ಪೌರತ್ವ ಕಾಯ್ದೆಗೆ ವಿರೋಧ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಹುನ್ನಾರ: ಆರ್.ರಘು
ಮೈಸೂರು

ಪೌರತ್ವ ಕಾಯ್ದೆಗೆ ವಿರೋಧ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಹುನ್ನಾರ: ಆರ್.ರಘು

December 21, 2019

ಮೈಸೂರು, ಡಿ.20-ಪೌರತ್ವ ಕಾಯ್ದೆಯ ಹೆಸರಿನಲ್ಲಿ ಮಂಗಳೂರನ್ನು ಹಿಂಸೆಯ ದಳ್ಳುರಿಗೆ ತಳ್ಳಿ ಅಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿರುವುದರ ಹಿಂದೆ ರಾಷ್ಟ್ರವಿದ್ರೋಹಿಗಳ ಕೈವಾಡವಿದೆ. ಇಂತಹ ಕೃತ್ಯಕ್ಕೆ ಪ್ರಚೋದನೆ ನೀಡುತ್ತಿರುವ ಕಾಂಗ್ರೆಸ್ ಮುಖಂ ಡರ ವರ್ತನೆ ಭಾರತದ ಸಾರ್ವ ಭೌಮತ್ವಕ್ಕೆ ಧಕ್ಕೆ ತರುತ್ತಿದೆ ಎಂದು ಬಿಜೆಪಿ ಸಹ ವಕ್ತಾರ ರಘು ಆರ್.ಕೌಟಿಲ್ಯ ಅಭಿಪ್ರಾಯಪಟ್ಟಿ ದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ದೇಶವಾಸಿಗಳ ರಕ್ಷಣೆಗಾಗಿ, ನೈಜ ಭಾರತೀ ಯರ ಹಕ್ಕಿಗಾಗಿ ಪೌರತ್ವ ಕಾಯ್ದೆ ತಿದ್ದುಪಡಿ ಯಾಗಿದೆ. ಇದರ ವಿರುದ್ಧ ವ್ಯವಸ್ಥಿತ ಅಪ ಪ್ರಚಾರ ನಡೆಸಿ, ರಾಷ್ಟ್ರದ ಉದ್ದಗಲಕ್ಕೆ ಹಿಂಸಾ ಚಾರವನ್ನು ಹರಡುವ ಪಿತೂರಿ ನಡೆಯು ತ್ತಿದೆ. ಇದರ ಹಿಂದೆ ರಾಷ್ಟ್ರ ವಿರೋಧಿ ಶಕ್ತಿಗಳ ಕೈವಾಡವನ್ನು ಅಲ್ಲಗಳೆಯ ಲಾಗದು. ಸದರಿ ಕಾಯ್ದೆಯಿಂದ ಮುಸ್ಲಿ ಮರೂ ಸೇರಿದಂತೆ ಯಾವುದೇ ಧರ್ಮ ಅಥವಾ ಭಾಷೆಯ ಯಾವೊಬ್ಬ ನಾಗರಿಕ ನಿಗೂ ಕಿಂಚಿತ್ತೂ ಕೆಡುಕಾಗು ವುದಿಲ್ಲ.ವಾಸ್ತವಾಂಶದ ಅರಿವಿದ್ದರೂ ಮತಬ್ಯಾಂಕ್ ರಾಜಕಾರಣಕ್ಕಾಗಿ ಸಮಯ ಸಾಧಕತನ, ತಿಳಿಗೇಡಿತನವನ್ನು ತನ್ನ ಉದರದೊಳಗೆ ಹುದುಗಿಸಿಕೊಂಡಿ ರುವ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ಚಳ ವಳಿ ಹೆಸರಿನ ಹಿಂಸಾಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿರುವುದು ರಾಷ್ಟ್ರದ ಹಿತಾಸಕ್ತಿಗೆ ಭಂಗ ಉಂಟು ಮಾಡುವ ನಡೆಯಾಗಿದೆ ಎಂದು ಅವರು ದೂರಿದ್ದಾರೆ.

ಇಂತಹ ನಡೆ, ಪ್ರವೃತ್ತಿಗ ಳಿಂದಲೇ ಕಾಂಗ್ರೆಸ್ ಅವಸಾನ ಕಾಣುತ್ತಿದೆ. ಮುಂದೆ ಪೌರತ್ವ ಕಾಯ್ದೆ ವಿರೋಧಿಸು ತ್ತಿರುವ ರಾಜಕೀಯ ಪಕ್ಷಗಳು ಇನ್ನೂ ಬಹುದೊಡ್ಡ ಬೆಲೆ ತೆರಬೇಕಾದ ಪರಿಸ್ಥಿತಿ ಬರುತ್ತದೆ. ವಿರೋಧ ಪಕ್ಷದ ಜವಾಬ್ದಾರಿ ಸ್ಥಾನದಲ್ಲಿರುವ ಸಿದ್ದರಾಮಯ್ಯ, ಪೌರತ್ವ ಕಾಯ್ದೆ ವಿಚಾರದಲ್ಲಿ ವಿವೇಚನಾರಹಿತ ವಾಗಿ ಮಾತನಾಡುತ್ತಿರುವುದು ಅಧಿಕಾರ ಲಾಲಸೆಯಲ್ಲದೆ ಮತ್ತೇನೂ ಅಲ್ಲ. ಈ ಕಾಯ್ದೆಯಿಂದ ದೇಶದ `ಒಬ್ಬನೇ ಒಬ್ಬ’ ನಾಗರಿಕನಿಗಾದರೂ ಯಾವ ರೀತಿ ತೊಂದರೆ ಆಗುತ್ತದೆ ಎಂಬುದನ್ನು ಸಿದ್ದ ರಾಮಯ್ಯ ಸೇರಿದಂತೆ ಇದನ್ನು ವಿರೋಧಿ ಸುತ್ತಿರುವ ರಾಜಕಾರಣಿಗಳು ಸಾರ್ವಜನಿ ಕರ ಮುಂದೆ ಆಧಾರ ಸಹಿತವಾಗಿ ನಿರೂ ಪಿಸಿ ತೋರಿಸಲಿ ಎಂದು ರಘು ಆರ್. ಕೌಟಿಲ್ಯ ಸವಾಲು ಹಾಕಿದ್ದಾರೆ.

ದೇಶ ಅಸ್ಥಿರಗೊಂಡರೂ ಸರಿಯೇ, ಮತಬ್ಯಾಂಕ್ ರಾಜಕಾರಣದಿಂದ ಅಧಿ ಕಾರ ಹಿಡಿಯುವ ಅಜೆಂಡಾ ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷಗಳದ್ದಾ ಗಿದೆ. ಇವರ ರಾಷ್ಟ್ರ ನಿಷ್ಠೆ ಇಲ್ಲದ ವರ್ತ ನೆಗೆ ಜನರು ಮುಂದೆ ತಕ್ಕ ಪಾಠ ಕಲಿಸಿಯೇ ತೀರುತ್ತಾರೆ. ಈ ನಿಟ್ಟಿನಲ್ಲಿ ಹೀಗಾಗಲೇ ರಾಜಕೀಯ ಪೆಟ್ಟು ತಿಂದಿದ್ದರೂ ಈ ರಾಜಕೀಯ ಪಕ್ಷಗಳಿಗೆ ಬುದ್ದಿ ಬಾರದೇ ಇರುವುದು ವಿಪರ್ಯಾಸವೇ ಸರಿ.

ರಾಷ್ಟ್ರಕವಿ ಕುವೆಂಪು ಅವರು ನುಡಿದಂತೆ ಕರ್ನಾಟಕ ರಾಜ್ಯ “ಸರ್ವಜನಾಂಗದ ಶಾಂತಿಯ ತೋಟ ಹಾಗೂ ಸೌಹಾರ್ದ ತೆಯ ಸಂಕೇತದ ನಾಡು. ಇಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುವ ಕ್ಷುದ್ರಶಕ್ತಿಗಳ ಆಟ ನಡೆಯದು. ರಾಜ್ಯದ ಶಾಂತಿಪ್ರಿಯ ಜನತೆಯ ಸಂಯಮವನ್ನು ರಾಷ್ಟ್ರದ ಹಿತಾಸಕ್ತಿಯ ವಿರುದ್ದದ ಸಮಾಜಘಾತುಕ ಶಕ್ತಿಗಳು ದೌರ್ಬಲ್ಯ ಎಂದು ತಿಳಿದರೆ ಅದು ಅವರ ಮೂರ್ಖತನವಾದೀತು.

Translate »