ಹಸು ದಾಳಿಗೆ ಇಬ್ಬರು ಮಹಿಳೆಯರಿಗೆ ಗಾಯ
ಮೈಸೂರು

ಹಸು ದಾಳಿಗೆ ಇಬ್ಬರು ಮಹಿಳೆಯರಿಗೆ ಗಾಯ

June 10, 2019

ಮೈಸೂರು: ಬಿಡಾಡಿ ಹಸುಗಳೆರಡು ವಾಯುವಿಹಾರಿಗಳ ನಡುವೆ ನುಗ್ಗಿದ ಪರಿಣಾಮ ಆತಂಕಕ್ಕೊಳಗಾಗಿ ಬಿದ್ದು ಇಬ್ಬರು ಮಹಿಳೆ ಯರು ಗಾಯಗೊಂಡಿರುವ ಘಟನೆ ಭಾನುವಾರ ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ನಡೆದಿದೆ.

ಎಂದಿನಂತೆ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ವಾಯು ವಿಹಾರಿಗಳು ಓಡಾಡುತ್ತಿದ್ದಾಗ ಇಂದು ಬೆಳಿಗ್ಗೆ 8 ಗಂಟೆ ಸುಮಾರಿನಲ್ಲಿ ಏರಿಯ ಪಕ್ಕ ಮೇಯುತ್ತಿದ್ದ ಹಸುಗಳೆರಡು ಹಠಾತ್ತನೇ ವಾಯುವಿಹಾರಿಗಳತ್ತ ಕುಣಿಯುತ್ತ ಬಂದಿವೆ. ಒಂದರ ಹಿಂದೆ ಮತ್ತೊಂದು ಹಸು ಬಂದು ನುಗ್ಗಿದ್ದರಿಂದ ಏರಿ ಮೇಲೆ ಹೋಗು ತ್ತಿದ್ದ ಮಹಿಳೆಯೊಬ್ಬರಿಗೆ ಹಸು ತಾಕಿದೆ. ಇದರಿಂದ ಅವರು ಕೆಳಕ್ಕುರುಳಿ ಬಿದ್ದಿದ್ದಾರೆ. ಸಮೀಪದಲ್ಲಿಯೇ ಹೋಗುತ್ತಿದ್ದ ಮಹಿಳೆಯೊಬ್ಬರಿಗೂ ಹಸು ತಳ್ಳಿ ಮುಂದೆ ಸಾಗಿದೆ. ಏಕಾಏಕಿ ಹಸು ನುಗ್ಗಿದ್ದರಿಂದ ಗಾಬರಿಗೊಳಗಾಗಿ ಕೆಳಕ್ಕೆ ಬಿದ್ದ ಮಹಿಳೆಯರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಪ್ರತಿದಿನ ನೂರಾರು ಮಂದಿ ಕುಕ್ಕರಹಳ್ಳಿ ಕೆರೆ ಏರಿ ಮೇಲೆ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಬರುವ ವಾಡಿಕೆಯಿದೆ. ಹಸಿರು ವಾತಾವರಣದೊಂದಿಗೆ, ಹಲವು ಬಗೆಯ ಪಕ್ಷಿಗಳನ್ನು ಒಡಲಲ್ಲಿಟ್ಟುಕೊಂಡಿರುವ ಕುಕ್ಕರಹಳ್ಳಿ ಕೆರೆ ವಾಯುವಿಹಾರಿಗಳಿಗೆ ನೆಚ್ಚಿನ ತಾಣವಾಗಿದೆ. ಇದರಿಂದಾಗಿ ದಿನದಿಂದ ದಿನಕ್ಕೆ ವಾಯುವಿಹಾ ರಕ್ಕೆ ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಅನಿರೀಕ್ಷಿತವಾಗಿ ನಡೆದ ಈ ಘಟನೆಯನ್ನು ಕಂಡ ಇತರರು ಹಸುಗಳನ್ನು ಓಡಿಸಿದ್ದಾರೆ. ಅಲ್ಲದೆ ಗಾಬರಿ ಗೊಳಗಾಗಿದ್ದ ಮಹಿಳೆಯರನ್ನು ಸಮಾಧಾನಪಡಿಸಿ ದ್ದಾರೆ. ಬಳಿಕ ಸಾವರಿಸಿಕೊಂಡ ಆ ಮಹಿಳೆಯರು ವಾಯುವಿಹಾರ ಮೊಟಕುಗೊಳಿಸಿ, ಮನೆಗೆ ವಾಪಸಾ ಗಿದ್ದಾರೆ. ಅಲ್ಲದೆ, ಕುಕ್ಕರಹಳ್ಳಿ ಕೆರೆಯ ಕಾವಲುಗಾರ ರಿಗೆ ಹಸು ದಾಳಿ ಮಾಡಿ, ನಮ್ಮನ್ನು ಗಾಯಗೊಳಿ ಸಿದೆ. ಏಕಾಏಕಿ ಹಸು ನುಗ್ಗಿದ್ದರಿಂದ ಕೆರೆಗೆ ಬೀಳುತ್ತಿ ದ್ದೆವು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ವಾಯು ವಿಹಾರಿ ಪ್ರೊ. ಬಸವ ರಾಜು ಎಂಬುವವರು `ಮೈಸೂರು ಮಿತ್ರ’ನೊಂ ದಿಗೆ ಮಾತನಾಡಿ, ಬೆಳಿಗ್ಗೆ 8 ಗಂಟೆಗೆ ವಾಯುವಿಹಾರ ನಡೆಸುತ್ತಿದ್ದಾಗ ಹುಣಸೂರು ರಸ್ತೆಗೆ ಹೊಂದಿಕೊಂಡ ತಿರುವ ಕೆರೆ ಆವರಣದಲ್ಲಿ ಹಸುಗಳೆರಡು ಮೇಯು ತ್ತಿದ್ದವು. ಕೆಲ ಸಮಯದಲ್ಲಿಯೇ ಆ ಹಸುಗಳು ಏಕಾಏಕಿ ಕೆರೆ ಏರಿ ಮೇಲೆ ಬಂದು ಮಹಿಳೆಯರಿಬ್ಬರ ಮೇಲೆ ದಾಳಿ ನಡೆಸಿದವು. ಇದರಿಂದ ಆ ಮಹಿಳೆ ಯರು ಕೆಳಕ್ಕೆ ಬಿದ್ದರು. ಒಂದು ಹಸು ಕೆಳಗೆ ಬಿದ್ದ ಮಹಿಳೆಗೆ ತಿವಿಯುತ್ತಿತ್ತು. ಆ ಹಸುಗಳನ್ನು ವಾಯು ವಿಹಾರಿಗಳು ಓಡಿಸಿ, ಮಹಿಳೆಯರನ್ನು ರಕ್ಷಿಸಿದರು ಎಂದು ತಿಳಿಸಿದರು.

ಸುಮ್ಮನಿರುತ್ತಾರೆ: ಕೆಲವು ವಾಯು ವಿಹಾರಿಗಳು ಈ ಕುರಿತಂತೆ ಮಾತನಾಡಿ, ಕೆರೆ ಕಾವಲಿಗೆ ನಿಯೋಜಿಸಿರುವ ಕೆಲವು ವಾಚ್‍ಮನ್‍ಗಳು ಹಸುಗಳ ಮಾಲೀಕರಿಂದ ಹಣ ಪಡೆದು ಕೆರೆ ಆವರಣದಲ್ಲಿ ಬೆಳೆದಿರುವ ಹುಲ್ಲನ್ನು ಮೇಯಲು ಹಸು ಬಿಡಲು ಅವಕಾಶ ಮಾಡಿಕೊಡುತ್ತಿದ್ದಾರೆ. ಇದುವರೆಗೂ ಇಂತಹ ಘಟನೆ ನಡೆದಿರ ಲಿಲ್ಲ. ಇಂದು ನಡೆದ ಘಟನೆ ಆಕಸ್ಮಿಕವಷ್ಟೇ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಕಟ್ಟೆಚ್ಚರವಹಿಸಬೇಕು ಎಂದು ಆಗ್ರಹಿಸಿದರು.

Translate »