ಇತ್ತೀಚೆಗೆ ಭಾರತದಲ್ಲಿ ಹಿಂದೂ ಪ್ರಜ್ಞೆ ಪ್ರಜ್ವಲಿಸುತ್ತಿದೆ
ಮೈಸೂರು

ಇತ್ತೀಚೆಗೆ ಭಾರತದಲ್ಲಿ ಹಿಂದೂ ಪ್ರಜ್ಞೆ ಪ್ರಜ್ವಲಿಸುತ್ತಿದೆ

August 27, 2019

ಮೈಸೂರು,ಆ.26(ಎಸ್‍ಪಿಎನ್)-ಇತ್ತೀಚಿನ ಭಾರತದಲ್ಲಿ ಹಿಂದೂ ಧರ್ಮ ಪ್ರಜ್ಞೆ ಎಲ್ಲರಲ್ಲೂ ಮೊಳಕೆಯೊಡೆಯುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಕಳೆದೆರಡು ವರ್ಷ ಗಳಿಂದ ಸಮಾಜದಲ್ಲಿ ಕೃಷ್ಣ ವೇಷಧಾರಿ ಹಾಗೂ ಮಡಿಕೆ ಹೊಡೆಯುವ ಸ್ಪರ್ಧೆ ಮಕ್ಕಳಲ್ಲಿ ಹೆಚ್ಚುತ್ತಿರುವುದೇ ಸಾಕ್ಷಿ ಎಂದು ಸಂಸ್ಕೃತಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.

ಮೈಸೂರು ಜೆಎಲ್‍ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಭಾಂಗಣದಲ್ಲಿ ಸನಾತನ ಸಭಾ ವತಿಯಿಂದ ಆಯೋಜಿಸಿದ್ದ 4 ದಿನಗಳ `ಪ್ರಾಚೀನ ಋಷಿ-ಮುನಿಗಳು ಅಂತರಂಗ -ಬಹಿರಂಗ’ ಉಪನ್ಯಾಸ ಮಾಲಿಕೆ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
5 ಸಾವಿರ ವರ್ಷಗಳ ಇತಿಹಾಸ ಹೊಂದಿ ರುವ ಭಾರತೀಯ ನಾಗರಿಕತೆ-ಪರಂಪರೆ ಬಗ್ಗೆ ತರುಣರು ತಿಳಿದುಕೊಳ್ಳಬೇಕು. ಇಂದಿನ ತರುಣರು ಸಿನಿಮಾ ನಟರು, ರಾಜಕಾರಣಿ ಗಳನ್ನು ಐಕಾನ್‍ಗಳನ್ನಾಗಿ ಸ್ವೀಕರಿಸುವ ಬದಲು ವಿಶ್ವಾಮಿತ್ರ ಋಷಿಯ ಆದರ್ಶ ನಮಗೆ ಜೀವನದ ಮಾರ್ಗದರ್ಶನವಾಗಬೇಕು ಎಂದು ಕಿವಿಮಾತು ಹೇಳಿದರು.

ವಿಶ್ವಾಮಿತ್ರ-ವಸಿಷ್ಠ ಮಹರ್ಷಿಗಳ ನಡುವೆ `ಬ್ರಹ್ಮರ್ಷಿಪಟ್ಟ’ಕ್ಕಾಗಿ ತಿಕ್ಕಾಟ ನಡೆದು ವಿಶ್ವಾ ಮಿತ್ರರು ರಾಜ ಪದವಿಯನ್ನೇ ತ್ಯಜಿಸಿ ಗುರಿ ಸಾಧನೆಗಾಗಿ ತಪಸ್ಸಿಗೆ ಕುಳಿತುಕೊಳ್ಳುತ್ತಾರೆ. ಮಧ್ಯೆ ಹೆಣ್ಣಿನ ಮೋಹದಿಂದಾಗಿ ತಪಸ್ಸಿಗೆ ಭಂಗ ತಂದುಕೊಂಡು ಸಾಂಸಾರಿಕ ಜೀವನ ವನ್ನು ನಡೆಸುತ್ತಾರೆ. ಕೊನೆಗೆ ಅವರಿಗೆ ಜ್ಞಾನೋದಯವಾಗಿ ಮತ್ತೆ ತಪಸ್ಸಿಗೆ ಕುಳಿತು ಕೊಂಡು ಗುರಿ ಸಾಧಿಸುವ ಪ್ರಸಂಗ ಇಂದಿನ ಪೀಳಿಗೆ ಆದರ್ಶವಾಗಬೇಕು. ಗುರಿ ಸಾಧನೆ ಗಾಗಿ ಕಠಿಣ ತಪಸ್ಸು ಆಚರಿಸಿದ ಪ್ರಾಚೀನ ಋಷಿಮುನಿಗಳ ಪರಂಪರೆಯನ್ನು ಇಂದಿನ ಸಮಾಜಕ್ಕೆ ಪರಿಚಯಿಸುವ ಕೆಲಸವಾಗ ಬೇಕು. ಈ ಕೆಲಸವನ್ನು ಸನಾತನ ಸಭಾ ಪದಾಧಿಕಾರಿಗಳು ಅಚ್ಚುಕಟ್ಟಾಗಿ ಆಯೋ ಜಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬ್ರಿಟಿಷರು, ಮೊಘಲರ ದಾಳಿ ಸಂದರ್ಭ ದಲ್ಲೂ ಹಿಂದೂ ಧರ್ಮ ಮತ್ತು ಸಂಸ್ಕೃತಿ ಮರೆಯಾಗಿಲ್ಲ. ಅದನ್ನು ನಮ್ಮ ಸಾಧು-ಸಂತರು ವೇದ-ಉಪನಿಷತ್ ತತ್ವಗಳನ್ನು ಪ್ರಚಾರ ಮಾಡುತ್ತ, ಸಂಸ್ಕೃತಿ ಮತ್ತು ಪರಂ ಪರೆ ಉಳಿವಿಗೆ ಪೂರಕ ವಾತಾವರಣವನ್ನು ನಿರ್ಮಿಸಿದ್ದರು. ಆ ಗುರುತಾಗಿ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂ ದರು ಸೇರಿದಂತೆ ಅನೇಕ ಸಾಧು ಸಂತರ ಪರಿಶ್ರಮದಿಂದ ನಮ್ಮ ಧರ್ಮ ಉಳಿದಿದೆ ಎಂದರೆ ತಪ್ಪಾಗಲಾರದು ಎಂದರು.

ಶಂಕರಾಚಾರ್ಯರು ತಮ್ಮ 32ನೇ ವಯ ಸ್ಸಿಗೆ 3 ಬಾರಿ ನಮ್ಮ ದೇಶವನ್ನು ಸುತ್ತಿ ಮಠ -ಮಾನ್ಯಗಳನ್ನು ಸ್ಥಾಪಿಸಿ, ಹಿಂದೂ ಧರ್ಮ ಪುನರ್ ಸ್ಥಾಪನೆಗೆ ಕಾರಣಕರ್ತರಾದರು. ಬೇರೆ ಧರ್ಮದಲ್ಲಿ ಆಯಾಯ ಧರ್ಮಗ್ರಂಥ ದಲ್ಲಿ ಉಲ್ಲೇಖ ಮಾಡಿರುವ ಪದ್ಧತಿ ಯನ್ನು ಮಾತ್ರ ಭಕ್ತರು ಪಾಲಿಸಬೇಕು. ಆದರೆ, ನಮ್ಮ ಹಿಂದೂ ಧರ್ಮದಲ್ಲಿ ಪ್ರಶ್ನಿಸದೇ ಯಾವುದೇ ಅಂಶಗಳನ್ನು ಒಪ್ಪಿ ಕೊಳ್ಳುವುದಿಲ್ಲ ಎಂದು ವಿವರಿಸಿದರು.

150 ವರ್ಷಗಳ ಹಿಂದೆ ರಾಮಕೃಷ್ಣ ಪರಮ ಹಂಸರು ಅವತರಿಸಿ, ವೇದ, ಉಪನಿಷತ್ ಗಳಲ್ಲಿ ಅಡಗಿದ್ದ ಅಂಶಗಳನ್ನು ಜನತೆ ಪ್ರಚಾರ ಮಾಡುತ್ತ, ತಾವು ತಮ್ಮ ಜೀವನ ಪದ್ಧತಿ ಯಲ್ಲಿ ಅಳವಡಿಸಿಕೊಂಡ ಉದಾಹರಣೆ ನಮ್ಮ ಕಣ್ಮುಂದೆ ಇದೆ. ಇದನ್ನು ಸ್ವಾಮಿ ವಿವೇಕಾ ನಂದರು ದೇಶ-ವಿದೇಶಗಳಲ್ಲಿ ಪ್ರಚಾರ ಮಾಡಿದ್ದಾರೆ. ಅವರು ಹೇಳಿರುವ ಅದೊಂದು ವಾಕ್ಯ `ಏಳಿ, ಏದ್ದೇಳಿ.., ಗುರಿ ಮುಟ್ಟುವ ತನಕ ನಿಲ್ಲದಿರಿ’ ಘೋಷ ವಾಕ್ಯ 150 ವರ್ಷಗಳ ನಂತರವೂ ಇಂದಿನ ತರುಣರ ಬಾಯಲ್ಲೂ ಕೇಳುತ್ತಿರುವುದು. ಈ ನೆಲದ ತಾಕತ್ತು ಎಂದರು.

150 ವರ್ಷಗಳ ಹಿಂದೆ ಸ್ವಾಮಿ ವಿವೇಕಾ ನಂದರು ಕಂಡ ಆಧ್ಯಾತ್ಮ ಭಾರತವನ್ನು ಮುಂದೆಯು ಕಾಣುತ್ತೇವೆ. ಆದರೆ, ಜನರು ಬದಲಾಗಬಹುದು. ನಮ್ಮ ವೇದ-ಉಪ ನಿಷತ್‍ಗಳಲ್ಲಿ ಅಡಕವಾಗಿರುವ ತಾತ್ಪರ್ಯ ಗಳು ಬದಲಾಗುವುದಿಲ್ಲ. ಋಷಿಮುನಿಗಳ ಪರಂ ಪರೆ ಮತ್ತು ಆಧ್ಯಾತ್ಮ ಮಜಲುಗಳನ್ನು ಒಳ ಗೊಂಡಿರುವ ಭಾರತ, ವಿಶ್ವಗುರುವಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಇದರ ಮಹತ್ವ ಯುವ ಜನತೆಗೆ ಅರ್ಥವಾಗು ತ್ತಿಲ್ಲ. ಕಾರಣ ನೂರಾರು ಎಂದು ಬೇಸರ ವ್ಯಕ್ತಪಡಿಸಿದರು. ಪ್ರಸ್ತುತ ವೇದ-ಉಷ ನಿಷತ್ ಗ್ರಂಥಗಳನ್ನು ಸರಸ್ವತಿ ಫೋಟೋ ಮುಂದಿಟ್ಟು ಪೂಜೆ ಸಲ್ಲಿಸುವವರೆಗೆ ಮಾತ್ರ ಇಂದಿನ ಪೀಳಗೆಗೆ ಪರಿಚಯಿಸುತ್ತಿದ್ದೇವೆ. ಅದರಲ್ಲಿರುವ ತಾತ್ಪರ್ಯವನ್ನು ಮಾತ್ರ ಪರಿ ಚಯಿಸುತ್ತಿಲ್ಲ. ಹೀಗಾದರೆ ಸಂಸ್ಕೃತಿ-ಪರಂ ಪರೆ ಬೆಳವಣಿಗೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರಲ್ಲದೆ, ಇಂತಹ ನೂರಾರು ಅಂಶ ಗಳು ಮುಂದಿನ ನಾಲ್ಕು ದಿನಗಳ ಕಾಲ ಈ ವೇದಿಕೆಯಲ್ಲಿ ಚರ್ಚೆಯಾಗಲಿದ್ದು, ಮೈಸೂರಿಗರು ಇದನ್ನು ಆಲಿಸಬೇಕು ಎಂದು ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಪ್ರಾಚ್ಯವಿದ್ಯಾ ಸಂಶೋ ಧನಾಲಯದ ನಿವೃತ್ತ ಸಂಶೋಧಕ ಡಾ. ಹೆಚ್.ವಿ.ನಾಗರಾಜರಾವ್, ಮುಕ್ತ ವಿವಿ ಪ್ಯಾಧ್ಯಾಪಕಿ ಡಾ.ಜ್ಯೋತಿ ಶಂಕರ್, ಸನಾ ತನ ಸಭಾ ಅಧ್ಯಕ್ಷ ಎನ್.ಎಸ್.ದ್ವಾರಕಾ ನಾಥ್, ಕರ್ನಾಟಕ ಮುಕ್ತಕ ಸಾಹಿತ್ಯ ಅಕಾ ಡೆಮಿ ಅಧ್ಯಕ್ಷ ಪ್ರೊ.ಎಸ್.ರಾಮಪ್ರಸಾದ್, ಕಾರ್ಯದರ್ಶಿ ವಿದ್ವಾನ್ ಗ.ನಾ.ಭಟ್ಟ ಮೊದಲಾದವರು ಉಪಸ್ಥಿತರಿದ್ದರು.

Translate »