ಚುನಾವಣಾ ಆಯೋಗದ ಭರ್ಜರಿ ಬೇಟೆ: 1,460 ಕೋಟಿ ಮೌಲ್ಯದ ಹಣ, ಮದ್ಯ, ಮಾದಕ ವಸ್ತು ವಶ
ಮೈಸೂರು

ಚುನಾವಣಾ ಆಯೋಗದ ಭರ್ಜರಿ ಬೇಟೆ: 1,460 ಕೋಟಿ ಮೌಲ್ಯದ ಹಣ, ಮದ್ಯ, ಮಾದಕ ವಸ್ತು ವಶ

April 5, 2019

ನವದೆಹಲಿ: ಲೋಕಸಭಾ ಚುನಾವಣೆ ನಿಮಿತ್ತ ರಾಜಕೀಯ ನಾಯಕರ ಮೇಲೆ ಕಣ್ಣಿಟ್ಟಿರುವ ಚುನಾವಣಾ ಆಯೋಗ ಭರ್ಜರಿ ಬೇಟೆಯಾಡಿದ್ದು, ಈವರೆಗೂ ಬರೋಬ್ಬರಿ 1460 ಕೋಟಿ ಮೌಲ್ಯದ ಹಣ, ಮದ್ಯ ಮತ್ತು ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದೆ.
ನೀತಿ ಸಂಹಿತೆ ಜಾರಿಗೆ ಬಂದ ದಿನದಿಂದ ಈವರೆಗೂ ಆಯೋಗದ ಅಧಿಕಾರಿಗಳು ದೇಶಾದ್ಯಂತ ಬರೋಬ್ಬರಿ 1460 ಕೋಟಿ ಮೌಲ್ಯದ ಹಣ, ಮದ್ಯ ಮತ್ತು ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಮತದಾರರಿಗೆ ಹಂಚಲು ಮತ್ತು ಇತರೆ ಕಾರ್ಯಗಳಿಗಾಗಿ ಅಕ್ರಮವಾಗಿ ತರಲಾಗುತ್ತಿದ್ದ 377.511 ಕೋಟಿ ಹಣವನ್ನು ಅಧಿಕಾರಿ ಗಳು ವಶಕ್ಕೆ ಪಡೆದಿದ್ದಾರೆ. ಅಂತೆಯೇ ಸುಮಾರು 157 ಕೋಟಿ ಮೌಲ್ಯದ ಮದ್ಯ, 705 ಕೋಟಿ ಮೌಲ್ಯದ ಮಾದಕ ವಸ್ತುಗಳು, 312 ಕೋಟಿ ಮೌಲ್ಯದ ಅಮೂಲ್ಯ ಲೋಹದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಇದು ಈ ವರೆಗಿನ ದಾಳಿ ವರದಿಯಾಗಿದ್ದು, ಈ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Translate »