ಆಯುಕ್ತಾಲಯ, ಸಂಜೆ ಪಾಲಿಟೆಕ್ನಿಕ್ ತೆರೆಯಿರಿ ಸಿಎಂಗೆ ಎಂಎಲ್‍ಸಿ ಮರಿತಿಬ್ಬೇಗೌಡ ಮನವಿ
ಮೈಸೂರು

ಆಯುಕ್ತಾಲಯ, ಸಂಜೆ ಪಾಲಿಟೆಕ್ನಿಕ್ ತೆರೆಯಿರಿ ಸಿಎಂಗೆ ಎಂಎಲ್‍ಸಿ ಮರಿತಿಬ್ಬೇಗೌಡ ಮನವಿ

January 15, 2019

ಮೈಸೂರು: ಮೈಸೂರು ವಿಭಾಗದ ಶೈಕ್ಷಣಿಕ ಉನ್ನತೀಕರಣ ದೃಷ್ಟಿ ಯಿಂದ ಮೈಸೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತಾ ಲಯ ಹಾಗೂ ಸರ್ಕಾರಿ ಸಂಜೆ ತಾಂತ್ರಿಕ ಪಾಲಿಟೆಕ್ನಿಕ್ ತೆರೆಯ ಬೇಕು ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.

ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ಎಂಟು ಜಿಲ್ಲೆಗಳನ್ನು ಒಳಗೊಂಡಿರುವ ಮೈಸೂರು ವಿಭಾಗದ ಶೈಕ್ಷಣಿಕ ಅಭಿವೃದ್ಧಿಗಾಗಿ ಮೈಸೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತಾಲಯ ತೆರೆಯಬೇಕು. ಧಾರವಾಡ, ಕಲಬುರ್ಗಿ ವಿಭಾಗದಲ್ಲಿ 12 ವರ್ಷಗಳ ಹಿಂದೆ ಆಯುಕ್ತಾಲಯ ಸ್ಥಾಪಿಸಲಾಗಿತ್ತು. ಅಂತದೇ ಆಯುಕ್ತಾಲಯ ಮೈಸೂರು ವಿಭಾಗಕ್ಕೂ ಅವಶ್ಯವಿದೆ. ಮೈಸೂರಿನಲ್ಲಿ ಸರ್ಕಾರಿ ಸಂಜೆ ಪಾಲಿಟೆಕ್ನಿಕ್‍ನ ಅವಶ್ಯಕ ತೆಯೂ ಇದೆ. ಏಕೆಂದರೆ ಇಲ್ಲಿನ ಅನೇಕ ಉದ್ಯೊಗಿಗಳು, ಕಾರ್ಮಿಕರು ಪಾಲಿಟೆಕ್ನಿಕ್ ಓದಲು ಆಸಕ್ತಿ ಇರುವುದರಿಂದ ಸಂಜೆ ಪಾಲಿಟೆಕ್ನಿಕ್ ತೆರೆಯುವುದು ಒಳಿತು. ಹಾಲಿ ಇರುವ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಕಟ್ಟಡದಲ್ಲಿಯೇ ಯಾವುದೇ ಹೆಚ್ಚಿನ ಖರ್ಚು ವೆಚ್ಚಗಳಿ ಲ್ಲದೇ ಕೇವಲ ಶಿಕ್ಷಕ ಸಿಬ್ಬಂದಿಯನ್ನು ನೇಮಿಸಿ ಆರಂಭಿಸಬಹುದಾಗಿದೆ ಎಂದು ಅಭಿಪ್ರಾಯ ಪಟ್ಟರು. ಈ ವಿಚಾರದಲ್ಲಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಘೋಷಣೆ ಮಾಡಿದ್ದರು. ಆದರೆ ಅದು ಆಗಿರಲಿಲ್ಲ. ಈಗ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಈ ಎರಡು ವಿಚಾರಗಳನ್ನು ಮುಂದಿನ ಬಜೆಟ್‍ನಲ್ಲಿ ಸೇರಿಸಿ, ಅನುದಾನ ಬಿಡುಗಡೆ ಮಾಡುವ ಜೊತೆಗೆ ಅದರ ಆರಂಭಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಮೈತ್ರಿ ಸರ್ಕಾರ ಸುಭದ್ರ: ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ. ಇದು ಪೂರ್ಣ 5 ವರ್ಷ ಸುಭದ್ರವಾಗಿರಲಿದೆ ಎಂದು ಎಂಎಲ್‍ಸಿ ಮರಿತಿಬ್ಬೇ ಗೌಡ ತಿಳಿಸಿದರು. ಸರ್ಕಾರ ಉರುಳಿಸುವ ಬಿಜೆಪಿ ಕುತಂತ್ರ ಫಲಿಸುವುದಿಲ್ಲ. ಬರೀ ವದಂತಿಗಳನ್ನು ಹರಡಿ ಮೈತ್ರಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಅವರ ಯಾವ ಪ್ರಯತ್ನವೂ ಫಲ ನೀಡುವುದಿಲ್ಲ ಎಂದು ತಿಳಿಸಿದರು.

Translate »