ಕೊಡಗಿನ ನೆರೆ ಸಂತ್ರಸ್ತರಿಗೆ ರೂ. 3.24 ಲಕ್ಷ ಸಹಾಯ ಧನ ವಿತರಣೆ
ಕೊಡಗು

ಕೊಡಗಿನ ನೆರೆ ಸಂತ್ರಸ್ತರಿಗೆ ರೂ. 3.24 ಲಕ್ಷ ಸಹಾಯ ಧನ ವಿತರಣೆ

December 28, 2018

ವೀರಾಜಪೇಟೆ: ವೀರಾಜಪೇಟೆ ವಿಕ್ಟೋರಿಯ ಕ್ಲಬ್ ವತಿಯಿಂದ ಇತ್ತೀಚೆಗೆ ಕೊಡಗಿನಲ್ಲಿ ಪ್ರಕೃತಿ ವಿಕೋಪ ದಿಂದ ಮನೆ-ಆಸ್ತಿ ಕಳೆದುಕೊಂಡ 15 ಮಂದಿ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಲಾಯಿತು.

ವಿಕ್ಟೋರಿಯಾ ಕ್ಲಬ್ ಸಭಾಂಗಣದಲ್ಲಿ ಕ್ಲಬ್ ಅಧ್ಯಕ್ಷ ಮುಕ್ಕಾಟಿರ ಕ್ಯಾಟಿ ಉತ್ತಪ್ಪ ಅಧ್ಯಕ್ಷತೆಯಲ್ಲಿ ಪರಿಹಾರ ವಿತರಣಾ ಕಾರ್ಯಕ್ರಮ ಆಯೋ ಜಿಸಲಾಗಿತ್ತು. ಬೆಂಗಳೂರಿನ ಉದ್ಯಮಿ ಮುಕ್ಕಾಟ್ಟಿರ ಅಣ್ಣಯ್ಯ, ಬೆಂಗಳೂರು ಕೊಡವ ಸಮಾಜದ ಮಾಜಿ ಅಧ್ಯಕ್ಷ ಮಂಡೆಡ ರವಿ ಉತ್ತಪ್ಪ, ಮಾಕ್ಸ್‍ಮೆನ್ ಸಂಸ್ಥೆ ಅಧ್ಯಕ್ಷ ಡಾ, ಮುಕ್ಕಾಟ್ಟರ ಕಾರ್ಯಪ್ಪ ಅವರುಗಳು ಒಟ್ಟು 15 ಸಂತ್ರಸ್ತರಿಗೆ ರೂ. 3.24 ಲಕ್ಷ ಪರಿಹಾರ ವಿತರಿಸಿದರು.
ಕಾರ್ಯಕ್ರಮದಲ್ಲಿ ಮಂಡೆಡ ರವಿ ಉತ್ತಪ್ಪ ಮಾತನಾಡಿ, ದಾನಿಗಳಿಂದ ರೂ, 2.50 ಕೋಟಿ ಸಂಗ್ರಹ ಮಾಡಿದ್ದು, ಶೀಘ್ರದಲ್ಲಿಯೇ ಇದನ್ನು ಅರ್ಹ ಸಂತ್ರಸ್ತರಿಗೆ ವಿತರಿಸಲಾಗುವುದು ಎಂದರು. ಈ ಸಂದರ್ಭ ಮಾರ್ಚಂಡ ಗಣೇಶ್, ಕ್ಲಬ್‍ನ ಕಂಡ್ರತಂಡ ಪ್ರವೀಣ್, ನಡಿಕೇರಿಯಂಡ ಅರ್ಜುನ್ ಕಾವೇರಪ್ಪ, ಪೊನ್ನಣ್ಣ, ಎನ್.ಎಂ.ಕಿರಣ್ ಕುಟ್ಟಪ್ಪ, ಪಿ.ಕೆ.ಚಂಗಪ್ಪ, ಪಿ.ಎಂ.ತಿಮ್ಮಯ್ಯ, ಕೆ.ಎಂ.ದೇವಯ್ಯ, ಬಿ.ಜಿ.ಪೊನ್ನಪ್ಪ, ಮುಂತಾದವರು ಉಪಸ್ಥಿತರಿದ್ದರು.

Translate »