ಡಾ.ಎಸ್.ಎನ್.ಹೆಗಡೆ, ಜಿ.ಎಸ್.ಭಟ್ಟರ ಕೃತಿಗಳ ಲೋಕಾರ್ಪಣೆ
ಮೈಸೂರು

ಡಾ.ಎಸ್.ಎನ್.ಹೆಗಡೆ, ಜಿ.ಎಸ್.ಭಟ್ಟರ ಕೃತಿಗಳ ಲೋಕಾರ್ಪಣೆ

March 12, 2020

ಮೈಸೂರು, ಮಾ.11 (ವೈಡಿಎಸ್)- ಆಧುನಿಕ ತಂತ್ರಜ್ಞಾನ ಯುಗದಲ್ಲಿ ಪುಸ್ತಕ ಗಳನ್ನು ಮೋಡದ ಮರೆಯಲ್ಲಿ ಇಡು ವಂತಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತ ಕುಮಾರ್ ಹೇಳಿದರು.

ಜೆಎಲ್‍ಬಿ ರಸ್ತೆಯ ರೋಟರಿ ಸಭಾಂ ಗಣದಲ್ಲಿ ಕನ್ನಡ ಸಾಹಿತ್ಯ ಕಲಾಕೂಟ, ಇನೊವೇಟಿವ್, ಪ್ರೇಮಾ ಪ್ರಕಾಶನ, ಮಹಿಮಾ ಪ್ರಕಾಶನದ ಸಂಯುಕ್ತಾಶ್ರಯದ ಕಾರ್ಯಕ್ರಮದಲ್ಲಿ ಮೈಲಹಳ್ಳಿ ರೇವಣ್ಣ ಸಂಪಾದಿತ ಜಿ.ಎಸ್.ಭಟ್ಟರ `ಸಾಹಿತ್ಯಾವ ಲೋಕನ’, ಡಾ.ಎಸ್.ಎನ್.ಹೆಗಡೆ ಅವರ `ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರ ಸ್ಕøತರು ಸಂಪುಟ-1’ ಹಾಗೂ `ಕಳೆದು ಹೋದ ಕೊಂಡಿ ಮತ್ತು ಕೆಲವು ವಿಶೇಷ ಪ್ರಾಣಿಗಳು’ ಕೃತಿಗಳನ್ನು ಬುಧವಾರ ಬಿಡು ಗಡೆಗೊಳಿಸಿ ಅವರು ಮಾತನಾಡಿದರು. ಪುಸ್ತಕ ಬಿಡುಗಡೆ ಎಂದರೆ ಮನುಷ್ಯನ ಮಾನಸಿಕ ಜೀವನದ ದಾಖಲೆಗಳ ಬಿಡು ಗಡೆ. ವರ್ತಮಾನದ ಸವಾಲುಗಳಿಗೆ ಉತ್ತರ ಕಂಡುಕೊಳ್ಳಲು ಅಥವಾ ಭವಿಷ್ಯದ ದಾರಿಗೆ ಬೆಳಕನ್ನು ನೀಡಲು ಪುಸ್ತಕಗಳು ನೆರವಾಗು ತ್ತವೆ. ಹೀಗೆ ಉಳಿಸಿಕೊಳ್ಳುವ ಪ್ರಯತ್ನ ಮಾಡದೇ ಇದ್ದಿದ್ದರೆ 10ನೇ ಶತಮಾನದ ಪಂಪನ ಓಲೆಗರಿಗಳು ನಮಗೆ ಸಿಗುತ್ತಲೇ ಇರಲಿಲ್ಲ ಎಂದರು.

ಡಾ.ಎಸ್.ಎನ್.ಹೆಗಡೆ ತಮ್ಮ ಕೃತಿಯಲ್ಲಿ ಮನುಷ್ಯ-ಪ್ರಾಣಿಗಳ ಜೀವನದ ಸಾವ ಯವ ಸಂಬಂಧವನ್ನು ಬೆಸೆದಿದ್ದಾರೆ. ಪ್ರಾಣಿಗಳನ್ನು ಸಂರಕ್ಷಿಸಬೇಕಾದುದು ನಮ್ಮ ಕರ್ತವ್ಯ ಎಂಬುದನ್ನು ಪುಸ್ತಕ ನೆನಪಿ ಸುತ್ತದೆ ಎಂದು ತಿಳಿಸಿದರು.

ಕುವೆಂಪು ವಿವಿ ವಿಶ್ರಾಂತ ಕುಲಪತಿ ಪಿ.ವೆಂಕಟರಾಮಯ್ಯ, ಕರಾಮುವಿ ಕನ್ನಡ ವಿಭಾಗದ ಪ್ರಾಧ್ಯಾಪಕ ಎ.ರಂಗಸ್ವಾಮಿ, ಮೈಸೂರು ವಿವಿ ಪ್ರಾಣಿ ವಿಜ್ಞಾನ ವಿಭಾ ಗದ ಮುಖ್ಯಸ್ಥೆ ಎಸ್.ಎಸ್.ಮಾಲಿನಿ, ಸಮಾಜ ಸೇವಕ ಕೆ.ರಘುರಾಂ, ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ.ಚಂದ್ರ ಶೇಖರ್, ಪ್ರೇಮಾ ಪ್ರಕಾಶನದ ಪ್ರಕಾಶಕ ಜೀನಹಳ್ಳಿ ಸಿದ್ದಲಿಂಗಪ್ಪ, ಮಹಿಮಾ ಪ್ರಕಾ ಶನದ ಪ್ರಕಾಶಕ ಕೆ.ವಿ.ಶ್ರೀನಿವಾಸ್, ಕೃತಿ ಕರ್ತೃಗಳಾದ ಜಿ.ಎಸ್. ಭಟ್ಟ, ಡಾ.ಎಸ್. ಎನ್.ಹೆಗಡೆ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Translate »