ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದಾರೆ: ಸಿ.ಪುಟ್ಟರಂಗಶೆಟ್ಟಿ
ಚಾಮರಾಜನಗರ

ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದಾರೆ: ಸಿ.ಪುಟ್ಟರಂಗಶೆಟ್ಟಿ

March 23, 2019

ಚಾಮರಾಜನಗರ: ಮುಂಬರುವ ಲೋಕಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಆಗಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಚಂದಕವಾಡಿಯಲ್ಲಿ ಚಾಮರಾಜ ನಗರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಲೋಕಸಭಾ ಚುನಾವಣಾ ಹಿನ್ನೆಲೆ ನಡೆದ ಚಂದಕವಾಡಿ ಮತ್ತು ಹರದನಹಳ್ಳಿ ಜಿಪಂ ಕ್ಷೇತ್ರದ ವ್ಯಾಪ್ತಿಯ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಎಲ್ಲಾ ವರ್ಗದ ಸಮುದಾ ಯದವರಿಗೂ ಸಮಪಾಲು-ಸಮಬಾಳು ಕೊಟ್ಟಿದೆ. ಕಾಂಗ್ರೆಸ್‍ನ ಮನಮೋಹನ್ ಸಿಂಗ್ ಅವರು ನುಡಿದಂತೆ ನಡೆದರು. ಪ್ರಣಾಳಿಕೆಯ ಆಶಯದಂತೆ ದೇಶದಲ್ಲಿ ಜನಪರ ಕೆಲಸ ಮಾಡಿ ದೇಶಕ್ಕೆ ಸುಸೂತ್ರ ಆಡಳಿತ ನೀಡಿದರು. ಆದರೆ ಕಳೆದ 5 ವರ್ಷದಿಂದ ದೇಶದಲ್ಲಿ ಆಡಳಿತ ನಡೆಸು ತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ವಿದೇಶ ಪ್ರವಾಸ ಮಾಡಿ ಕಾಲಹರಣ ಮಾಡುವುದೇ ದೇಶದ ಅಭಿವೃದ್ಧಿಯೇ ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ವರ್ಷ ಕಾಲ ಉತ್ತಮ ಆಡಳಿತ ಮಾಡುವ ಮೂಲಕ ಚುನಾವಣಾ ಪೂರ್ವದಲ್ಲಿ ಕೊಟ್ಟ ಪ್ರಣಾಳಿಕೆಯಂತೆ 160 ಆಶ್ವಾಸನೆಗಳನ್ನು ಈಡೇರಿಸಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲೂ ಮುಖ್ಯ ಮಂತ್ರಿ ಹೆಚ್‍ಡಿಕೆ ಅವರು ರೈತರ ಸಾಲ ಮನ್ನಾ ಮಾಡಿದ್ದಾರೆ. ಆದ್ದರಿಂದ ಪಕ್ಷದ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಜನ ಪರ ಯೋಜನೆಗಳು ಹಾಗೂ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮತ ದಾರರಲ್ಲಿ ಮನವರಿಕೆ ಮಾಡಿಕೊಡುವ ಮೂಲಕ ಧ್ರುವನಾರಾಯಣ್ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
ವರುಣಾ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತ ನಾಡಿ, ಸ್ವಾಭಿಮಾನಿ ಎಂದು ಹೇಳಿ ಕೊಂಡು ಸಂವಿಧಾನ ವಿರೋಧಿಸುವ ಮನು ಶಾಸ್ತ್ರ ಅನುಷ್ಠಾನಗೊಳಿಸುವ ಬಿಜೆಪಿಗೆ ಹೋಗಿರುವುದೇ ಸ್ವಾಭಿಮಾನ ಎಂದು ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ವಿರುದ್ಧ ಪರೋಕ್ಷವಾಗಿ ಟೀಕಿಸಿದರು.

ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ನಮ್ಮ ತಂದೆ ಬಿ.ರಾಚಯ್ಯ ರವರು ಅರಣ್ಯ ಸಚಿವರಾಗಿದ್ದ ಸಂದರ್ಭ ದಲ್ಲಿ ಜ್ಯೋತಿಗೌಡನಪುರ ಭಾಗದಲ್ಲಿ ಆದಿ ಕರ್ನಾಟಕ ಜನಾಂಗಕ್ಕೆ 50 ಎಕರೆ ಜಮೀನು ನೀಡಿದ್ದರು. ಅದನ್ನು ಜನಾಂಗಕ್ಕೆ ಉಳಿಸಿ ಕೊಡುವಲ್ಲಿ ಕಂದಾಯ ಸಚಿವರಾಗಿದ್ದ ವಿ.ಶ್ರೀನಿವಾಸಪ್ರಸಾದ್ ವಿಫಲರಾದರು. ಇಂತಹ ವ್ಯಕ್ತಿಯನ್ನು ಗೆಲ್ಲಿಸೋದರಿಂದ ಯಾವುದೇ ಪ್ರಯೋಜನವಿಲ್ಲ. ಸದಾ ಅಭಿ ವೃದ್ಧಿ ಚಟುವಟಿಕೆಯಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಅವ ರನ್ನು ಚಂದಕವಾಡಿ ಭಾಗದಿಂದ ಅತ್ಯಧಿಕ ಮತದಿಂದ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.

ಮತ್ತೊಮ್ಮೆ ಅವಕಾಶ ಕೊಡಿ: ಕಾಂಗ್ರೆಸ್ ಅಭ್ಯರ್ಥಿ ಸಂಸದ ಆರ್.ಧ್ರುವನಾರಾಯಣ್ ಮಾತನಾಡಿ, ಚಂದಕ ವಾಡಿ ರಾಜಕೀಯ ಜನ್ಮ ನೀಡಿದ ಪುಣ್ಯ ಭೂಮಿ. ಮತದಾರರ ಆಶೀರ್ವಾದದಿಂದ ಕಳದ 15 ವರ್ಷ ದಿಂದ ಕೈಲಾದ ಕೆಲಸವನ್ನು ಪ್ರಾಮಾಣಿಕ ವಾಗಿ ಮಾಡಿಕೊಂಡು ಬಂದಿದ್ದೇನೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಹೊಸ ಹೊಸ ನಾನಾ ಯೋಜನೆಗಳನ್ನು ಪಕ್ಷದ ಶಾಸಕರ ಜತೆಯಲ್ಲಿ ತರುವ ಮೂಲಕ ಜಿಲ್ಲೆಯ ಅಭಿವೃದ್ದಿ ಕೆಲಸ ಮಾಡಿದ್ದೇನೆ. ಚಾಮರಾಜನಗರ, ಗುಂಡ್ಲುಪೇಟೆ ಹಾಗೂ ಯಳಂದೂರು, ಕೊಳ್ಳೇಗಾಲದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮಾಡಿದ್ದೇನೆ. ರಾಷ್ಟ್ರೀಯ ಹೆದ್ದಾರಿ 209 ಅಭಿವೃದ್ಧಿಪಡಿಸ ಲಾಗಿದೆ ಜಿಲ್ಲೆ ಎಲ್ಲಾ ಕಡೆ ಬೈಪಾಸ್ ನಿರ್ಮಾ ಣಕ್ಕೆ ಒತ್ತು ನೀಡಲಾಗಿದ್ದು, ಶೈಕ್ಷಣಿಕ ಅಭಿ ವೃದ್ಧಿಗಾಗಿ ಜಿಲ್ಲೆಯ ಕೇಂದ್ರೀಯ ವಿದ್ಯಾ ಲಯ, ನಳಂದ ವಿಶ್ವವಿದ್ಯಾನಿಲಯ, ಕಾನೂನು ಕಾಲೇಜು, ಕೃಷಿ ಕಾಲೇಜು ಮಂಜೂರು ಮಾಡಿಸಿದ್ದು, ಜಿಲ್ಲೆಯನ್ನು ಮೇಲೆ ತರುವ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುವ ಹುಮ್ಮಸ್ಸು ಹೊಂದಿದ್ದೇನೆ. ಆದ್ದರಿಂದ ಮತ್ತೊಮ್ಮೆ ನನಗೊಂದು ಅವಕಾಶ ಮಾಡಿಕೊಡಬೇಕು ಎಂದು ಧ್ರುವನಾರಾಯಣ್ ಅವರು ಮತದಾರ ರಲ್ಲಿ ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಧರ್ಮಸೇನಾ, ಕೆಪಿಸಿಸಿ ಕಾರ್ಯದರ್ಶಿ ಎಸ್.ಸಿ.ಬಸವ ರಾಜು, ನಗರಸಭಾ ಮಾಜಿ ಅಧ್ಯಕ್ಷ ಎಸ್.ನಂಜುಂಡಸ್ವಾಮಿ ಮಾತನಾಡಿದರು. ಜಿಪಂ ಸದಸ್ಯ ಸದಾಶಿವ ಮೂರ್ತಿ, ಮಾಜಿ ಸದಸ್ಯ ಅರಕಲವಾಡಿ ಸೋಮ ನಾಯಕ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಜಿಲ್ಲಾ ಪ್ರಧಾನಿ ಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್.ಮಹದೇವು, ಚೂಡಾ ಮಾಜಿ ಅಧ್ಯಕ್ಷ ಸೈಯದ್ ರಫೀ, ಜಿಲ್ಲಾ ಮಹಿಳಾ ಅಧ್ಯಕ್ಷೆ ಲತಾಜಯಣ್ಣ, ನಗರ ಘಟಕ ಅಧ್ಯಕ್ಷೆ ಶಕುಂತಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್, ಗುರುಸ್ವಾಮಿ, ಹೆಚ್.ವಿ.ಚಂದ್ರು, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್, ತಾಪಂ ಸದಸ್ಯರಾದ ಮಹದೇವ ಶೆಟ್ಟಿ, ಕುಮಾರ ನಾಯಕ್, ಪುಟ್ಟಸ್ವಾಮಿ, ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ, ರಾಜಪ್ಪ, ಮುಖಂಡರಾದ ಕಾಗಲವಾಡಿ ಚಂದ್ರು, ಬಸವರಾಜನಾಯಕ, ಕಪಿನಿನಾಯಕ, ಎಂ.ಶಿವಮೂರ್ತಿ, ಸುಬ್ಬು ನಾಯಕ, ಉಮೇಶ್, ಬಸಪ್ಪನಪಾಳ್ಯ ನಟರಾಜು, ಕಂದಹಳ್ಳಿ ನಂಜುಂಡಸ್ವಾಮಿ ಇತರರಿದ್ದರು.

Translate »