ಮತದಾನ ಮಾಡದೇ ಪ್ರವಾಸಕ್ಕೆ ಹೋಗುವವರಿಗೆ ವಾಹನ ಕಲ್ಪಿಸಲ್ಲ!
ಮೈಸೂರು

ಮತದಾನ ಮಾಡದೇ ಪ್ರವಾಸಕ್ಕೆ ಹೋಗುವವರಿಗೆ ವಾಹನ ಕಲ್ಪಿಸಲ್ಲ!

April 5, 2019

ಮೈಸೂರು: ಲೋಕಸಭಾ ಚುನಾವಣೆ ಮತದಾನ ಮಾಡದೇ, ಸಾಲು-ಸಾಲು ರಜೆ ಹಿನ್ನೆಲೆಯಲ್ಲಿ ಮಜಾ ಮಾಡಲು ಪ್ರವಾಸಕ್ಕೆಂದು ತೆರಳಲು ಬಯಸುವವರಿಗೆ ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ವಾಹನ ನೀಡದಿರಲು ನಿರ್ಧ ರಿಸಿ, `ನೇಷನ್ ಫಸ್ಟ್, ವೆಕೇಷನ್ ನೆಕ್ಸ್ಟ್’ ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರು ವಾರ ಸುದ್ಧಿಗೋಷ್ಠಿಯಲ್ಲಿ ಮೈಸೂರು ಟ್ರಾವೆಲ್ಸ್ ಅಸೋಸಿ ಯೇಷನ್ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ಮಾತನಾಡಿ, ಮತದಾನದ ಮಹತ್ವ ತಿಳಿಸುವ ನಿಟ್ಟಿನಲ್ಲಿ ಟ್ರಾವೆಲ್ಸ್ ಅಸೋಸಿಯೇಷನ್ ಸಂಸ್ಥೆ ಈ ಅಭಿಯಾನ ಕೈಗೊಂಡಿದೆ. `ನೇಷನ್ ಫಸ್ಟ್, ವೆಕೇಷನ್ ನೆಕ್ಸ್ಟ್’ ಹೆಸರಿನಲ್ಲಿ ಈಗಾ ಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ನಡೆಸಿರುವ ಅಭಿಯಾನಕ್ಕೆ ಎಲ್ಲಾ ಪಕ್ಷಗಳ ಹಿರಿಯ ಧುರೀಣರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಹಿರಿಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ನಮ್ಮ ಸಂಸ್ಥೆ ಮತದಾನ ಜಾಗೃತಿ ಮೂಡಿಸುವುದೊಂದೇ ಕೆಲಸ ಮಾಡುತ್ತಿದ್ದು, ಯಾವುದೇ ಪಕ್ಷದ ಪರವಾಗಿ ಮತ ಯಾಚಿಸುವುದಿಲ್ಲ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಕಡಿಮೆ ಮತ ದಾನವಾಗಿದೆ. ರಜೆ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ತೆರಳಲು ಬೆಂಗಳೂರಿನ ಐಟಿ-ಬಿಟಿ ಕ್ಷೇತ್ರದಲ್ಲಿ ಕೆಲಸ ಮಾಡು ವವರು ಉತ್ಸುಕರಾಗುತ್ತಾರೆ. ಅವರು ಮತದಾನದ ಜವಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಯಲ್ಲಿ ಈ ಅಭಿಯಾನ ಕೈಗೊಳ್ಳಲಾಗಿದೆ ಎಂದರು.

ಯುವ ಸಮುದಾಯ ಮತದಾನ ದಿನವನ್ನು ರಜೆ ಎಂದು ಭಾವಿಸಿ ಮತದಾನ ಮಾಡದೇ ಪ್ರವಾಸ ಹೋಗುತ್ತಾರೆ. ಆ ಮೂಲಕ ಸಂವಿಧಾನ ಬದ್ಧ ಕರ್ತವ್ಯ ಮರೆಯುತ್ತಾರೆ. ಆದರಿಂದ ಮತದಾನ ಪ್ರಮಾಣ ವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತದಾನ ನಡೆಯುವ ದಿನ ವಾಹನ ಸೇವೆ ನೀಡದಿರಲು ಅಸೋಸಿ ಯೇಷನ್ ನಿರ್ಧರಿಸಿದೆ. ಏ.18ರ ಹಿಂದಿನ ದಿನ ವಾಹನ ನೀಡು ವುದಿಲ್ಲ. ಸಾವು, ನೋವು ಹಾಗೂ ಮತದಾನ ಮಾಡಲು ಬೇರೆ ಊರಿಗೆ ತೆರಳುವವರಿಗೆ ಮಾತ್ರ ವಾಹನ ನೀಡುತ್ತೇವೆ. ಸಾಂಸ್ಕøತಿಕ ನಗರಿ ಮೈಸೂರು, ಕೊಡಗು, ಊಟಿ, ವೈನಾಡು ಸೇರಿದಂತೆ ಈ ಭಾಗಕ್ಕೆ ಹೆಚ್ಚಾಗಿ ಜನ ಭೇಟಿ ನೀಡುತ್ತಿದ್ದು, ಈ ಪ್ರದೇಶವನ್ನು ಗುರಿಯಾಗಿಸಿಕೊಂಡು ನಾವು ಮತದಾನ ಮಾಡ ದವರಿಗೆ ವಾಹನ ಸೇವೆ ನಿರಾಕರಿಸುತ್ತೇವೆ. ನಮಗೆ ಎಷ್ಟೇ ನಷ್ಟವಾದರೂ ಪರವಾಗಿಲ್ಲ. ಸಂಪೂರ್ಣ ಮತದಾನ ನಡೆಯಬೇಕೆಂದು ನಮ್ಮ ಉದ್ದೇಶ ಎಂದು ಇದೇ ವೇಳೆ ತಿಳಿಸಿದರು.

ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ವ್ಯಾಪ್ತಿ ಯಲ್ಲಿ 1500 ವಾಹನಗಳಿವೆ. ಸಾಮಾಜಿಕ ಜಾಲ ತಾಣಗಳು, ಬುಕ್ಕಿಂಗ್ ಮಾಡುವವರಿಗೆ ಇ-ಮೇಲ್ ಮೂಲಕ ಸಂದೇಶ ಕಳಿಸಲಾಗುತ್ತಿದೆ. ಹೋಟೆಲ್ ಮಾಲೀಕರ ಸಂಘಕ್ಕೂ ಮನವಿ ಮಾಡಿ, ಮತದಾನದ ದಿನ ಮತ್ತು ಹಿಂದಿನ ದಿನ ಹೋಟೆಲ್ ಬುಕ್ಕಿಂಗ್‍ಗೆ ಅವಕಾಶ ಮಾಡಿಕೊಡದಂತೆ ಕೋರಲಾಗಿದೆ. ಪ್ರತಿ ಯೊಂದು ಸಂಸ್ಥೆಯು ಈ ಬಗ್ಗೆ ಧ್ವನಿಯಾಗಬೇಕು. ನಮ್ಮ ನಿರ್ಧಾರದ ಕುರಿತು ಸಾಮಾಜಿಕ ಜಾಲ ತಾಣ ಗಳಲ್ಲಿ ಜಾಗೃತಿ ಮೂಡಿಸುತ್ತಿz್ದÉೀವೆ ಎಂದು ವಿವರಿಸಿ ದರು. ಸುದ್ದಿಗೋಷ್ಠಿಯಲ್ಲಿ ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಉಪಾಧ್ಯP್ಷÀ ಎಚ್.ಶಿವಲಿಂಗಯ್ಯ, ಕಾರ್ಯದರ್ಶಿ ಎ.ಸಿ.ರವಿ, ನಾಗೇಶ್, ಮೈಸೂರು ಟ್ರಾವೆಲ್ ಮಾರ್ಟ್ ಜಯಕುಮಾರ್ ಇದ್ದರು.

Translate »