ಇಂದು ರಾಜ್ಯಾದ್ಯಂತ ರೈತರಿಂದ ಹೆದ್ದಾರಿ ತಡೆ
ಮೈಸೂರು

ಇಂದು ರಾಜ್ಯಾದ್ಯಂತ ರೈತರಿಂದ ಹೆದ್ದಾರಿ ತಡೆ

June 10, 2019

ಬೆಂಗಳೂರು: ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಕೈಬಿಡುವುದು ಸೇರಿ ದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯ ರೈತ ಸಂಘದಿಂದ ಸೋಮವಾರ (ನಾಳೆ) ರಾಜ್ಯವ್ಯಾಪಿ ಹೆದ್ದಾರಿ ತಡೆ ಮತ್ತು ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರು-ಚೆನ್ನೈ, ಬೆಂಗಳೂರು-ಮಂಗ ಳೂರು, ಪುಣೆ ಹೆದ್ದಾರಿಗಳಲ್ಲಿ ನಾಳೆ ರಸ್ತೆ ಸಂಚಾರ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ. ರೈತ ಸಂಘದ ಹೆದ್ದಾರಿ ಬಂದ್ ಕ್ರಮಕ್ಕೆ ಹಸಿರು ಸೇನೆ ಸಂಘಟನೆ ಕೂಡ ಬೆಂಬಲ ವ್ಯಕ್ತಪಡಿಸಿದೆ. ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆಯವರೆಗೂ ರಾಜ್ಯಾ ದ್ಯಂತ ಪ್ರತಿಭಟನೆಗಳು ನಡೆಯಲಿವೆ.

ಬೆಂಗಳೂರು ಹೊರವಲಯದ ದೇವನ ಹಳ್ಳಿ ಬಳಿಯ ಕೆಂಪೇಗೌಡ ವೃತ್ತ, ಆನೇ ಕಲ್ ಬಳಿಯ ಬೊಮ್ಮಸಂದ್ರ, ಚಿಕ್ಕಬಳ್ಳಾ ಪುರದ ಚದ್ಲಾಪುರ ಕ್ರಾಸ್‍ನಲ್ಲಿ ರೈತ ಸಂಘ ಟನೆಗಳ ಸದಸ್ಯರು ಬೆಳಿಗ್ಗೆ 6 ಗಂಟೆ ಯಿಂದಲೇ ಹೆದ್ದಾರಿ ಬಂದ್ ಮಾಡಿ ಪ್ರತಿ ಭಟನೆ ನಡೆಸಲಿದ್ದಾರೆ. ಮೈಸೂರಿನಿಂದ ಮಂಗಳೂರಿಗೆ ಹೋಗುವ ಹುಣಸೂರು ಮಾರ್ಗದ ಹೆದ್ದಾರಿ; ಮೈಸೂರಿನಿಂದ ಚಾಮ ರಾಜನಗರ ಮಾರ್ಗದ ಕೊಯಮತ್ತೂರು ಹೆದ್ದಾರಿ; ರಾಯಚೂರಿನ ಶಕ್ತಿನಗರ, ಕಲ ಬುರ್ಗಿಯ ಜೇವರ್ಗಿ ಬಳಿಯ ಹೆದ್ದಾರಿ ಗಳು ನಾಳೆ ಬಂದ್ ಆಗಲಿವೆ. ಹಾಗೆಯೇ, ಹಾವೇರಿಯ ದೇವಗಿರಿ ಕ್ರಾಸ್‍ನ ಪೂನಾ ರಾಷ್ಟ್ರೀಯ ಹೆದ್ದಾರಿ 4; ಹಾಸನದ ಭುವನಹಳ್ಳಿ ಸಮೀಪದ ಬೆಂಗಳೂರು -ಮಂಗಳೂರು ರಾ. ಹೆದ್ದಾರಿ 72ರಲ್ಲಿ ರೈತರು ರಸ್ತೆ ತಡೆ ನಡೆಸಲಿದ್ದಾರೆ. ಚಿತ್ರದುರ್ಗದ ಹೊಸ ದುರ್ಗ, ಹೊಳಲ್ಕೆರೆ, ಚಳ್ಳಕೆರೆ ಬಳಿಯ ಹೆದ್ದಾರಿ; ಬೆಳಗಾವಿಯ ಹಲಗಾ ಗ್ರಾಮದಲ್ಲಿ ರುವ ಹೆದ್ದಾರಿ; ಬಳ್ಳಾರಿಯ ಟಿಬಿ ಡ್ಯಾಮ್, ಕಲಬುರ್‍ಇಯ ಗುತ್ತಿ; ರಾಯಚೂರಿನ ವಡ್ಲೂರು ಕ್ರಾಸ್, ಕೋಲಾರದ ಕೊಂಡರಾಜನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಸಂಚಾರ ತಡೆದು ರೈತರು ಪ್ರತಿಭಟನೆ ನಡೆಸಲಿದ್ದಾರೆ. ಕೆಲ ಕಡೆ ಬೆಳಗ್ಗೆ 6ಗಂಟೆಗೇ ಪ್ರತಿಭಟನೆ ಆರಂಭವಾದರೆ, ಕೆಲ ಸ್ಥಳಗಳಲ್ಲಿ 9-10 ಗಂಟೆಯಿಂದ ಬಂದ್ ನಡೆಯಲಿದೆ.

ರೈತರ ಕೆಲ ಬೇಡಿಕೆಗಳು: * ಭೂಸ್ವಾಧೀನ ಕಾಯ್ದೆಯ ತಿದ್ದುಪಡಿ ಕೈಬಿಡಬೇಕು;
* ರೈತರ ಸಾಲ ಮನ್ನಾ ಆಗಬೇಕು; ಬರ ಪರಿಹಾರ ಸಿಗಬೇಕು; * ಬಳ್ಳಾರಿಯಲ್ಲಿ ಜಿಂದಾಲ್‍ಗೆ ನೀಡಲಾದ ಭೂ ಪರಭಾರೆಯನ್ನು ಹಿಂಪಡೆಯಬೇಕು; * ರೈತರಿಗೆ ಕಬ್ಬಿನ ಬಾಕಿ ಹಣ ತತ್‍ಕ್ಷಣ ನೀಡಬೇಕು ರೈತರ ಬೇಡಿಕೆಗಳಲ್ಲಿ ಭೂಸ್ವಾಧೀನ ಕಾಯ್ದೆ ಪ್ರಮುಖ ವಾದುದು. ಕುಮಾರಸ್ವಾಮಿ ಸರಕಾರವು ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದು ರೈತರನ್ನು ಆಕ್ರೋಶಗೊಳಿಸಿದೆ. ಜೆಡಿಎಸ್‍ನವರು ರಿಯಲ್ ಎಸ್ಟೇಟ್ ಉದ್ಯಮದವರೊಂದಿಗೆ ಶಾಮೀಲಾಗಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಗಂಭೀರವಾಗಿ ಆರೋಪಿಸಿದ್ದಾರೆ. ಅಧಿಕಾರದ ಆಸೆಗೆ ಕಾಂಗ್ರೆಸ್ ನವರೂ ಕೂಡ ತಿದ್ದುಪಡಿ ಬಗ್ಗೆ ಚಕಾರ ಎತ್ತುತ್ತಿಲ್ಲ. ತಿದ್ದುಪಡಿ ಕೈಬಿಡದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ. ನಾಳೆಯ ಪ್ರತಿಭಟನೆಯ ವೇಳೆ ಏನೇ ಅವಘಡವಾದರೂ ಅದಕ್ಕೆ ಮೈತ್ರಿ ಸರ್ಕಾರವೇ ಹೊಣೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.

ಸಾಲ ಮನ್ನಾ: ರಾಜ್ಯ ಸರಕಾರವು ಸಹಕಾರ ಬ್ಯಾಂಕುಗಳಲ್ಲಿರುವ ರೈತರ 1 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಿದೆ. ಅನೇಕ ಕಡೆ ಇದು ಅನುಷ್ಠಾನಕ್ಕೆ ಬರುತ್ತಿದೆ. ಆದರೆ, ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಖಾಸಗಿ ಬ್ಯಾಂಕುಗಳಲ್ಲಿ ಸಾಲ ಪಡೆದುಕೊಂಡಿರುವ ರೈತರ ಬವಣೆಯನ್ನು ಕೇಳುವವರಿಲ್ಲವಾಗಿದೆ. ಈ ಹಣಕಾಸು ಸಂಸ್ಥೆಗಳಿಂದ ರೈತರಿಗೆ ನಿರಂತರ ನೋಟೀಸ್ ಬರುತ್ತಿದೆ. ರೈತರು ನಿತ್ಯ ಕಿರುಕುಳ ಅನುಭವಿಸುವಂತಾಗಿದೆ. ರೈತರ ಈ ಸಾಲವನ್ನೂ ಮನ್ನಾ ಮಾಡಬೇಕೆಂದು ರೈತ ಸಂಘಟನೆಗಳು ರಾಜ್ಯ ಮತ್ತು ಕೇಂದ್ರ ಸರಕಾರಗಳನ್ನು ಆಗ್ರಹಿಸುತ್ತಿವೆ. ಇನ್ನು, ಬಳ್ಳಾರಿಯಲ್ಲಿ ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ಕೊಟ್ಟಿರುವ ಕ್ರಮಕ್ಕೂ ಆಕ್ಷೇಪ ವ್ಯಕ್ತಪಡಿಸಿರುವ ರೈತರು, ರಾಜ್ಯ ಸರಕಾರ ಕೂಡಲೇ ಈ ಕ್ರಮವನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತಿವೆ.

 

Translate »