ಮೈಸೂರು ವಾರಿಯರ್ಸ್‍ಗೆ ದಾಖಲೆಯ ಜಯ
ಮೈಸೂರು

ಮೈಸೂರು ವಾರಿಯರ್ಸ್‍ಗೆ ದಾಖಲೆಯ ಜಯ

August 27, 2019

ಮೈಸೂರು,ಆ.26- ಕೆಪಿಎಲ್ ಇತಿಹಾಸ ದಲ್ಲಿಯೇ ವೇಗದ ಶತಕ ಸಿಡಿಸಿದ ಅನಿರುದ್ಧ ಜೋಷಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮೈಸೂರು ವಾರಿಯರ್ಸ್ 241ರನ್‍ಗಳ ಬೃಹತ್ ಮೊತ್ತ ಬೆನ್ನತ್ತುವ ಮೂಲಕ ದಾಖಲೆಯ ಜಯ ಸಾಧಿಸಿದೆ.
ಬಳ್ಳಾರಿ ಟಸ್ಕರ್ಸ್ ನೀಡಿದ 240ರನ್‍ಗಳ ಗುರಿ ಬೆನ್ನ ತ್ತಿದ್ದ ಮೈಸೂರು ವಾರಿಯರ್ಸ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 241ರನ್‍ಗಳಿಸಿ 3 ವಿಕೆಟ್‍ಗಳ ಗೆಲುವಿನ ನಗೆ ಬೀರಿತ್ತು. ಈ ಮೂಲಕ ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಮೈಸೂರು ಪರ ಇನ್ನಿಂಗ್ಸ್ ಆರಂಭಿಸಿದ ವಿನಯ್ ಸಾಗರ್ 13, ಕೃಷಮೂರ್ತಿ 1, ಅಮೀತ್‍ವರ್ಮ 8 ರನ್‍ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ತವರಿನ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಈ ವೇಳೆ ಜೊತೆಯಾದ ಅನಿರುದ್ಧ ಜೋಷಿ ಹಾಗೂ ಶೋಯೆಬ್ ಮ್ಯಾನೇಜರ್ ಅರ್ಧ ಶತಕದ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಈ ವೇಳೆ 15ರನ್‍ಗಳಿ ಸಿದ ಮ್ಯಾನೇಜರ್ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಅನಿರುದ್ಧ ಜೋಷಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.

ನಂತರ ಜೋಷಿ ಜೊತೆಗೂಡಿದ ಜಗದೀಶ್ ಸುಚಿತ್ ತಂಡಕ್ಕೆ 50ರನ್‍ಗಳ ಜೊತೆಯಾಟದ ಕಾಣಿಕೆ ನೀಡಿ ದರು. ಈ ವೇಳೆ ಸುಚಿತ್ 15ರನ್‍ಗಳಿಸಿ ವಿಕೆಟ್ ಒಪ್ಪಿಸಿ ದ್ದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ, ಧÀೃತಿಗೆಡದ ಜೋಷಿ 58 ಎಸೆತಗಳಲ್ಲಿ 9 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿಯೊಳಗೊಂಡ 125ರನ್‍ಗಳ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 9 ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿದ ಮಂಜೇಶ್‍ರೆಡ್ಡಿ ಭರ್ಜರಿ ಬ್ಯಾಟಿಂಗ್‍ನಿಂದ ಮೈಸೂರು ವಾರಿಯರ್ಸ್ ರೋಚಕ ಗೆಲುವು ದಾಖಲಿಸಿತು.

ಇದಕ್ಕೂ ಮುನ್ನಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಳ್ಳಾರಿ ಟಸ್ಕರ್ಸ್‍ಗೆ ನಾಯಕ ಸಿಎಂ ಗೌತಮ್ ಮತ್ತು ಅಭಿಷೇಕ್‍ರೆಡ್ಡಿ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರುವ ಮೊದಲ ವಿಕೆಟ್ 4.6 ಓವರ್‍ಗಳಲ್ಲೇ 56 ರನ್‍ಗಳ ಜೊತೆ ಯಾಟ ನೀಡಿದರು. ಈ ಸಂದರ್ಭದಲ್ಲಿ 32ರನ್ ಗಳಿಸಿದ ಅಭಿಷೇಕ್ ವಿಕೆಟ್ ಒಪ್ಪಿಸಿದರು. 15 ಎಸೆತ ಗಳನ್ನು ಎದುರಿಸಿದ ಅಭಿಷೇಕ್ ಇನ್ನಿಂಗ್ಸ್‍ನಲ್ಲಿ ಬೌಂಡರಿ ಹಾಗೂ 4 ಸಿಕ್ಸರ್‍ಗಳು ಸೇರಿದ್ದವು. ಬಳಿಕ ನಾಯಕನ ಜೊತೆಗೂಡಿದ ಕೃಷ್ಣಪ್ಪ ಗೌತಮ್ ರನ್ ಗತಿಗೆ ಮತ್ತಷ್ಟು ವೇಗ ನೀಡಿದರು. ಎರಡನೇ ವಿಕೆಟ್‍ಗೆ 75 ರನ್‍ಗಳ ಕಾಣಿಕೆ ನೀಡಿದರು. ಇಲ್ಲಿಗೆ ಬಳ್ಳಾರಿ ಆರ್ಭಟ ನಿಲ್ಲ ಲಿಲ್ಲ. ಬಳಿಕ ಕ್ರೀಸಿಗಿಳಿದ ದೇವದತ್ ಪಡಿಕ್ಕಲ್ ಸಹ ನಾಯಕನ ಜೊತೆ ಕೈಜೋಡಿಸಿಕೊಂಡರು. ಅಲ್ಲದೆ ಮುರಿಯದ ಮೂರನೇ ವಿಕೆಟ್‍ಗೆ 109 ರನ್‍ಗಳ ಬಿರುಸಿನ ಜತೆಯಾಟ ನೀಡಿದರು. ಕೇವಲ 28 ಎಸೆತಗಳಲ್ಲೇ ಪಡಿಕ್ಕಲ್ ಅರ್ಧಶತಕ ಸಾಧನೆ ಮಾಡಿ ದರು. ಈ ಮೂಲಕ ಬಳ್ಳಾರಿ ಟಸ್ಕರ್ಸ್ 2 ವಿಕೆಟ್ ನಷ್ಟಕ್ಕೆ 240 ರನ್‍ಗಳ ಬೃಹತ್ ಮೊತ್ತ ಪೇರಿಸಿತು. ಇದು ಕೆಪಿಎಲ್ ಇತಿಹಾಸದಲ್ಲೇ ದಾಖಲಾದ ಎರಡನೇ ಗರಿಷ್ಠ ಮೊತ್ತವಾಗಿದೆ.ನಾಯಕ ಸಿಎಂ ಗೌತಮ್ 50 ಎಸೆತಗಳಲ್ಲಿ 92 ರನ್ ಗಳಿಸಿ ಅಜೇಯರಾಗುಳಿದರು. ಅವರ ಇನ್ನಿಂಗ್ಸ್‍ನಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್‍ಗಳು ಸೇರಿದ್ದವು.

ಆಡಿರುವ 6 ಪಂದ್ಯಗಳಲ್ಲಿ ಎರಡು ಗೆಲುವಿನೊಂದಿಗೆ ಆರು ಅಂಕ ದಾಖಲಿಸಿರುವ ಮೈಸೂರು ವಾರಿಯರ್ಸ್ ಪ್ಲೇ-ಆಫ್ ಸಾಧ್ಯತೆಯನ್ನು ಜೀವಂತವಾಗಿರಿಸಿದೆ. ಇನ್ನೊಂದೆಡೆ ಈ ಸೋಲಿನ ಹೊರತಾಗಿಯೂ ಬಳ್ಳಾರಿ ಟಸ್ಕರ್ಸ್ ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಪ್ಲೇ-ಆಫ್‍ಗೆ ಲಗ್ಗೆಯಿಟ್ಟಿದೆ. ಸ್ಫೋಟ ಬ್ಯಾಟಿಂಗ್ ನಡೆಸಿದ ಮೈಸೂರು ತಂಡ ಅನಿರುದ್ಧ ಜೋಷಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಬೆಳಗಾವಿ ಪ್ಯಾಂಥರ್ಸ್‍ಗೆ ಜಯ: ಆರ್.ಸಮರ್ಥ್ ಅಜೇಯ 50 ಹಾಗೂ ಅಭಿನವ್ ಮನೋಹರ್ ಅಜೇಯ 42 ಅವರ ಸಮಯೋಚಿತ ಆಟದ ಬಲದಿಂದ ಬಿಜಾಪುರ್ ಬುಲ್ಸ್ ವಿರುದ್ಧ ಬೆಳಗಾವಿ ಪ್ಯಾಂಥರ್ಸ್ 7 ವಿಕೆಟ್ ಜಯಗಳಿಸಿತು. ಮೊದಲು ಬ್ಯಾಟ್ ಮಾಡಿದ ಬಿಜಾಪುರ್ ಬುಲ್ಸ್ ತಂಡದ ಆರಂಭ ಉತ್ತಮವಾಗಿ ರಲಿಲ್ಲ. ಎಂ.ಜಿ.ನವೀನ್, ರಾಜು ಭಟ್ಕಳ್ ಒಂದಕಿ ಯಲ್ಲಿ ಆಟ ಮುಗಿಸಿದರು. ಭರತ್ ಚಿಪ್ಲಿ 33, ಜಿಎಸ್ ಚಿರಂಜೀವಿ 12, ಎಸ್.ಎನ್.ರಾಜು 18, ಜೆಸ್ವಂತ್ ಆಚಾರ್ಯ 11 ಹಾಗೂ ಎನ್.ಪಿ.ಭರೇತ್ ಅಜೇಯ 35 ರನ್ ಬಾರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಅಂತಿಮವಾಗಿ ಬಿಜಾಪುರ್ 20 ಓವರ್‍ಗಳಲ್ಲಿ 8 ವಿಕೆಟ್‍ಗೆ 136 ರನ್ ಕಲೆ ಹಾಕಿತು. ಬೆಳಗಾವಿ ಪರ ಶುಭಾಂಗ್ ಹೆಗ್ಡೆ, ಡಿ.ಅವನಿಶ್, ಎಂಬಿ ದರ್ಶನ್ ತಲಾ 2 ವಿಕೆಟ್ ಉರುಳಿಸಿದರು.

ಗುರಿ ಬೆನ್ನತ್ತಿದ್ದ ಬೆಳಗಾವಿ ತಂಡದ ಆರಂಭವೂ ಕಳಪೆಯಾಗಿತ್ತು. ಮೂರನೇ ವಿಕೆಟ್‍ಗೆ ಆರ್. ಸರ್ಮಥ್ ಹಾಗೂ ದಿಕ್ಷಾಂಶು ನೇಗಿ ತಂಡಕ್ಕೆ 50 ರನ್‍ಗಳ ಜೊತೆಯಾಟದ ಕಾಣಿಕೆ ನೀಡಿ, ಆರಂಭಿಕ ಆಘಾತದಿಂದ ಪಾರು ಮಾಡಿತು. ದಿಕ್ಷಾಂಶು 32 ರನ್ ಬಾರಿಸಿ ಔಟಾದರು. ಸಮರ್ಥ್ 45 ಎಸೆತ ಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 50 ರನ್ ಬಾರಿಸಿ ಅಜೇಯರಾಗುಳಿದರು. ಅಭಿನವ್ ಮನೋಹರ್ 42 ರನ್ ಬಾರಿಸಿ ಔಟ್ ಆಗದೇ ಉಳಿ ದರು. ಅಂತಿಮವಾಗಿ ಬೆಳಗಾವಿ 17.4 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಉತ್ತಮ ಬ್ಯಾಟಿಂಗ್ ಮಾಡಿದ ಆರ್. ಸಮರ್ಥ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Translate »