ಮೈಸೂರು: ವಿಧಾನ ಪರಿಷತ್ ಸದಸ್ಯ, ಉದ್ಯಮಿ ಸಂದೇಶ್ ನಾಗರಾಜು ಹಾಗೂ ನೇತ್ರಾ ವತಿ ದಂಪತಿ 50ನೇ ವಿವಾಹ ವಾರ್ಷಿ ಕೋತ್ಸವ ಸೋಮವಾರ ಇಂದಿರಾನಗ ರದ ಸ್ವಗೃಹದಲ್ಲಿ ಅಪಾರ ಹಿತೈಷಿಗಳ ಸಮ್ಮುಖ ದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಮೈಸೂರಿನ ಇಂದಿರಾನಗರ (ಇಟ್ಟಿಗೆ ಗೂಡು)ದಲ್ಲಿರುವ ನಿವಾಸದಲ್ಲಿ ನಡೆದ 50ನೇ ವಿವಾಹ ವಾರ್ಷಿಕೋತ್ಸವದಲ್ಲಿ ರಾಜ ಕೀಯ, ಚಲನಚಿತ್ರ ರಂಗದ ಪ್ರಮುಖರು, ಅಧಿಕಾರಿ ವರ್ಗ, ಸಾಮಾಜಿಕ ಕ್ಷೇತ್ರದ ಗಣ್ಯರು ಪಾಲ್ಗೊಂಡು ಶುಭ ಕೋರಿದರು.
ಪುರೋಹಿತ ವೆಂಕಟೇಶ್ ನೇತೃತ್ವದಲ್ಲಿ ವಿವಾಹ ಕಾರ್ಯದಲ್ಲಿ ನಡೆಯುವ ಎಲ್ಲಾ ಶಾಸ್ತ್ರಗಳನ್ನು ನೆರವೇರಿಸಿ ಮಾಂಗಲ್ಯ ಧಾರಣೆ ಮಾಡಲಾಯಿತು.
ವಿವಾಹ ವಾರ್ಷಿಕೋತ್ಸವ ಅಂಗವಾಗಿ ಹೋಮ-ಹವನ ನಡೆಸಲಾಯಿತು. ಮುಂಜಾನೆಯಿಂದಲೇ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ಸಂದೇಶ್ ನಾಗರಾಜು ಅವರ ಮಕ್ಕಳು, ಮೊಮ್ಮ ಕ್ಕಳು, ಸಹೋದರ ಕುಟುಂಬದ ಸದ ಸ್ಯರು, ಸಂಬಂಧಿಗಳು ವಿವಿಧ ಶಾಸ್ತ್ರಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಕಾರ್ಯಕ್ರಮದ ಅಂಗವಾಗಿ ಮನೆಯ ಪಕ್ಕದಲ್ಲಿದ್ದ ಖಾಲಿ ನಿವೇಶನದಲ್ಲಿ ಸಂಗೀತ ನಿರ್ದೇಶಕರಾದ ಸಾಧು ಕೋಕಿಲ, ಅರ್ಜುನ್ ಜನ್ಯ ನೇತೃತ್ವದಲ್ಲಿ ಸಂಗೀತ ಸಂಜೆ ಆಯೋಜಿಸಲಾಗಿತ್ತು. ಇದು ವಿವಾಹ ವಾರ್ಷಿಕೋತ್ಸವಕ್ಕೆ ಮತ್ತಷ್ಟು ಕಳೆ ಕಟ್ಟುವಂತೆ ಮಾಡಿತ್ತು. ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ನಡೆದ ಕಾರ್ಯ ಕ್ರಮದಲ್ಲಿ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಮಂದಿ ಹಿತೈಷಿಗಳು ಆಗಮಿ ಸಿದ್ದರು. ಸುವರ್ಣ ವಿವಾಹ ವಾರ್ಷಿ ಕೋತ್ಸವ ಆಚರಿಸಿ, ಸಂಭ್ರಮದಲ್ಲಿದ್ದ ಉದ್ಯಮಿ ಸಂದೇಶ್ ನಾಗರಾಜು ಹಾಗೂ ನೇತ್ರಾವತಿ ದಂಪತಿಗೆ ಶುಭ ಕೋರಿ, ಹಾರೈಸಿದರು.
ಗಣ್ಯರಿಂದ ಶುಭಾಶಯ: ಸಂದೇಶ್ ನಾಗರಾಜು ದಂಪತಿಗೆ 50ನೇ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಶಾಸಕ ಎಲ್.ನಾಗೇಂದ್ರ, ಮಾಜಿ ಸಚಿವರಾದ ನರೇಂದ್ರಸ್ವಾಮಿ, ಶಿವರಾಜ್ ತಂಗಡಗಿ, ಚೆಲುವರಾಯಸ್ವಾಮಿ, ತನ್ವೀರ್ ಸೇಠ್, ಮೇಯರ್ ಪುಷ್ಪಲತಾ ಜಗನ್ನಾಥ್, ಮಾಜಿ ಶಾಸಕ ಇ.ಕೃಷ್ಣಪ್ಪ, `ಮೈಸೂರು ಮಿತ್ರ’ ಪತ್ರಿಕೆಯ ಪ್ರಧಾನ ಸಂಪಾದಕರಾದ ಕೆ.ಬಿ. ಗಣಪತಿಯವರು, ಶ್ರೀಮತಿ ರ್ಯಾಲಿ ಗಣಪತಿ ಯವರು, ಚಿತ್ರ ನಟರಾದ ದರ್ಶನ್, ಸೃಜನ್ ಲೋಕೇಶ್, ಅಭಿಷೇಕ್ ಅಂಬ ರೀಶ್, ನಗರಪಾಲಿಕೆ ಸದಸ್ಯರು, ಮಾಜಿ ಮೇಯರ್‍ಗಳು, ಉದ್ಯಮಿಗಳು, ಸಮಾಜ ಸೇವಕರು ಆಗಮಿಸಿ ಶುಭ ಕೋರಿದರು. ಸುಮಾರು ಎಂಟು ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮಗ ಸಂದೇಶ್, ಮಗಳು ಬೃಂದಾ ಜಯರಾಮ್, ಮಗ ಮಂಜೇಶ್, ಮೊಮ್ಮಕ್ಕಳು, ಸೊಸೆಯಂ ದಿರು, ಸಂಬಂಧಿಗಳು ಉಪಸ್ಥಿತರಿದ್ದರು.