ಮೈಸೂರು, ಜೂ.29(ಎಂಕೆ)- ಮೈಸೂ ರಿನ ರಿಯೋ ಮೆರಿಡಿಯನ್ ಹೋಟೆಲ್ ನಲ್ಲಿ 11ನೇ ರೋಟರಿ 3181 ಜಿಲ್ಲಾ ಗೌರ್ನರ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಏರ್ಪಡಿಸಲಾಗಿತ್ತು.
2019-20ನೇ ಸಾಲಿನ ಜಿಲ್ಲಾ ಗೌರ್ನರ್ ಸ್ಥಾನಕ್ಕೆ ಆಯ್ಕೆಯಾಗಿರುವ ಕೆ.ಜೋಸೆಫ್ ಮ್ಯಾಥ್ಯೂ ಅವರಿಗೆ ರೋಟರಿ ಅಂತರ ರಾಷ್ಟ್ರೀಯ ನಿರ್ದೇಶಕ ಡಾ.ಭರತ್ ಎಸ್. ಪಾಂಡ್ಯ ಸಮ್ಮುಖದಲ್ಲಿ ಹಾಲಿ ಜಿಲ್ಲಾ ಗೌರ್ನರ್ ಪಿ.ರೋಹಿನಾಥ್ ಅಧಿಕಾರ ಹಸ್ತಾಂತರಿಸಿ ದರು. ಇದೇ ವೇಳೆ 2019-20ನೇ ಸಾಲಿನ ಪದಾಧಿಕಾರಿಗಳಾದ ಹೆಚ್.ಎಸ್.ಶಿವಣ್ಣ, ಎಂ.ಲಕ್ಷ್ಮಿನಾರಾಯಣ್, ವಿವೇಕ್ ಅತ್ತರ್, ಎಂ. ರತ್ನರಾಜ್, ರವಿಚಂದ್ರ, ಶ್ರೀನಿವಾಶ್ ರೆಡ್ಡಿ, ಡಾ.ಸುಬ್ಬರಾಯ್, ರಾಘವೇಂದ್ರ, ರಿತೇಶ್ ಬಳಿಗ, ಡಾ.ಕೇಶವ್, ಗೀತಾನಂದ ಪೈ, ಸುಮೀತ್ ರಾವ್ ಅಧಿಕಾರ ಸ್ವೀಕರಿಸಿದರು.
ರೋಟರಿ ಅಂತರರಾಷ್ಟ್ರೀಯ ನಿರ್ದೇಶಕ ಡಾ.ಭರತ್ ಎಸ್.ಪಾಂಡ್ಯ ಮಾತನಾಡಿ, ದೇಶದಲ್ಲಿ ಹೃದಯ ಸಂಬಂಧಿ, ಸಕ್ಕರೆ ಕಾಯಿ ಲೆಗೆ ಸಾಕಷ್ಟು ಜನರು ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೋಟರಿ ಸಂಸ್ಥೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಒಗ್ಗಟ್ಟಿನಿಂದ ಸೇವೆ ಮಾಡಬೇಕಾಗಿದೆ ಎಂದರು.
ವಿಶ್ವದಲ್ಲಿ ರೋಟರಿ ಸಂಸ್ಥೆ ಸಮಾಜಮುಖಿ ಯಾಗಿ ಸೇವೆ ಸಲ್ಲಿಸುತ್ತಿದೆ. ರೋಟರಿ ಸದ ಸ್ಯರು ಸಮಾಜದ ಕಾಳಜಿಯಿಂದ ನಿಸ್ವಾರ್ಥ ಸೇವೆಯನ್ನು ಮಾಡುತ್ತಿರುವುದು ಸಂತಸ ನೀಡಿದೆ. ರೋಟರಿ ಜಿಲ್ಲೆ 3181ರಲ್ಲಿ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ರೋಟರಿ ಜಿಲ್ಲೆ 3181 ಮಾಜಿ ಗೌರ್ನರ್ ಪಿ.ರೋಹಿನಾಥ್ ಮಾತನಾಡಿ, ಸಮಾ ಜಕ್ಕೆ ತನ್ನದೆ ಆದ ಸೇವೆಯನ್ನು ಸಲ್ಲಿಸು ತ್ತಿರುವ ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯು ವ್ಯಕ್ತಿ ಹಾಗೂ ವ್ಯಕ್ತಿಗೆ ನೀಡಿದ ಸ್ಥಾನಕ್ಕೂ ಹೆಚ್ಚಿನ ಆದ್ಯತೆಯನ್ನು ನೀಡು ತ್ತದೆ. ರೋಟರಿ ಸಂಸ್ಥೆಯಲ್ಲಿ ಗುಣಮಟ್ಟದ ತರಬೇತಿ ಇರುವುದರಿಂದ ಸಂಸ್ಥೆಯ ವತಿ ಯಿಂದ ಹಮ್ಮಿಕೊಳ್ಳುವ ಸಮಾಜಮುಖಿ ಕೆಲಸಗಳು ಉತ್ತಮವಾಗಿರುತ್ತವೆ ಎಂದರು.
ನೂತನ ಜಿಲ್ಲಾ ಗೌರ್ನರ್ ಕೆ.ಜೋಸೆಫ್ ಮ್ಯಾಥ್ಯೂ ಮಾತನಾಡಿ, 20 ವರ್ಷದ ಹಿಂದೆ ರೋಟರಿ ಸಂಸ್ಥೆಗೆ ಸೇರಿದೆ. ರೋಟರಿ ಸಂಸ್ಥೆ ಹಲವಾರು ಜವಾಬ್ದಾರಿಗಳನ್ನು ನಿರ್ವಹಿ ಸುವುದನ್ನು ಕಲಿಸಿದೆ. ಇಂದು ಜಿಲ್ಲಾ ಗೌರ್ನರ್ ಆಗಿ ಆಯ್ಕೆಯಾದ ಸಂತೋಷ ಉಂಟಾ ಗಿದ್ದು, 1 ವರ್ಷದ ಅವಧಿಯಲ್ಲಿ ಹಲವಾರು ಸಮಾಜಮುಖಿ ಸೇವೆಗಳನ್ನು ಮಾಡ ಬೇಕು ಎಂದು ನಿರ್ಧರಿಸಿದ್ದೇನೆ ಎಂದರು.
ರಾಜವಂಶಸ್ಥೆ ಪ್ರಮೋದಾದೇವಿ ಒಡೆ ಯರ್, ಮೈಸೂರು ಬಿಷಪ್ ಕೆ.ವಿಲಿಯಂ, ಸೆಂಟ್ ಜೋಸೆಫ್ ಕಾಲೇಜಿನ ಮುಖ್ಯಸ್ಥ ಬರ್ನಾಡ್ ಪ್ರಕಾಶ್ ಸೇರಿದಂತೆ ನೂರಾರು ರೋಟರಿ ಸದಸ್ಯರು ಭಾಗವಹಿಸಿದ್ದರು.