ಮೈಸೂರು: ಹಠಾ ತ್ತನೆ ಎದುರಾಗುವ ಅನಿರೀಕ್ಷಿತ ದುರಂತ ಗಳನ್ನು ಪರಿಣಾಮಕಾರಿಯಾಗಿ ನಿರ್ವಹಿ ಸಲು ಹಾಗೂ ಮುನ್ಸೂಚನೆ ಅರಿತು ತಡೆಗಟ್ಟಲು ಹಾಲಿ ಇರುವ ಜಿಲ್ಲಾ ಮಟ್ಟದ ವಿಕೋಪ ನಿರ್ವಹಣಾ ಯೋಜ ನೆಯನ್ನು ಪರಿಷ್ಕರಿಸಲು ಉದ್ದೇಶಿಸ ಲಾಗಿದೆ ಎಂದು ಆಡಳಿತ ತರಬೇತಿ ಸಂಸ್ಥೆಯ ತರಬೇತಿ ನಿರ್ದೇಶಕ ಓ. ಚಂದ್ರನಾಯಕ್ ಹೇಳಿದರು.
ಮೈಸೂರಿನ ನಜರ್‍ಬಾದಿನ ಜಿಲ್ಲಾ ತರಬೇತಿ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಡಳಿತ, ವಿಕೋಪ ನಿರ್ವಹಣಾ ಇಲಾಖೆ, ಆಡಳಿತ ತರಬೇತಿ ಸಂಸ್ಥೆ ಸಂಯುಕ್ತಾ ಶ್ರಯದಲ್ಲಿ `ಜಿಲ್ಲಾ ವಿಕೋಪ ನಿರ್ವಹಣಾ ಕ್ರಿಯಾ ಯೋಜನೆಯ ಪರಿಷ್ಕರಣೆ ಹಾಗೂ ತಯಾರಿಕೆ’ ಕುರಿತಂತೆ ಸರ್ಕಾರಿ ಇಲಾಖೆ ಗಳ `ಎ’ ಮತ್ತು `ಬಿ’ ದರ್ಜೆ ಸಿಬ್ಬಂದಿಗೆ ಹಮ್ಮಿಕೊಂಡಿರುವ ಎರಡು ದಿನಗಳ ಕಾರ್ಯಾಗಾರದಲ್ಲಿ ಮಂಗಳವಾರ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಇಲ್ಲವೇ ಮಾನವ ನಿರ್ಮಿತ ದುರಂತ ಗಳು ವ್ಯಾಪಕವಾಗುತ್ತಿವೆ. ಆದರೆ ಇಂತಹ ಸಂದರ್ಭದಲ್ಲಿ ಪರಿಪಕ್ವವಾಗಿ ಕಾರ್ಯ ಪ್ರವೃತ್ತರಾಗಲು ನಿರೀಕ್ಷಿತ ಮಟ್ಟದಲ್ಲಿ ಸಾಧ್ಯ ವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ 30 ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಾಗಾರ ನಡೆಸಿ, ಹಾಲಿ ಇರುವ ವಿಕೋಪ ನಿರ್ವ ಹಣಾ ಯೋಜನೆ ಪರಿಷ್ಕರಿಸಿ ನವೀಕರಿ ಸಲು ಮುಂದಾಗಲಾಗಿದೆ ಎಂದು ತಿಳಿಸಿದರು.
ದುರಂತಗಳನ್ನು ನಿಭಾಯಿಸಲು ಇಲ್ಲವೇ ತಡೆಗಟ್ಟಲು ವಿಕೋಪ ನಿರ್ವಹಣಾ ಯೋಜನೆ ಮಹತ್ವದ ಪಾತ್ರ ವಹಿಸಲಿದೆ. ಜಿಲ್ಲಾ ಮಟ್ಟದಲ್ಲಿ ಇಲಾಖಾವಾರು ವಿಕೋಪ ನಿರ್ವಹಣಾ ಯೋಜನೆ ಪರಿಷ್ಕರಿಸಿ ತಯಾರಿಸಬೇಕಿದ್ದು, ಇದನ್ನು ಸಾರ್ವಜನಿಕರ ಅನುಕೂಲಕ್ಕಾಗಿಯೂ ಜಿಲ್ಲಾಡಳಿತದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲು ಉದ್ದೇಶಿಸಲಾಗಿದೆ. ಸೂಕ್ತ ಯೋಜನೆ ಇದ್ದಲ್ಲಿ ದುರಂತದಿಂದಾಗುವ ಪ್ರಾಣ ಮತ್ತು ಆಸ್ತಿ ಹಾನಿಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲು ಸಾಧ್ಯವಿದೆ. ಜೊತೆಗೆ ದುರಂತವನ್ನೇ ತಡೆಗಟ್ಟಲು ಇರುವ ಸಾಧ್ಯತೆಗಳನ್ನು ಅರಿತು ಕೊಳ್ಳಲು ಸಾಧ್ಯವಾಗಲಿದೆ ಎಂದರು.
ಸರ್ಕಾರದ ಯಾವುದೇ ಅಭಿವೃದ್ಧಿ ಯೋಜನೆಯಾದರೂ ಅದಕ್ಕೆ ಸಂಬಂಧಿ ಸಿದಂತೆ ವಿಕೋಪ ನಿರ್ವಹಣಾ ಯೋಜನೆ ಸಹ ಇರುತ್ತದೆ. ಇದರ ಬಗ್ಗೆ ಆಯಾಯ ಇಲಾಖಾ ಅಧಿಕಾರಿಗಳು ತಿಳಿದು ಕೊಳ್ಳಬೇಕು. ದುರ್ಘಟನೆ ನಡೆದ ಒಂದು ಗಂಟೆಯೊಳಗೆ ಪರಿಹಾರ ಕಾರ್ಯ ನಡೆಸಲು ಯಶಸ್ವಿಯಾದಲ್ಲಿ ಹೆಚ್ಚು ಪ್ರಯೋಜನವಾಗಲಿದೆ. ವಿಪತ್ತು ತಡೆಗಟ್ಟು ವಿಕೆ, ಪೂರ್ವ ಸಿದ್ಧತೆ, ಸೂಕ್ತ ಸ್ಪಂದನೆ ಹಾಗೂ ಪುನರ್ವಸತಿ ಸಂದರ್ಭಗಳಲ್ಲಿ ವ್ಯವಸ್ಥಿತ ಮಾಹಿತಿಯೊಂದಿಗೆ ಸಿದ್ಧರಾಗಿರಬೇಕು ಎಂದು ತಿಳಿಸಿದರು.
ಕಾರ್ಯಾಗಾರದ ಪ್ರಶಿಕ್ಷಣಾರ್ಥಿಯೂ ಆದ ಜಿಪಂನ ಸಹಾಯಕ ಕಾರ್ಯದರ್ಶಿ ಮನೋಜ್‍ಕುಮಾರ್ ಉದ್ಘಾಟನೆ ನೆರವೇರಿಸಿ ಮಾತನಾಡಿ, ವಿಪತ್ತು ಸಂದರ್ಭ ದಲ್ಲಿ ಇಲಾಖಾವಾರು ಪೂರ್ವ ಸಿದ್ಧತೆ ಬಗ್ಗೆ ಕಾರ್ಯಾಗಾರ ಬೆಳಕು ಚೆಲ್ಲಲಿದೆ. ವಿಪತ್ತು ನಿರ್ವಹಣೆಯನ್ನು ಪರಿಣಾಮಕಾರಿ ಯಾಗಿ ನಡೆಸಲು ಈ ಕಾರ್ಯಾಗಾರ ಸಹಕಾರಿ ಆಗಲಿದೆ ಎಂದು ಹೇಳಿದರು.
ಪೊಲೀಸ್ ಇಲಾಖೆ, ಲೋಕೋಪ ಯೋಗಿ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸುಮಾರು 30 ಮಂದಿ ಸಿಬ್ಬಂದಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ. ಜಿಲ್ಲಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಕೆ.ವಿ.ಶಿವರಾಮಯ್ಯ ಮತ್ತಿತರರು ಹಾಜರಿದ್ದರು.