ವಿರಾಜಪೇಟೆಯಲ್ಲಿ ‘ಸಂವಿಧಾನ ದಿನಾಚರಣೆ’
ಕೊಡಗು

ವಿರಾಜಪೇಟೆಯಲ್ಲಿ ‘ಸಂವಿಧಾನ ದಿನಾಚರಣೆ’

November 27, 2018

ವಿರಾಜಪೇಟೆ:  ದೇಶದ ಮೌಲ್ಯಯುತವಾದ ಸಂವಿಧಾನದ ಕಾನೂನು ಗಳನ್ನು ಪ್ರತಿಯೋಬ್ಬರು ತಿಳಿದುಕೊಳ್ಳುವ ಮೂಲಕ ಕಾನೂನಿಗೆ ಗೌರವಿಸುವಂತಾ ಗಬೇಕು ಎಂದು ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ. ರಮಾ ಹೇಳಿದರು.

‘ಸಂವಿಧಾನ ದಿನಾಚರಣೆ’ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘದ ಆಶ್ರಯ ದಲ್ಲಿ ನ್ಯಾಯಾಲಯದ ಆವರಣದಲ್ಲಿ ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ನ್ಯಾಯಾಧೀಶರು ಮಾತನಾಡಿದರು.
ಇತರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶ ಸಂವಿಧಾನದಲ್ಲಿ ಅಧಿಕ ಪ್ರಾಮು ಖ್ಯತೆ ಕೊಡಲಾಗಿದೆ. ನಾವುಗಳು ನ್ಯಾಯಾಂಗ ವ್ಯವಸ್ಥೆಯಲ್ಲಿದ್ದೇವೆ. ದೇಶದ ಪ್ರಜೆಗಳಾಗಿರುವ ಪ್ರತಿಯೊಬ್ಬರು ಸಂವಿ ಧಾನದ ಬಗ್ಗೆ ತಿಳಿದುಕೊಳ್ಳುವ ಮೂಲಕ ಕಾನೂನಿಗೆ ತಲೆಬಾಗಲೇಬೇಕು. ಕಾನೂನು ಎಂಬುದು ಸಮುದ್ರಕ್ಕಿಂತ ಆಳವಾಗಿದೆ. ಸಮಯ ಬಂದಾಗ ಗೌರವ ನೀಡುವುದ ಕ್ಕಿಂತ ಕಾನೂನಿಗೆ ಸದಾ ಗೌರವ ನೀಡು ವಂತಾಗಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್. ಜಯಪ್ರಕಾಶ್ ಮಾತನಾಡಿ, ಜನರಿಗೆ ಅನ್ಯಾಯವಾದಾಗ ನ್ಯಾಯಾಲಯಕ್ಕೆ ಬರುತ್ತಾರೆ. ಅವರಿಗೆ ನ್ಯಾಯ ದೊರಕಿ ಸುವುದು ನ್ಯಾಯಾಂಗ ವ್ಯವಸ್ಥೆಯ ಕರ್ತವ್ಯವಾಗಿದೆ. ಸಂವಿಧಾನದ ಆಶಯ ಗಳಿಗೆ ಚುಕ್ಕಿ ಬಾರದ ಹಾಗೆ ಪ್ರತಿಯೊ ಬ್ಬರು ಕಾನೂನನ್ನು ತಿಳಿದುಕೊಂಡು ಪಾಲಿಸುವಂತಾಗಬೇಕು ಎಂದರು.

ಪ್ರಧಾನ ಸಿವಿಲ್ ನ್ಯಾಯಧೀಶ ಶಿವಾ ನಂದ ಲಕ್ಷ್ಮಣ ಅಂಚಿ ಮಾತನಾಡಿ, ಸಂವಿಧಾನ ಎಂಬುದು ಪ್ರಬಲ ಅಸ್ತ್ರವಾಗಿ ದ್ದರೂ ಕೂಡ ನೂರಕ್ಕೂ ಹೆಚ್ಚು ತಿದ್ದುಪಡಿ ಯಾಗಿದೆ. ಅದರಿಂದ ಸಂವಿಧಾನ ಶಿಲ್ಪಿ ಡಾ,ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ದ್ವೇಷಿಸಬೇಡಿ ಎಂದಿ ದ್ದಾರೆ. ಪ್ರಜೆಗಳು ಮೂಲಭೂತ ಹಕ್ಕನ್ನು ಪಡೆಯಲು ಕಾನೂನನ್ನು ಪಾಲಿಸಬೇಕು ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ವಕೀಲರ ಸಂಘದ ಅಧ್ಯಕ್ಷ ಎಂ.ಎಂ. ನಂಜಪ್ಪ ಮಾತನಾಡಿದರು. ನ್ಯಾಯಾಲಯದ ಸಿಬ್ಬಂದಿ ಮಂಜುನಾಥ್ ಸ್ವಾಗತಿಸಿದರೆ, ಎ.ಜೆ. ಪ್ರದೀಪ್ ವಂದಿಸಿದರು.

Translate »