45, 48ನೇ ವಾರ್ಡ್ ಸದಸ್ಯರಿಂದ ಸ್ವಚ್ಛತಾ ಕಾರ್ಯ
ಮೈಸೂರು

45, 48ನೇ ವಾರ್ಡ್ ಸದಸ್ಯರಿಂದ ಸ್ವಚ್ಛತಾ ಕಾರ್ಯ

January 15, 2019

ಮೈಸೂರು: ಸ್ವಾಮಿ ವಿವೇಕಾ ನಂದರ ಜಯಂತಿ ಅಂಗವಾಗಿ ಮೈಸೂ ರಿನ 45 ಮತ್ತು 47ನೇ ವಾರ್ಡ್‍ನಲ್ಲಿ ಆಯಾ ವಾರ್ಡ್ ಸದಸ್ಯರು ತಮ್ಮ ವ್ಯಾಪ್ತಿಯ ಬಡಾವಣೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಕೈಗೊಂಡರು. 45ನೇ ವಾರ್ಡ್‍ನಲ್ಲಿ ಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್ ಅವರು ವಲಯ ಕಚೇರಿ 3ರ ಅಧಿಕಾರಿ ಗಳೊಂದಿಗೆ ಸಿಎಫ್‍ಟಿಆರ್‍ಐ ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಮುಂದೆ ಪ್ರತಿ ವಾರವೂ ಒಂದೊಂದು ಬಡಾವಣೆಯ ಸ್ವಚ್ಛತೆಗೆ ಆದ್ಯತೆ ನೀಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. 48ನೇ ವಾರ್ಡ್ ವ್ಯಾಪ್ತಿಯ ಜಯ ನಗರದಲ್ಲಿ ಸದಸ್ಯೆ ಎಂ.ಎಸ್.ಶೋಭಾ ಅವರು ನಗರಪಾಲಿಕೆ ಸಿಬ್ಬಂದಿ ಒಡಗೂಡಿ ಸ್ವಚ್ಛತಾ ಕಾರ್ಯ ಕೈಗೊಂಡರು.

ಮೈಸೂರನ್ನು ಮತ್ತೊಮ್ಮೆ ಸ್ವಚ್ಛ ನಗರಿಯಾಗಲು ನಾಗರಿಕರ ಸಹಕಾರ ಅಗತ್ಯ. ನಾಗರಿಕರು ಕೈಜೋಡಿಸಿದರೆ ಮೈಸೂರನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು ಎಂದರು.

Translate »