ಯುವಜನರು ಭಾರತೀಯ ಕಲೆ, ಸಾಹಿತ್ಯ, ನೃತ್ಯ ಕಲಿಕೆಗೆ ಆಸಕ್ತಿ ವಹಿಸಲಿ
ಮೈಸೂರು

ಯುವಜನರು ಭಾರತೀಯ ಕಲೆ, ಸಾಹಿತ್ಯ, ನೃತ್ಯ ಕಲಿಕೆಗೆ ಆಸಕ್ತಿ ವಹಿಸಲಿ

December 21, 2019

ಮೈಸೂರು,ಡಿ.20(ಎಸ್‍ಪಿಎನ್)- `ಕಲೆ-ಸಾಹಿತ್ಯ-ನೃತ್ಯ’ ಕ್ಷೇತ್ರದಲ್ಲಿ ತೊಡಗಿಸಿ ಕೊಂಡÀ ಪ್ರತಿಯೊಂದು ಕುಟುಂಬ ಉತ್ತಮ ಸಂಸ್ಕಾರವನ್ನು ರೂಢಿಸಿಕೊಂಡಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಕಲೆ-ಸಾಹಿತ್ಯ ಅಧ್ಯಯನಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಹಿತವಚನ ನೀಡಿದರು.

ಮೈಸೂರಿನ ಜಗನ್ಮೋಹನ ಅರಮನೆ ಯಲ್ಲಿ ನೃತ್ಯಾಲಯ ಟ್ರಸ್ಟ್ ವತಿಯಿಂದ 3 ದಿನಗಳ ಕಾಲ ಆಯೋಜಿಸಿರುವ `ನಲವತ್ತರ ನಲಿವು-ನಿತ್ಯನರ್ತನ ಪರ್ವ’ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶುಕ್ರವಾರ ಪಾಲ್ಗೊಂಡು ಅವರು ಮಾತನಾಡಿದರು.

ವಿದುಷಿ ಡಾ.ತುಳಸಿರಾಮಚಂದ್ರ ಅವರು ನಾಟ್ಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ. ಅವರ ಪತಿ ರಾಮಚಂದ್ರ, ಇಂಜಿನಿಯರಿಂಗ್ ಪದವೀ ಧರರಾಗಿದ್ದರೂ ಗಮಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ವಿದುಷಿ ತುಳಸಿ ಅವರ ಕುಟುಂಬ ವಿವಿಧ ಪ್ರಕಾರಗಳ ಸಂಗಮ ಹಾಗೂ ಉತ್ತಮ ಸಂಸ್ಕಾರ ರೂಢಿಸಿ ಕೊಂಡ ಕುಟುಂಬ ಎಂದರೆ ತಪ್ಪಾಗ ಲಾರದು ಎಂದು ಪ್ರಶಂಶಿಸಿದರು.

ಉತ್ತಮ ಸಂಸ್ಕಾರ ರೂಢಿಸಿಕೊಂಡ ಕುಟುಂಬ ದೇಶ-ವಿದೇಶ ಎಲ್ಲೇ ನೆಲೆಸಿ ದ್ದರೂ ನಮ್ಮ ಸಂಸ್ಕಾರ ಬಿಟ್ಟು ಬೇರೆ ಸಂಸ್ಕøತಿಗೆ ಮಾರುಹೋಗುವುದಿಲ್ಲ. ಯುವಕ-ಯುವ ತಿಯರು ಭಾರತದ ಕಲೆ-ಸಾಹಿತ್ಯ-ನೃತ್ಯ ಕಲಿಕೆಗೆ ಹೆಚ್ಚಿನ ಮಹತ್ವ ನೀಡಬೇಕು. ಈ ಮೂಲಕ ನಮ್ಮ ಪರಂಪರೆ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದು ಉತ್ತೇಜಿಸಿದರು.

ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಹೆಚ್.ವಿ.ರಾಜೀವ್ ಮಾತನಾಡಿ, ಸಂಗೀತ-ನೃತ್ಯ ಕ್ಷೇತ್ರದಲ್ಲಿ ಒಂದು ವಿಶ್ವ ವಿದ್ಯಾನಿಲಯ ಮಾಡಬೇಕಾದ ಕೆಲಸವನ್ನು ವಿದುಷಿ ತುಳಸೀ ರಾಮಚಂದ್ರ ಮತ್ತವರ ತಂಡ  ನೃತ್ಯಾಲಯ ಅಕಾಡೆಮಿ ಮೂಲಕ ಶ್ರಮಿಸು ತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಪ್ರಸ್ತುತ ದೇಶ್ಯಾದಂತ್ಯ ಪೌರತ್ವ ಕಾಯಿದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಗಳ ನಡುವೆಯೂ ಕಲೆ ಮತ್ತು ಸಾಹಿತ್ಯ ವೀಕ್ಷಣೆಗೆ ಹೆಚ್ಚೆಚ್ಚು ಜನರು ಬರುತ್ತಾರೆ ಎಂದರೆ, ಇದು ಕಲಾ ಕ್ಷೇತ್ರಕ್ಕಿರುವ ಶಕ್ತಿ. ಆದ್ದರಿಂದ ಪ್ರತಿ ಕುಟುಂಬದಲ್ಲೂ ಮಕ್ಕಳ ಶಿಕ್ಷಣದ ಜೊತೆಗೆ ನೃತ್ಯ ಹಾಗೂ ಸಂಗೀತ ಕಲಿಕೆಗೆ ಪೋಷಕರು ಹೆಚ್ಚಿನ ಮುತು ವರ್ಜಿವಹಿಸಬೇಕು ಎಂದು ಸಲಹೆ ನೀಡಿ ದರು. ಸಮಾಜದಲ್ಲಿ ತಲೆದೋರುವ ಸಮಸ್ಯೆಗಳಿಗೆ ಸಾಂಸ್ಕøತಿಕ ಚಟುವಟಿಕೆಗಳು ಚಿಕಿತ್ಸೆಯಾಗಬಲ್ಲದು ಎಂದರು.

ಹಿರಿಯ ಸಾಧಕರಿಗೆ ಸನ್ಮಾನ: ಇದೇ ವೇಳೆ  ಹಿರಿಯ ಸಾಹಿತಿ ಡಾ.ಎನ್.ಎಸ್. ತಾರಾನಾಥ್(ಸಾಹಿತ್ಯ), ವಿದ್ವಾನ್ ಎಂ.ವೈ. ಪುಟ್ಟಣ್ಣಯ್ಯ (ರಂಗಸಂಗೀತ), ಡಾ.ಕೆ. ಕುಮಾರ್(ನೃತ್ಯ) ಹಾಗೂ ವಿದುಷಿ ಸುನೀತಾ ಚಂದ್ರಕುಮಾರ್(ಸುಗಮ ಸಂಗೀತ) ಅವರನ್ನು ಸನ್ಮಾನಿಸಲಾಯಿತು.

ವೇದಿಕೆ ಕಾರ್ಯಕ್ರಮದ ನಂತರ ಡಾ. ತುಳಸಿ ರಾಮಚಂದ್ರ ಅವರ ಪರಿಕಲ್ಪನೆ, ಸಂಗೀತ, ನೃತ್ಯ ಸಂಯೋಜನೆ ಮಾಡಿರುವ `ದೇಶಭಕ್ತಿಗೀತ ನರ್ತನ’ ಮತ್ತು `ಶಾಂತಿ ಮಂತ್ರ ಮತ್ತು ಮಂಗಳ’ ನೃತ್ಯರೂಪಕ ಅಮೋಘವಾಗಿ ಮೂಡಿಬಂತು. ನೃತ್ಯಾ ಲಯ ತಂಡದಿಂದ ಶ್ರೀ ಹರಿಭಜನೆ, ವಿದುಷಿ ಗೀತಾ ಶ್ರೀಧರ್ ಸೀತಾರ್, ವಿದ್ವಾನ್ ರಮೇಶ್ ಧನ್ನೂರ್ ತಬಲ ನುಡಿಸಿ, ಪ್ರೇಕ್ಷಕರ ಮೆಚ್ಚುಗೆ ಪಾತ್ರರಾದರು. ನೃತ್ಯಾಲಯದ ತಂಡದ ವಿದ್ಯಾರ್ಥಿಗಳಿಂದ `ಹರಿದಾಸ ನರ್ತನ ಪರ್ವ’ ನೃತ್ಯ ರೂಪಕ, ಗಣೇಶ ಸ್ತುತಿ, ಸ್ವರಜತಿ, ಶ್ರೀ ವೆಂಕಟೇಶ ಸುಳಾದಿ, ಕೋಲಾಟ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು. ವೇದಿಕೆಯಲ್ಲಿ ಉದ್ಯಮಿ ಕೆ.ವಿ.ಮೂರ್ತಿ ಇದ್ದರು. ವಿದುಷಿ ರೂಪಶ್ರೀ ಮಧುಸೂಧನ್ ನಿರೂಪಿಸಿದರು.

 

 

Translate »