ಶಿವಮೊಗ್ಗದಲ್ಲಿ ರಾಘವೇಂದ್ರರ ಗೆಲುವು ಶತಃಸಿದ್ಧ
ಮೈಸೂರು

ಶಿವಮೊಗ್ಗದಲ್ಲಿ ರಾಘವೇಂದ್ರರ ಗೆಲುವು ಶತಃಸಿದ್ಧ

April 5, 2019
  •  ಸಹೋದರ ವಿಜಯೇಂದ್ರ ವಿಶ್ವಾಸ
  • ಶ್ರೀನಿವಾಸ ಪ್ರಸಾದ್ ಗೆಲ್ಲುವುದು ಖಚಿತ

ಮೈಸೂರು: ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಸಲು ಮೈತ್ರಿ ನಾಯಕರು ಎಲ್ಲಾ ಅಸ್ತ್ರಗಳನ್ನು ಬಳಸುತ್ತಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಅವರ ಎಲ್ಲಾ ಅಸ್ತ್ರಗಳೂ ಮೂಲೆ ಸೇರಿವೆ. ಮುಂದಿನ ಚುನಾವಣೆಯಲ್ಲಿ ಗೆಲ್ಲೋದು ನಮ್ಮ ಸಹೋದರ ಬಿ.ವೈ. ರಾಘವೇಂದ್ರ ಅವರೇ ಎಂದು ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಬಿ.ವೈ.ವಿಜ ಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಗುರುವಾರ ಮಾಧ್ಯಮದವ ರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಏನಿದ್ದರೂ ಯಡಿಯೂರಪ್ಪ ಅವರದ್ದೇ ಹವಾ. ಕಳೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು ಬಿಜೆಪಿಯೇ. ಆದರೆ, ಗೆಲುವಿನ ಅಂತರ ಕಡಿಮೆ ಆಗಿತ್ತು ಅಷ್ಟೇ. ರಾಘವೇಂದ್ರರ ಮೇಲೆ ಜನರಿಗೆ ವಿಶ್ವಾಸ ಇದೆ. ಮತ್ತೆ ಗೆಲುವು ಸಾಧಿಸುತ್ತಾರೆ ಎಂದರು. ಮೈತ್ರಿ ನಾಯಕರು ಎಲ್ಲಾ ಅಸ್ತ್ರಗಳನ್ನು ಬಿಟ್ಟಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಅವರ ಎಲ್ಲಾ ಅಸ್ತ್ರಗಳೂ ಮೂಲೆ ಸೇರಿವೆ. ಹಾಗಾಗಿ ಸುಮಾರು 1.5 ಲಕ್ಷ ಅಂತರದಲ್ಲಿ ರಾಘವೇಂದ್ರ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದಲ್ಲಿ (ವರುಣಾ ಕ್ಷೇತ್ರ) ನಾನು ಅಭ್ಯರ್ಥಿಯಾಗಬೇಕೆಂದು ಸಾಕಷ್ಟು ಕೆಲಸ ಮಾಡಿದ್ದೆ. ಆಗ ಸಹಜವಾಗಿಯೇ ಪಕ್ಷದ ಮುಖಂಡರಲ್ಲಿ ನೋವು ಉಂಟಾಗಿತ್ತು. ಆದರೆ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಇನ್ನೂ ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ. ಎಲ್ಲರೂ ಪಕ್ಷ ಸಂಘಟನೆ ಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು. ನನ್ನ ನಾಯಕತ್ವದ ಪರೀಕ್ಷೆ ಮಾಡಿಕೊಳ್ಳುವಷ್ಟು ನಾನು ದೊಡ್ಡವನಲ್ಲ. ರಾಜ್ಯದಲ್ಲಿ ಯಡಿಯೂರಪ್ಪ, ವಿ. ಶ್ರೀನಿವಾಸಪ್ರಸಾದ್ ಅವರಂತಹ ದೊಡ್ಡ ನಾಯಕರು ಆಖಾಡದಲ್ಲಿದ್ದಾರೆ. ಅವರ ಪರ ಪ್ರಚಾರ ಮಾಡಲು ಬಂದಿದ್ದೇನೆ. ನಾನು ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯವ್ಯಾಪ್ತಿ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದೇನೆ ಎಂದು ಹೇಳಿದರು. ವಿ.ಶ್ರೀನಿವಾಸ ಪ್ರಸಾದ್ ಸರಳ ಸಜ್ಜನ ವ್ಯಕ್ತಿ.

ಅವರು ವಾಜಪೇಯಿ ಕಾಲದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಒಬ್ಬ ದಲಿತ ಮುಖಂಡರಾಗಿ, ಹಿರಿಯ ರಾಜಕಾರಣಿಯಾಗಿ ಎಲ್ಲಾ ಜಾತಿ ಸಮುದಾಯವನ್ನು ಸಮಾನವಾಗಿ ಕಂಡು ಜನರಿಗೆ ಹತ್ತಿರವಾಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಶ್ರೀನಿವಾಸ್ ಪ್ರಸಾದ್ ಅವರೇ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

Translate »