ಗುಂಗ್ರಾಲ್‍ಛತ್ರದಲ್ಲಿ ಮತದಾನ ಜಾಗೃತಿ
ಮೈಸೂರು

ಗುಂಗ್ರಾಲ್‍ಛತ್ರದಲ್ಲಿ ಮತದಾನ ಜಾಗೃತಿ

April 5, 2019

ಮೈಸೂರು: ಮೈಸೂರು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಗುಂಗ್ರಾಲ್‍ಛತ್ರ ಗ್ರಾಮ ಪಂಚಾಯಿತಿಯ ಪ್ರಮುಖ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಶಾಲಾ ಮಕ್ಕಳು ಮತ್ತು ಗ್ರಾಮಸ್ಥ ರಿಗೆ ತಾಪಂ ಸಹಾಯಕ ನಿರ್ದೇಶಕ ಕೃಷ್ಣ ಚುನಾವಣಾ ಪ್ರತಿಜ್ಞಾವಿಧಿ ಬೋಧಿಸಿ ಮತದಾನದ ಬಗ್ಗೆ ಅರಿವು ಮೂಡಿಸಿದರು.

ಗುರುವಾರ ಗುಂಗ್ರಾಲ್‍ಛತ್ರ ಗ್ರಾಮದ ಶಾಲಾ ಮಕ್ಕಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಗುಂಗ್ರಾಲ್ ಛತ್ರದ ಬೀದಿಗಳಲ್ಲಿ ಜಾಥಾ ನಡೆಸಿ ಕಡ್ಡಾಯ ಮತದಾನದ ಪೋಸ್ಟರ್ ಹಿಡಿದು ಮತ್ತು ನೈತಿಕ ಚುನಾವಣೆಯ ಘೋಷ ವಾಕ್ಯಗಳನ್ನು ಕೂಗಿ ಜನತೆಗೆ ತಪ್ಪದೇ ಮತ ಚಲಾಯಿಸುವಂತೆ ಅರಿವು ಮೂಡಿ ಸಿದರು. ನಂತರ ಮಾತನಾಡಿದ ಅವರು, 2019ರ ಏಪ್ರಿಲ್ 18 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿರುವ ಲೋಕಸಭಾ ಚುನಾವಣೆ ಯಲ್ಲಿ ಮತದಾರರು ಯಾವುದೇ ಆಮಿಷ ಗಳಿಗೆ ಒಳಗಾಗದೆ ನೈತಿಕ ಚುನಾವಣೆಗೆ ಬೆಂಬಲ ನೀಡಿ ಪ್ರಜಾಪ್ರಭುತ್ವವನ್ನು ಬಲ ಪಡಿಸುವ ನಿಟ್ಟಿನಲ್ಲಿ ಮತ ಚಲಾಯಿಸ ಬೇಕು ಎಂದು ತಿಳಿಸಿದರು.

ಮತದಾರ ಜಾಗೃತರಾಗಿ ತಮ್ಮ ಅಮೂಲ್ಯ ವಾದ ಮತವನ್ನು ನಿಮ್ಮ ಸಮಸ್ಯೆಗಳನ್ನು ಆಲಿಸುವ ಜನಪರ ಹಾಗೂ ಸಮಾಜ ಮುಖಿ ಚಿಂತನೆ ಹಾಗೂ ಕಾಳಜಿಯುಳ್ಳ ನಾಯಕನನ್ನು ನೀವು ಆರಿಸಿಕೊಳ್ಳುವ ಸಂವಿಧಾನ ಬದ್ಧವಾದ ಸ್ವತಂತ್ರಹಕ್ಕು ನಿಮ್ಮ ಕೈಯಲ್ಲಿದೆ ಎಂದು ಅವರು ಹೇಳಿದರು.

ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಗಳು ಕಂಡು ಬಂದರೆ ಸಿ-ವಿಜಿಲ್ ಚುನಾ ವಣಾ ಆ್ಯಪ್‍ನ್ನು ಡೌನ್‍ಲೋಡ್ ಮಾಡಿ ಕೊಂಡು ಚುನಾವಣಾ ಅಕ್ರಮಗಳ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ದೂರು ನೀಡ ಬಹುದು ಎಂದು ಮತದಾರರಿಗೆ ತಿಳಿಸಿ ದರು. ಸೆಕ್ಟರ್ ಅಧಿಕಾರಿ ಇರ್ಫಾನ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ವೃಷಬೇಂದ್ರಪ್ಪ, ಶಾಲಾ ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Translate »