ಸಂವಿಧಾನ ಓದಿ ಉತ್ತಮ ಪ್ರಜೆಗಳಾಗಲು ಕರೆ
ಕೊಡಗು

ಸಂವಿಧಾನ ಓದಿ ಉತ್ತಮ ಪ್ರಜೆಗಳಾಗಲು ಕರೆ

November 27, 2018

ಮಡಿಕೇರಿ: ರಾಷ್ಟ್ರದ ಸಂವಿ ಧಾನ ಕಾನೂನು ಪುಸ್ತಕವಿದ್ದಂತೆ, ಜೊತೆಗೆ ಅದೊಂದು ಮಹಾಗ್ರಂಥ ಎಂಬುದನ್ನು ಮರೆಯುವಂತಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ವಿಜಯ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ವಕೀಲರ ಸಂಘ ಇವರ ಜಂಟಿ ಆಶ್ರಯದಲ್ಲಿ ನಗರದ ನ್ಯಾಯಾಲಯದ ಸಭಾಂಗಣದಲ್ಲಿ ಸೋಮವಾರ ನಡೆದ “ಸಂವಿಧಾನ ದಿನಾಚರಣೆ” ಕಾರ್ಯಕ್ರಮ ದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ದೇಶದ ಸಂವಿಧಾನ ಓದಿದವರು ಯಾವುದೇ ರೀತಿಯ ತಪ್ಪು ಮಾಡಲು ಹೋಗುವುದಿಲ್ಲ, ಅಪರಾಧ ಮಾಡಲು ಮನಸ್ಸು ಬರುವು ದಿಲ್ಲ, ಆದ್ದರಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಬರೆದಿರುವ ಸಂವಿ ಧಾನವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಿ ಉತ್ತಮ ಪ್ರಜೆಗಳಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯ ಕುಮಾರ್ ಕರೆ ನೀಡಿದರು.
ಹಲವು ರಾಷ್ಟ್ರಗಳ ಸಂವಿಧಾನ ಅಧ್ಯ ಯನ ಮಾಡಿ, ದೇಶಕ್ಕೆ ಉತ್ತಮ ಸಂವಿ ಧಾನ ನೀಡಿದ್ದಾರೆ. ಇದರ ಪ್ರಯೋಜನ ಎಲ್ಲರಿಗೂ ದೊರೆಯಬೇಕು. ಆ ನಿಟ್ಟಿನಲ್ಲಿ ಸಂವಿಧಾನದ ಮೂಲಭೂತ ಹಕ್ಕು ಪಡೆಯು ವುದರ ಜೊತೆಗೆ, ಕರ್ತವ್ಯಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಅವರು ಸಲಹೆ ಮಾಡಿದರು.

ಸಂವಿಧಾನದ ಪ್ರಸ್ತಾವನೆ-ಪೀಠಿಕೆಯಲ್ಲಿ ‘ಭಾರತೀಯರಾದ ನಾವು’ ಎಂಬುದ ರೊಂದಿಗೆ ಆರಂಭವಾಗಿದ್ದು, ಭಾರತೀಯ ರಾದ ನಾವುಗಳೆಲ್ಲರೂ ಒಂದು. ಪ್ರತಿ ಯೊಬ್ಬರೂ ಭ್ರಾತೃತ್ವದಿಂದ ಬದುಕಬೇಕು. ಎಲ್ಲರೂ ಸಮಾನರು ಎಂಬ ಮನೋಭಾವ ಬರಬೇಕು. ಅದರಂತೆ ನಡೆದುಕೊಳ್ಳ ಬೇಕು. ಇದು ಸಂವಿಧಾನದ ಆಶಯ ವಾಗಿದೆ ಎಂದು ಅವರು ನುಡಿದರು.

ಇಡೀ ವಿಶ್ವದಲ್ಲಿಯೇ ಮಾದರಿಯಾದ ಸಂವಿಧಾನವನ್ನು ದೇಶಕ್ಕೆ ಅರ್ಪಿಸಲಾ ಗಿದ್ದು, ಈ ಸಂವಿಧಾನದ ಮಹತ್ವ ಮತ್ತು ಆಶಯಗಳನ್ನು ಮನವರಿಕೆ ಮಾಡುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2015 ರಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಆಯೋಜಿಸಲು ಅಧಿಸೂಚನೆ ಹೊರಡಿಸಿದರು. ಆ ದಿಸೆ ಯಲ್ಲಿ ಕಳೆದ ಮೂರು ವರ್ಷಗಳಿಂದ ನವೆಂ ಬರ್ 26 ರಂದು ಸಂವಿಧಾನ ದಿನಾಚರಣೆ ಆಯೋಜಿಸಲಾಗುತ್ತಿದೆ. ರಾಷ್ಟ್ರದ ಸಂವಿ ಧಾನ ರಕ್ಷಣೆ ಮಾಡಿದರೆ, ನಮ್ಮನ್ನು ನಾವು ರಕ್ಷಣೆ ಮಾಡಿಕೊಂಡಂತೆ ಎಂದು ನ್ಯಾಯಾ ಧೀಶ ವಿಜಯ ಕುಮಾರ್ ತಿಳಿಸಿದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾ ಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಮಾತನಾಡಿ, 1949ರ ನ.11 ರಂದು ಸಂವಿಧಾನವನ್ನು ಸ್ವೀಕರಿ ಸಲಾಯಿತು, ನಂತರ 1951 ಜನವರಿ 26 ರಿಂದ ಗಣರಾಜ್ಯ ದಿನಾಚರಣೆ ಆಚರಿಸಿ ಕೊಂಡು ಬರಲಾಗುತ್ತಿದೆ ಎಂದರು.

ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ವಾಗಿ ಬದುಕುವ ಅವಕಾಶ ನೀಡಿದೆ. ಸಮಾನತೆ, ಸಹೋದರತ್ವ, ಸಹಬಾಳ್ವೆ ಈ ತತ್ವಗಳನ್ನು ಪ್ರತಿಯೊಬ್ಬರೂ ಮೈಗೂಡಿ ಸಿಕೊಳ್ಳಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ಕೆ.ಎಸ್. ಕವನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಜಾ ಪ್ರಭುತ್ವದಲ್ಲಿ ಸಂವಿಧಾನ ಮಹತ್ವ ತಿಳಿಯು ವಂತಾಗಬೇಕು. ಸಂವಿಧಾನದ ಚೌಕಟ್ಟಿ ನಲ್ಲಿ ಪ್ರತಿಯೊಬ್ಬರೂ ನಡೆದುಕೊಳ್ಳಬೇಕು. ಹಾಗಾದಾಗ ಬಲಿಷ್ಠ ರಾಷ್ಟ್ರ್ರ ನಿರ್ಮಾಣ ಮಾಡಲು ಸಾಧ್ಯ ಎಂದು ಅವರು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ಬಿ.ಕೆ.ಮನು ಇತರರು ಇದ್ದರು. ಚಿತ್ರನಟ ಹಾಗೂ ಮಾಜಿ ಸಚಿವರಾದ ಅಂಬರೀಷ್ ಮತ್ತು ಕೇಂದ್ರ ರೈಲ್ವೆ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ನಿಧನ ಹಿನ್ನೆಲೆಯಲ್ಲಿ ಇದೇ ಸಂದರ್ಭ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Translate »