ರಂಗನತಿಟ್ಟಿನಲ್ಲಿ ಪಕ್ಷಿ ಗಣತಿ
ಮೈಸೂರು

ರಂಗನತಿಟ್ಟಿನಲ್ಲಿ ಪಕ್ಷಿ ಗಣತಿ

June 10, 2019

ಮೈಸೂರು: ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ಭಾನುವಾರ ಅರಣ್ಯ ಇಲಾಖೆ ವತಿಯಿಂದ ನಡೆದ ಪಕ್ಷಿಗಳ ಗಣತಿ ಕಾರ್ಯದಲ್ಲಿ 65ಕ್ಕೂ ಹೆಚ್ಚು ತಳಿಯ ಸಾವಿರಾರು ಪಕ್ಷಿಗಳು ಗಣತಿದಾರರ ಕಣ್ಣಿಗೆ ಬಿದ್ದವು.
ಪಕ್ಷಿಗಳ ಸ್ವರ್ಗ ಎನಿಸಿರುವ ರಂಗನತಿಟ್ಟು ಪಕ್ಷಿ ಧಾಮವು ವರ್ಷದಿಂದ ವರ್ಷಕ್ಕೆ ಬಗೆಬಗೆಯ ಹಾಗೂ ಅಪರೂಪದ ಪಕ್ಷಿಗಳನ್ನು ಸೆಳೆಯುತ್ತಿದ್ದು, ಪ್ರವಾಸಿ ಗರಿಗೆ ಹಾಗೂ ಪಕ್ಷಿ ಪ್ರಿಯರಿಗೆ ಮುದ ನೀಡುವ ವಾತಾವರಣ ಸೃಷ್ಟಿಸಿದೆ.

ಪಕ್ಷಿಧಾಮದಲ್ಲಿ ಪಕ್ಷಿಗಳಿಗೆ ಸಂತಾನೋತ್ಪತ್ತಿ ಪ್ರಕ್ರಿಯೆಗೆ ಉತ್ತಮವಾದ ವಾತಾವರಣ ವಿದ್ದು, ಕುಡಿಯಲು ನೀರು, ಸುರಕ್ಷತೆ ಹಾಗೂ ಆಹಾರ ಲಭ್ಯವಿರುವ ತಾಣ ಪಕ್ಷಿ ಧಾಮ ಆಗಿರುವುದನ್ನು ಮನಗಂಡು ವಿದೇಶಿ ಪಕ್ಷಿಗಳು ವಲಸೆ ಬರುತ್ತಿವೆ. ಈ ಪಕ್ಷಿಧಾಮವನ್ನು ವೆಟ್‍ಲ್ಯಾಂಡ್‍ಗೆ ಸೇರಿಸುವುದಕ್ಕೆ ಅರಣ್ಯ ಇಲಾಖೆ ರಾಮ್‍ಸರ್ ಸಂಸ್ಥೆಗೆ ಅರ್ಜಿ ಸಲ್ಲಿಸಿದೆ. ವಿವಿಧ ಸೌಲಭ್ಯವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ವೆಟ್‍ಲ್ಯಾಂಡ್ ವ್ಯಾಪ್ತಿಗೆ ರಂಗನತಿಟ್ಟು ಪಕ್ಷಿಧಾಮ ಸೇರಿಸುವ ಮೂಲಕ ಪಕ್ಷಿಗಳ ಸಂತಾನೋತ್ಪತ್ತಿ, ಪಕ್ಷಿ ಸಂಕುಲದ ಸಂರಕ್ಷಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಚಿಂತಿಸಿದ್ದು, ಅದಕ್ಕಾಗಿ ರಾಮ್‍ಸರ್ ಸಂಸ್ಥೆ ಸೂಚನೆ ಮೇರೆಗೆ ವೈಜ್ಞಾನಿಕವಾಗಿ ಪಕ್ಷಿಗಳ ಗಣತಿ ನಡೆಸಲಾಗುತ್ತಿದೆ.

ವರ್ಷಕ್ಕೆ 3 ಬಾರಿ ಗಣತಿ ಕಾರ್ಯ ನಡೆಸಲಾಗುತ್ತಿದ್ದು, ಈಗಾಗಲೇ ನಾಲ್ಕು ಬಾರಿ ಗಣತಿ ಕಾರ್ಯ ನಡೆಸಲಾಗಿದೆ. ಇಂದು ನಡೆಸಿದ ಐದನೇ ಗಣತಿ ಕಾರ್ಯದಲ್ಲಿ ಮೈಸೂರಿನಿಂದ ಸುಮಾರು ಇಪ್ಪತ್ತು ಮಂದಿ ಸ್ವಯಂ ಸೇವಕರು ಪಾಲ್ಗೊಂಡು ಇಲಾಖೆಯ 25ಕ್ಕೂ ಹೆಚ್ಚು ಸಿಬ್ಬಂದಿಗಳೊಂದಿಗೆ ಸೇರಿ ಗಣತಿ ಕಾರ್ಯದಲ್ಲಿ ತೊಡಗಿದ್ದರು. ಮೈಸೂರಿನ ಅರಣ್ಯ ಭವನದಿಂದ ಎಲ್ಲಾ ಸ್ವಯಂ ಸೇವಕರನ್ನು ಇಲಾಖೆ ವತಿಯಿಂ ದಲೇ ಬೆಳಿಗ್ಗೆ 6 ಗಂಟೆಗೆ ಕರೆದೊಯ್ಯಲಾಯಿತು. ರಂಗನತಿಟ್ಟು ಪಕ್ಷಿಧಾಮದಲ್ಲಿ ಸ್ವಯಂ ಸೇವಕರು ಹಾಗೂ ಸಿಬ್ಬಂದಿಯನ್ನು ಏಳು ತಂಡಗಳಾಗಿ ವಿಂಗಡಿಸಿ ಬೆಳಿಗ್ಗೆ 7ರಿಂದ 10 ಗಂಟೆಯವರೆಗೆ ಗಣತಿ ಕಾರ್ಯ ನಡೆಸಲಾಯಿತು. ಪಕ್ಷಿಧಾಮದಲ್ಲಿರುವ ಒಟ್ಟು 28 ದ್ವೀಪ ಹಾಗೂ ಪ್ರವಾಸಿಗರು ವಿಹರಿಸುವ ಸ್ಥಳದ ಸುತ್ತಮುತ್ತಲೂ ಪಕ್ಷಿಗಳ ಗಣತಿ ನಡೆಸಲಾಯಿತು. ಗಣತಿ ವೇಳೆ ಸ್ಪಾಟೆಡ್ ಬಿಲ್‍ಡ್ ಪೆಲಿಕಾನ್, ಇಂಡಿಯನ್ ಫೌಂಡ್ ಹೆರಾನ್, ಪರ್ಪಲ್ ಹೆರಾನ್, ಸ್ಪೂನ್ ಬಿಲ್, ಕಪ್ಪುತಡೆಯ ಐಬಿಸ್, ಕೆಂಪು ತಡೆಯ ಐಬಿಸ್, ಕಿಂಗ್ ಫಿಷರ್, ಕಾಮನ್ ಕಿಂಗ್ ಫಿಷರ್, ಲಿಟಲ್ ಕಾರ್ಮೊ ರೆಂಟ್, ಇಂಡಿ ಯನ್ ಕಾರ್ಮೊರೆಂಟ್, ಗ್ರೇಟ್ ಕಾರ್ಮೊರೆಂಟ್, ಪೈಂಟೆಡ್ ಸ್ಟ್ರೋಕ್, ಬುಲ್ ಬುಲ್, ಜಂಗಲ್ ಕ್ರೋ, ರೋಸ್ ರಿಂಗ್‍ಡ್ ಪ್ಯಾರಾಕಿಟ್, ಬ್ರಾಮಿಂಟ್ ಕೈಟ್, ಹಾರ್ಮ್ ಬಿಲ್ ಸೇರಿದಂತೆ 65ಕ್ಕೂ ಹೆಚ್ಚು ಜಾತಿಯ ಪಕ್ಷಿಗಳ ಗಣತಿ ಮಾಡ ಲಾಯಿತು. ಈ ಸಂದರ್ಭದಲ್ಲಿ ಆರ್‍ಎಫ್‍ಓ ಅನನ್ಯಕುಮಾರ್, ಡಿಆರ್‍ಎಫ್‍ಓ ಎಂ.ಪುಟ್ಟ ಮಾದೇಗೌಡ, ಪಕ್ಷಿ ತಜ್ಞರಾದ ತನುಜಾ ಹಾಗು ಇನ್ನಿತರರು ಉಪಸ್ಥಿತರಿದ್ದರು.

Translate »