ಕಬಿನಿ ಜಲಾನಯನದಿಂದ ನಾಲೆಗಳಿಗೆ ನೀರು ಬಿಡುಗಡೆ
ಮೈಸೂರು

ಕಬಿನಿ ಜಲಾನಯನದಿಂದ ನಾಲೆಗಳಿಗೆ ನೀರು ಬಿಡುಗಡೆ

August 2, 2019

ಮೈಸೂರು, ಆ.1- ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಕಬಿನಿ ಜಲಾನಯದ ವ್ಯಾಪ್ತಿಗೆ ಬರುವ ಕಬಿನಿ ಎಡದಂಡೆ ಮತ್ತು ಬಲದಂಡೆ ನಾಲೆ, ಹುಲ್ಲ ಹಳ್ಳಿ ಅಣೆಕಟ್ಟು ನಾಲೆಗಳಾದ ಹುಲ್ಲಹಳ್ಳಿ ನಾಲೆ ಮತ್ತು ರಾಂಪುರ ನಾಲೆಗಳಿಗೆ ಆ.5ರಿಂದ ನೀರು ಹರಿಸಲು ಕ್ರಮವಹಿಸ ಲಾಗುವುದು ಎಂದು ಕಬಿನಿ ಮತ್ತು ವರುಣಾ ನಾಲಾ ವೃತ್ತದ ಅಧೀಕ್ಷಕ ಇಂಜಿನಿಯರ್ ತಿಳಿಸಿದ್ದಾರೆ. ನಾಲೆಗಳಿಗೆ ಹರಿಸುವ ನೀರನ್ನು ಕೆರೆ-ಕಟ್ಟೆಗಳನ್ನು ತುಂಬಿಸಲು ಮತ್ತು ಜನ-ಜಾನುವಾರುಗಳಿಗೆ ಕುಡಿಯುವ ಸಲುವಾಗಿ ಮಾತ್ರ ಉಪಯೋಗಿಸಬೇಕು. ರೈತ ಬಾಂಧವರು ಕಬಿನಿ ನಾಲೆಗಳ ನೀರನ್ನು ಅವಲಂಬಿಸಿ ಯಾವುದೇ ಬೆಳೆಗಳನ್ನು ಬೆಳೆದಲ್ಲಿ, ನೀರಾವರಿ ಇಲಾಖೆಯವರು ಜವಾಬ್ದಾರರಲ್ಲ. ಮುಂದಿನ ದಿನಗಳಲ್ಲಿ ನೀರಿನ ಒಳಹರಿವು ಆಧರಿಸಿ, ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »