ಸುಂಟಿಕೊಪ್ಪದಲ್ಲಿ ಶ್ರೀಅಯ್ಯಪ್ಪಸ್ವಾಮಿ ಮಂಡಲ ಪೂಜೆ
ಕೊಡಗು

ಸುಂಟಿಕೊಪ್ಪದಲ್ಲಿ ಶ್ರೀಅಯ್ಯಪ್ಪಸ್ವಾಮಿ ಮಂಡಲ ಪೂಜೆ

December 28, 2018

ಸುಂಟಿಕೊಪ್ಪ: ಇಲ್ಲಿನ ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದ 48ನೇ ವಾರ್ಷಿಕ ಮಂಡಲ ಪೂಜಾ ಮಹೋತ್ಸವವು ಶ್ರದ್ಧಾಭಕ್ತಿ ಯಿಂದ ಭಕ್ತಾಧಿಗಳ ಸಮ್ಮು ಖದಲ್ಲಿ ನೆರವೇರಿತು.

ಅಯ್ಯಪ್ಪ ಸ್ವಾಮಿ ಕ್ಷೇತ್ರದ 48ನೇ ವಾರ್ಷಿಕ ಮಂಡಲ ಪೂಜಾ ಮಹೋತ್ಸವದ ಅಂಗವಾಗಿ ದೇವಾಲಯದ ಆವರಣವನ್ನು ತಳಿರು ತೋರಣ, ವಿವಿಧ ಬಗೆಯ ಹೂವಿನಿಂದ ಅಲಂಕಾರ ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಅಯ್ಯಪ್ಪ ಸ್ವಾಮಿ ಕ್ಷೇತ್ರದ 48ನೇ ವಾರ್ಷಿಕ ಮಂಡಲ ಪೂಜೋತ್ಸವದ ಅಂಗವಾಗಿ ಬೆಳಿಗ್ಗೆ 6.45 ಗಂಟೆಗೆ ಗಣಪತಿ ಹೋಮ, 7.30 ಗಂಟೆಗೆ ಚಂಡೆ ಮೇಳ, 9 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ಪಂಚಾಮೃತಾಭಿಷೇಕ, 12 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ಮಧ್ಯಾಹ್ನ ಪೂಜೆ, 12.30 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ಲಕ್ಷಾರ್ಚನೆ, ಪಲ್ಲಪೂಜೆ, ವಿಶೇಷ ಪೂಜೆಯಾದ ಬಿಲ್ವಪತ್ರೆ ಆರ್ಚನೆ, ತುಳಸಿ ಆರ್ಚನೆ, ಪಂಚಾಮೃತ ಅಭಿಷೇಕ ಹಾಗೂ ದೂರ್ವಾಸನಾ ಪೂಜೆಯನ್ನು ಆರ್ಚಕರಾದ ಗಣೇಶ ಉಪಾಧ್ಯಾ ಯರ ತಂಡದೊಂದಿಗೆ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಅಯ್ಯಪ್ಪ ವ್ರತಾಧಾರಿಗಳು, ಭಕ್ತಾಧಿಗಳು ಹಾಗೂ ಶಾಲಾ ಮಕ್ಕಳು ಮಂಡಲ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ 1 ಗಂಟೆಯಿಂದ ಅಯ್ಯಪ್ಪ ವ್ರತಾಧಾರಿ, ಭಕ್ತಾಧಿಗಳು ಹಾಗೂ ಶಾಲಾ ಮಕ್ಕಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

Translate »