ್ ಸತ್ಯನಾರಾಯಣ್ ಇದ್ದರು. ವರಲಕ್ಷ್ಮಿ, ಪ್ರಮೋದಿನಿ ಪ್ರಾರ್ಥಿಸಿದರೆ, ಮೋಹನ್ ಸ್ವಾಗತಿಸಿದರು. ವಿಷನ್ ಟೀಂ ಆಫ್ ಮೈಸೂರು ಸದಸ್ಯೆ ರಂಜಿನಿ ಸುರೇಶ್ ಹಾಗೂ ಪಾರ್ವತಿ ರಾಮಕೃಷ್ಣ ಅಭಿನಂದನೆ ನುಡಿಗಳನ್ನಾಡಿದರು.

Translate »