ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ
ಚಾಮರಾಜನಗರ

ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ

January 15, 2019

ಕೊಳ್ಳೇಗಾಲ: ಕಬಡ್ಡಿ ಒಂದು ಅತ್ಯುತ್ತಮ ಕ್ರೀಡೆ ಯಾಗಿದ್ದು, ಈ ಹಿನ್ನೆಲೆ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪೆÇ್ರೀತ್ಸಾಹ ನೀಡುವ ಅಗತ್ಯವಿದೆ ಎಂದು ಸಂಸದ ಧ್ರುವನಾರಾಯಣ್ ಹೇಳಿದರು.

ಅವರು ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆಯುವ ರಾಜ್ಯಮಟ್ಟದ ಜ್ಯೂನಿಯರ್ ಚಾಂಪಿಯನ್ ಶಿಪ್ ಕಬಡ್ಡಿ ಪಂದ್ಯಾವಳಿಗೆ ಚಾಮರಾಜನಗರ ಜಿಲ್ಲೆಯಿಂದ ತೆರಳಲಿರುವ ತಂಡದ ಆಟಗಾರರು ಹಾಗೂ ತರಬೇತುದಾರರಿಗೆ ಪಟ್ಟಣದ ಲಯನ್ಸ್ ಶಾಲಾ ಆವರಣದಲ್ಲಿ ಬೀಳ್ಕೊಟ್ಟು ಮಾತನಾಡಿದರು.

ಶಾಸಕ ಎನ್.ಮಹೇಶ್ ಮಾತನಾಡಿ, ನಾನು ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಪೆÇ್ರೀತ್ಸಾಹ ನೀಡುತ್ತೇನೆ. ಅದರಲ್ಲೂ ವಿಶೇಷವಾಗಿ ಕಬಡ್ಡಿಗೆ ಹೆಚ್ಚು ಇಷ್ಟಪಡುತ್ತೇನೆ. ನಿಮ್ಮ ತಂಡವು ಹೀಗೆ ಮುಂದುವರೆದು ರಾಜ್ಯ ಮಟ್ಟವಲ್ಲದೇ ರಾಷ್ಟ್ರಮಟ್ಟಕ್ಕೂ ಹೋಗಿ ಸಾಧನೆಗೈಯುವಂತಾ ಗಲಿ ಎಂದರು. ಈಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಜಯಣ್ಣ, ನಗರಸಭೆ ಮಾಜಿ ಅಧ್ಯಕ್ಷರುಗಳಾದ ರಮೇಶ್, ಶಾಂತರಾಜು, ನಗರಸಭೆ ಸದಸ್ಯರಾದ ಮಂಜುನಾಥ್, ಜಯಮರಿ, ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಮುಖಂಡ, ಶಾಂತರಾಜು, ನಗರಸಭೆ ಮಾಜಿ ಉಪಾ ಧ್ಯಕ್ಷ ಹರ್ಷ, ನಗರಸಭೆ ಆಯುಕ್ತ ನಾಗಶೆಟ್ಟಿ, ಲಯನ್ಸ್ ಸಂಸ್ಥೆಯ ಖಜಾಂಚಿ ಜಿ.ಎಸ್.ಮಹಾದೇವಪ್ರಸಾದ್, ಮುಡಿಗುಂಡ ಮೂರ್ತಿ ಇದ್ದರು.

Translate »