4 ಸಾವಿರ ಸಾಲಕ್ಕೆ 24 ವರ್ಷದ ನಂತರ 19 ಸಾವಿರ ಕಟ್ಟಲು ವೃದ್ಧ ದಂಪತಿಗೆ ಸಹಕಾರಿ ಬ್ಯಾಂಕ್ ನೋಟಿಸ್!
ಮೈಸೂರು

4 ಸಾವಿರ ಸಾಲಕ್ಕೆ 24 ವರ್ಷದ ನಂತರ 19 ಸಾವಿರ ಕಟ್ಟಲು ವೃದ್ಧ ದಂಪತಿಗೆ ಸಹಕಾರಿ ಬ್ಯಾಂಕ್ ನೋಟಿಸ್!

June 23, 2019

ಮೈಸೂರು: ಸಾಲ ತೀರಿಸಿದ್ದರೂ 24 ವರ್ಷದ ಬಳಿಕ ಸಹಕಾರ ಬ್ಯಾಂಕ್‍ವೊಂದರಿಂದ ಮತ್ತೆ ನೋಟಿಸ್ ಬಂದಿರುವುದರಿಂದ ವೃದ್ಧ ದಂಪತಿ ಕಂಗಾಲಾಗಿದ್ದಾರೆ.

ಮೈಸೂರಿನ ಶಿವರಾಂಪೇಟೆ ವಿನೋಬಾ ರಸ್ತೆಯ 5ನೇ ಉತ್ತರ ಕ್ರಾಸ್‍ನಲ್ಲಿರುವ ನಿವಾಸಿ ನಾಗರಾಜಶೆಟ್ಟಿ(81) ಹಾಗೂ ಸುಮಿತ್ರ(78) ಅವರು ಬ್ಯಾಂಕ್ ನೋಟಿಸ್‍ನಿಂದ ದಿಕ್ಕು ತೋಚ ದಂತಾಗಿದ್ದಾರೆ. 25 ವರ್ಷಗಳ ಹಿಂದೆ ಶ್ರೀ ಕನ್ಯಕಾಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ 8 ಸಾವಿರ ಸಾಲವನ್ನು ಪಡೆಯಲಾ ಗಿತ್ತು. ಸಾಲದ ಅಧರ್À ಹಣವನ್ನು ಮರು ಪಾವತಿ ಮಾಡಿದ್ದು, ಇನ್ನುಳಿದ ಹಣಕ್ಕೆ 1995ರ ಮಾರ್ಚ್ 11ರಂದು ಮನೆಯಲ್ಲಿದ್ದ ಟಿವಿ, ಟೇಬಲ್ ಫ್ಯಾನ್, ಗೋಡೆ ಗಡಿಯಾರ, ರೌಂಡ್ ಸ್ಟೂಲ್ ಇನ್ನಿತರೆ ವಸ್ತುಗಳನ್ನು ಪೊಲೀಸರ ಸಮ್ಮುಖ ದಲ್ಲಿ ಜಪ್ತಿ ಮಾಡಲಾಗಿದೆ. ಇದಾದ ಬಳಿಕ ಬ್ಯಾಂಕ್‍ನಿಂದ ಯಾವುದೇ ಮಾಹಿತಿ ನಮಗೆ ಬಂದಿಲ್ಲ. ಇದೀಗ 24 ವರ್ಷದ ಬಳಿಕ ಸಾಲ ಮರು ಪಾವತಿಸುವಂತೆ 3 ನೋಟಿಸ್‍ಗಳು ಬಂದಿವೆ. ಈ ವಯಸ್ಸಿನಲ್ಲಿ ಓಡಾಡುವುದೂ ಕಷ್ಟ. ಮುಂದೇನು ಮಾಡಬೇಕೆಂಬುದೇ ಗೊತ್ತಾ ಗುತ್ತಿಲ್ಲ ಎಂದು ದಂಪತಿ ಕಣ್ಣೀರಿಡುತ್ತಿದ್ದಾರೆ.

ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಕಡಿಮೆ ಬೆಲೆಗೆ ಜಪ್ತಿ ಮಾಡಿರುವುದಲ್ಲದೆ, ಮತ್ತೆ ಬಡ್ಡಿ ಸೇರಿ 19,576 ರೂ.ಗಳನ್ನು ಕಟ್ಟಬೇಕು ಎಂದು ನೋಟಿಸ್ ಕಳುಹಿಸಿದ್ದಾರೆ. ವಯ ಸ್ಸಾಗಿರುವ ಕಾಲದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಜು.21ರಂದು ನಡೆಯುವ ಸರ್ವ ಸದಸ್ಯರ ಸಭೆಯಲ್ಲಿ ಮತದಾನಕ್ಕೂ ಅವಕಾಶ ನೀಡಿಲ್ಲ. ಪತ್ನಿ ಸುಮಿತ್ರ ವಯೋಸಹಜ ಕಾಯಿಲೆ ಯಿಂದ ನರಳುತ್ತಿದ್ದಾರೆ. ಮೂರ್ನಾಲ್ಕು ಅಂಗಡಿ ಗಳಲ್ಲಿ ಲೆಕ್ಕ ಬರೆಯುವ ಕೆಲಸ ಮಾಡಿಕೊಂಡು ಅದರಿಂದ ಬರುವ ನೂರಿನ್ನೂರು ಹಣದಲ್ಲಿ ಕಷ್ಟಕರ ಜೀವನ ನಡೆಸುತ್ತೇವೆ. 81 ವರ್ಷದವ ನಾದ ನಾನು ಹೆಚ್ಚು ಕೆಲಸ ಮಾಡಲೂ ಶಕ್ತನಲ್ಲ ಎಂದು ನಾಗರಾಜಶೆಟ್ಟಿ `ಮೈಸೂರು ಮಿತ್ರ’ನೊಂದಿಗೆ ಅಳಲು ತೋಡಿಕೊಂಡರು.

ಕೆಲವು ದಿನಗಳ ಹಿಂದೆ ಬ್ಯಾಂಕ್‍ನ ಅಧಿಕಾರಿ ಗಳು ಮನೆ ಬಳಿ ಬಂದು ಸಾಲ ಮರು ಪಾವತಿ ಮಾಡುವಂತೆ ಎಚ್ಚರಿಕೆ ನೀಡಿದ್ದರು. ಆಗ ಮನೆಯ ವಸ್ತುಗಳನ್ನು ಜಪ್ತಿ ಮಾಡಿ ರುವ ಸಂಬಂಧ ನಮ್ಮ ಬಳಿ ಇರುವ ದಾಖಲೆ ಯನ್ನು ತೋರಿಸಿದಾಗ ಸುಮ್ಮನೆ ವಾಪಸ್ಸಾದರು. ಇಳಿ ವಯಸ್ಸಿನಲ್ಲಿ ಸಾಲ ತೀರಿಸಿ ಎಂದರೆ ಏನು ಮಾಡುವುದು?. ಮಾಡಿದ್ದು 8 ಸಾವಿರ ಸಾಲ. ಅದರಲ್ಲಿ ಅರ್ಧದಷ್ಟು ಬಾಕಿ ಇದ್ದ ಕಾರಣಕ್ಕೆ ಮನೆ ವಸ್ತುಗಳನ್ನು ಜಪ್ತಿ ಮಾಡಿದ್ದು. ಈಗ ಇನ್ನೂ 19 ಸಾವಿರ ಕಟ್ಟಬೇಕೆಂದು ನೋಟಿಸ್ ನೀಡುತ್ತಿದ್ದಾರೆ. ನಮಗೆ ದಿಕ್ಕೇ ತೋಚುತ್ತಿಲ್ಲ ಎಂದು ಹೇಳಿ ಸುಮಿತ್ರಮ್ಮ ಕಣ್ಣೀರಾದರು.

Translate »