ತಮ್ಮ ಹುಟ್ಟಿನ ಸಾಕ್ಷ್ಯ ಹೇಳಿದ್ದ ನರ್ಸ್‍ಗೆ ರಾಹುಲ್ ಗಾಂಧಿ ಪ್ರೀತಿಯ ಅಪ್ಪುಗೆ!
ಮೈಸೂರು

ತಮ್ಮ ಹುಟ್ಟಿನ ಸಾಕ್ಷ್ಯ ಹೇಳಿದ್ದ ನರ್ಸ್‍ಗೆ ರಾಹುಲ್ ಗಾಂಧಿ ಪ್ರೀತಿಯ ಅಪ್ಪುಗೆ!

June 10, 2019

ವಯನಾಡು: ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪೌರತ್ವ ವಿವಾದ ಭುಗಿಲೆದ್ದಿತ್ತು. ಈ ಸಂದರ್ಭ ದಲ್ಲಿ ಕೇರಳದ ನಿವೃತ್ತ ನರ್ಸ್ ರಾಜಮ್ಮ, ರಾಹುಲ್ ಹುಟ್ಟಿದ ಸಂದರ್ಭ ನವಜಾತ ಶಿಶುವನ್ನು ಮೊದಲು ಕೈಗಳಲ್ಲಿ ಎತ್ತಿಕೊಂಡಿದ್ದ ಖುಷಿಯನ್ನು ಹಂಚಿಕೊಂಡಿದ್ದರು.

ನಿವೃತ್ತ ನರ್ಸ್ ರಾಜಮ್ಮ ಅವರು ಸದ್ಯ ವಯನಾಡುವಿನಲ್ಲಿ ವಾಸವಾಗಿದ್ದಾರೆ. ಇನ್ನು ಕಳೆದ ಲೋಕಸಭೆ ಚುನಾವಣೆಯಲ್ಲಿ ಕೇರಳದ ವಯನಾಡಿನಿಂದ ಸ್ಪರ್ಧಿಸಿ ಗೆದ್ದು ಬಂದಿ ರುವ ರಾಹುಲ್ ಗಾಂಧಿ ವಯನಾಡಿಗೆ ಭೇಟಿ ನೀಡಿದಾಗ ರಾಜಮ್ಮ ಅವರನ್ನು ಭೇಟಿ ಮಾಡಿ ಎದೆಗೆ ಅಪ್ಪಿಕೊಂಡಿದ್ದು ಈ ಸಂದರ್ಭದಲ್ಲಿ ರಾಜಮ್ಮ ಭಾವೋದ್ವೇಗಕ್ಕೊಳಗಾದರು.

1970ರ ಜೂ.19ರಂದು ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ರಾಹುಲ್ ಹುಟ್ಟಿದಾಗ ಅಲ್ಲಿ ತರಬೇತಿ ನಿರತ ನರ್ಸ್ ಆಗಿದ್ದ ರಾಜಮ್ಮ, ರಾಹುಲ್ ಗಾಂಧಿಯನ್ನು ಮೊದಲ ಬಾರಿಗೆ ಎತ್ತಿಕೊಂಡಿದ್ದರು. ಇನ್ನು ರಾಹುಲ್ ಅವರ ಪೌರತ್ವವನ್ನು ಯಾರೂ ಪ್ರಶ್ನಿಸಬಾರದು ಎಂದು ರಾಜಮ್ಮ ಈ ಹಿಂದೆ ಹೇಳಿದ್ದರು.

Translate »