ಪೇಪರ್‍ಲೆಸ್ ಕಚೇರಿ ಮಾಡಲು ಜಾರಿಗೆ ತಂದಿದ್ದ `ಸಂಯೋಜನೆ’ ಆ್ಯಪ್ ಸ್ತಬ್ಧ
ಮೈಸೂರು

ಪೇಪರ್‍ಲೆಸ್ ಕಚೇರಿ ಮಾಡಲು ಜಾರಿಗೆ ತಂದಿದ್ದ `ಸಂಯೋಜನೆ’ ಆ್ಯಪ್ ಸ್ತಬ್ಧ

November 11, 2019

ಮೈಸೂರು,ನ.10- ಕಾಗದ ಮುಕ್ತ ಕಚೇರಿ ಮಾಡುವ ನಿಟ್ಟಿನಲ್ಲಿ ಕಂದಾಯ ಸೇವೆಗಳನ್ನು ನೀಡಲು ಗ್ರಾಮಲೆಕ್ಕಿಗರು ಹಾಗೂ ಕಂದಾಯಾಧಿಕಾರಿಗಳಿ ಗಾಗಿ ಹೊಸದಾಗಿ ಜಾರಿಗೆ ತಂದಿರುವ `ಸಂಯೋಜನೆ ಆ್ಯಪ್’ ಆರಂಭ ದಲ್ಲೇ ತಾಂತ್ರಿಕ ದೋಷಕ್ಕೆ ತುತ್ತಾಗಿದೆ. ಇದರಿಂದ ಮೈಸೂರು ತಾಲೂ ಕಿನ `ನಾಡಕಚೇರಿ’ ಹಾಗೂ `ಅಟಲ್ ಜೀ ಜನಸ್ನೇಹಿ ಕೇಂದ್ರ’ದಲ್ಲಿ ಸಲ್ಲಿಕೆಯಾದ 69,800 ಅರ್ಜಿಗಳು ಇತ್ಯರ್ಥವಾಗದೆ ನೆನೆಗುದಿಗೆ ಬಿದ್ದಿದ್ದು, ರೈತರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಮೈಸೂರು ತಾಲೂಕು ಕಚೇರಿಯನ್ನು ಹಂತ ಹಂತವಾಗಿ ಕಾಗದ ರಹಿತ ಕಚೇರಿ ಮಾಡಬೇಕೆಂಬ ಉದ್ದೇಶದಿಂದ ಮೊದಲ ಹಂತದಲ್ಲಿ ನಾಡಕಚೇರಿಯಲ್ಲಿ ರೈತರಿಗೆ ಆ್ಯಪ್ ಮೂಲಕ ಸೇವೆ ನೀಡಲು ನಿರ್ಧ ರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅ.20ರಂದು `ಸಂಯೋಜನೆ ಆ್ಯಪ್’ ಅನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಮೈಸೂರು ತಾಲೂಕಿನ ಆರ್‍ಐ (ಕಂದಾಯಾಧಿಕಾರಿಗಳು) ಹಾಗೂ ಗ್ರಾಮಲೆಕ್ಕಿಗರಿಗೆ ಆ್ಯಪ್ ಬಳಕೆ ಬಗ್ಗೆ ಮಾಹಿತಿ ನೀಡಲಾಗಿತ್ತು. ಅ.21ರಿಂದ 23ರವರೆಗೆ ನಿಧಾನಗತಿಯಲ್ಲಿ ಕೆಲಸ ಮಾಡುತ್ತಿದ್ದ ಈ ಆ್ಯಪ್ ಅ.24ರಂದು ತಾಲೂಕು ಕಚೇರಿ ಸರ್ವರ್‍ಗೆ ಸಂಪರ್ಕ ಸಿಗದೆ ತಲೆನೋವು ತಂದಿತ್ತಿದೆ.

ಸಾಕಷ್ಟು ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ವಿವಿಧ ಸೇವೆಗಳಿಗೆ ಅರ್ಜಿ ಸಲ್ಲಿಸಿರುವವರು ಕಳೆದ 15 ದಿನಗಳಿಂದ ಕಾಯುವಂತಾಗಿದೆ.

38 ಬಗೆಯ ಸೇವೆ ಸ್ಥಗಿತ: ಮೈಸೂರು ತಾಲೂಕಿನಲ್ಲಿ ಮೂರು ನಾಡಕಚೇರಿಯಿದ್ದು, ನಗರದಲ್ಲಿ 6 ಅಟಲ್ ಜೀ ಜನಸ್ನೇಹಿ ಸೇವಾ ಕೇಂದ್ರಗಳಿವೆ. ಜಯಪುರ, ವರುಣಾ, ಇಲವಾಲ ಹೋಬಳಿ ಯಲ್ಲಿ ನಾಡಕಚೇರಿ ಇದ್ದರೆ, ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಕಟ್ಟಡ, ಜಯನಗರ, ಆಕಾಶವಾಣಿ, ರಾಮಕೃಷ್ಣ ಪರಮಹಂಸÀ ವೃತ್ತ, ಹೆಬ್ಬಾಳು, ಎಫ್‍ಟಿಎಸ್(ಅಂಬೇಡ್ಕರ್) ವೃತ್ತದಲ್ಲಿರುವ ಪಾಲಿಕೆ ಕಚೇರಿಯಲ್ಲಿ ಅಟಲ್ ಜೀ ಜನಸ್ನೇಹಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಈ ಎಲ್ಲಾ ಕಚೇರಿಗಳಲ್ಲಿ 38 ಬಗೆಯ ಸೇವೆಯನ್ನು ನೀಡಲಾಗುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರಮಾಣ ಪತ್ರ, ಆದಾಯ, ಜಾತಿ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ, ಎನ್‍ಟಿಸಿ, ಗೇಣಿ ದೃಢೀಕರಣ, ವ್ಯವಸಾಯ ದೃಡೀಕರಣ, ಭೂ ಹಿಡುವಳಿ, ಪಿಂಚಣಿ, ಸಾಮಾಜಿಕ ಭದ್ರತೆ, ವಿದವಾ ವೇತನ, ಸಂಧ್ಯಾ ಸುರಕ್ಷಾ, ವಿಕಲಚೇತನರ ವೇತನ, ರಾಷ್ಟ್ರೀಯ ಭದ್ರತಾ ಯೋಜನೆ ಹಾಗೂ ಇನ್ನಿತರ ಸೇವೆ ಪಡೆಯಲು ದಿನಕ್ಕೆ 2500ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸುತ್ತಾರೆ. ಆದರೆ `ಸಂಯೋಜನೆ ಆ್ಯಪ್’ ತಾಂತ್ರಿಕ ದೋಷದಿಂದ ಕಾರ್ಯನಿರ್ವಹಿಸದೇ ಇರುವುದರಿಂದ ಇದೀಗ ಸೇವೆ ಪಡೆಯಲು ಅರ್ಜಿ ಸಲ್ಲಿಸಿರುವವರು ಪ್ರತಿದಿನ ಕಚೇರಿಗೆ ಬಂದು ಅಲೆಯುವಂತಾಗಿದೆ. ಅ.24ರಿಂದ ನ.10ರವರೆಗೆ ಒಂಭತ್ತು ಕಚೇರಿಗಳಲ್ಲಿ 69,800 ಅರ್ಜಿ ಸಲ್ಲಿಕೆಯಾಗಿವೆ.

ಮೊಬೈಲ್‍ನಲ್ಲಿ ಅಪ್ಲಿಕೇಷನ್ ತೋರಿಸುತ್ತಿಲ್ಲ: ಮೇಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕಿನ ಕಂದಾಯಾಧಿಕಾರಿ(ಆರ್‍ಐ), ಗ್ರಾಮಲೆಕ್ಕಿಗರು(ವಿಎ) `ಸಂಯೋಜನೆ ಆ್ಯಪ್’ ಅನ್ನು ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ಆದರೆ ಬಹುತೇಕರ ಮೊಬೈಲ್‍ಗಳಲ್ಲಿ ಈ ಅಪ್ಲಿಕೇಷನ್ ತೋರಿಸುತ್ತಿಲ್ಲ. ಇದು ವಿಎ ಹಾಗೂ ಆರ್‍ಐಗಳಿಗೆ ಸಂಕಷ್ಟ ತಂದಿತ್ತಿದೆ. ಎಷ್ಟೇ ಪ್ರಯತ್ನಿಸಿದರೂ ಮೊಬೈಲ್‍ನಲ್ಲಿ `ಸಂಯೋಜನೆ ಆ್ಯಪ್’ ಕಾಣಿಸದೇ ಇರುವುದ ರಿಂದ ಕಂಗೆಟ್ಟಿದ್ದರೆ, ಅರ್ಜಿ ಸಲ್ಲಿಸಿದ್ದವರ ಒತ್ತಡ ಅವರನ್ನು ಮತ್ತಷ್ಟು ಕುಗ್ಗಿಸುವಂತಾಗಿದೆ.

ಮೊಬೈಲ್‍ನಿಂದ ಆಗಲ್ಲ, ಕಂಪ್ಯೂಟರ್ ಅಥವಾ ಲ್ಯಾಪ್‍ಟಾಪ್ ಬೇಕು: ರೈತರು, ವಿದ್ಯಾರ್ಥಿ ಗಳು ಹಾಗೂ ಸೌಲಭ್ಯ ಆಕಾಂಕ್ಷಿಗಳು ಸಲ್ಲಿಸುವ ಅರ್ಜಿಯನ್ನು ಮೊಬೈಲ್ ನಿಂದ ಇತ್ಯರ್ಥ ಪಡಿಸುವುದು ಕಷ್ಟ ಸಾಧ್ಯವಾಗಿದೆ. ಈ `ಸಂಯೋಜನೆ ಆ್ಯಪ್’ ಮೂಲಕವೇ ಕಂಪ್ಯೂಟರ್ ಅಥವಾ ಲ್ಯಾಪ್‍ಟಾಪ್‍ನಲ್ಲಿ ಅರ್ಜಿಯನ್ನು ಇತ್ಯರ್ಥಪಡಿಸಬಹುದಾಗಿದೆ. ಅಲ್ಲದೆ ಒಂದು ಅರ್ಜಿ ವಿಲೇವಾರಿ ಮಾಡಲು 5ರಿಂದ 7 ನಿಮಿಷ ಅಗತ್ಯವಿದ್ದು, ಮೊಬೈಲ್ ನಲ್ಲಾದರೇ ಇನ್ನಷ್ಟು ತಡವಾಗಲಿದೆ ಎಂದು ಕೆಲವು ಗ್ರಾಮಲೆಕ್ಕಿಗರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

Translate »