ಟಿ.ಎನ್.ಶೇಷನ್ ವಿಧಿವಶ
ಮೈಸೂರು

ಟಿ.ಎನ್.ಶೇಷನ್ ವಿಧಿವಶ

November 11, 2019

ಚೆನ್ನೈ, ನ.10- ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಶಿಸ್ತು, ಅಭ್ಯರ್ಥಿಗಳ ಭ್ರಷ್ಟತನಕ್ಕೆ ಕಡಿವಾಣ ಹಾಕಿದ್ದ ದಕ್ಷ ಅಧಿಕಾರಿ ಟಿ.ಎನ್ ಶೇಷನ್ ಇಂದು ಚೆನ್ನೈನ ಅಡೆಯಾರ್ ನಲ್ಲಿರುವ ತಮ್ಮ ಸ್ವಗೃಹದಲ್ಲಿ ಭಾನುವಾರ ರಾತ್ರಿ ನಿಧನ ರಾದರು. ಭಾರತದ 10ನೇ ಮುಖ್ಯ ಚುನಾ ವಣಾ ಆಯುಕ್ತರಾಗಿ ಡಿಸೆಂಬರ್ 12, 1990 ರಿಂದ ಡಿಸೆಂಬರ್ 11, 1996ರ ತನಕ ಕಾರ್ಯ ನಿರ್ವಹಿಸಿದ್ದ ಶೇಷನ್, 1955ರ ಬ್ಯಾಚಿನ ತಮಿಳು ನಾಡು ಕೇಡರ್‍ನ ಐಎಎಸ್ ಅಧಿಕಾರಿಯಾಗಿ 1989ರಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ಕೂಡಾ ಕರ್ತವ್ಯ ನಿರ್ವಹಿಸಿದ್ದರು. 1996ರಲ್ಲಿ ರಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿಗೆ ಭಾಜನರಾಗಿ ದ್ದರು. ಕೇರಳದ ಪಾಲಕ್ಕಾಡ್ ಜಿಲ್ಲೆಯ ತಿರು ನೆಲ್ಲೈನಲ್ಲಿ 1932ರಲ್ಲಿ ಜನಿಸಿದ ಅವರು ಭೌತ ಶಾಸ್ತ್ರದಲ್ಲಿ ಪದವಿ ಪಡೆದು ಕೆಲ ಕಾಲ ಮದ್ರಾಸ್ ಕ್ರೈಸ್ತ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದ್ದರು. ನಂತರ ಐಎಎಸ್ ಪರೀಕ್ಷೆ ಬರೆದು ನಾಗರಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಹಾರ್ವಡ್ ವಿವಿಯಲ್ಲಿ ಗಳಿಸಿದ್ದರು. ನಮ್ಮ ದೇಶದ ಒಬ್ಬ ಪ್ರಧಾನಿಯನ್ನು ಕೊಂದ ಬಣವೊಂದರ ಸಹೋದರ ಪಕ್ಷದೊಂದಿಗೆ ಯಃಕಶ್ಚಿತ್ ಗದ್ದುಗೆ ಆಸೆಗೆ ನೆಂಟಸ್ತಿಕೆ ಬೆಳೆಸುವುದು ಇವತ್ತಿನ ರಾಜಕಾರಣದಲ್ಲಿ ಬಟಾ ಬೆತ್ತಲು. ತಮಿಳುನಾಡಿನ ಎಐಎಡಿಎಂಕೆ- ಕಾಂಗ್ರೆಸ್ಸು- ಪಾಟ್ಟಾಳಿ ಮಕ್ಕಳ್ ಕಚ್ಚಿ (ಎಲ್‍ಟಿ ಟಿಇಗೆ ಅಯ್ಯೋ ಪಾಪ ಅನ್ನುವ ಪಕ್ಷ) ಒಡಂಬಡಿಕೆಯನ್ನು ಮಾಜಿ ಮುಖ್ಯ ಚುನಾ ವಣಾ ಆಯುಕ್ತ ಟಿ.ಎನ್.ಶೇಷನ್ ಉದಾಹರಣೆ ಸಮೇತ ತಮ್ಮ ಭಾಷಣದಲ್ಲಿ ಹೇಳಿದ್ದರು. 2001ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ‘ಭಾರತದಲ್ಲಿ ರಾಜಕೀಯದ ಸ್ಥಿತಿ- ಗತಿ’ ಎಂಬ ವಿಷಯದ ಬಗ್ಗೆ ಮಾತನಾಡಿದ್ದ ಅವರು, ಭಾರತದ ರಾಜಕಾರಣ ತತ್ತ್ವಾ ದರ್ಶ, ದೇಶಭಕ್ತಿ, ಸಹಿಷ್ಣುತೆಯಿಲ್ಲದ ಸ್ವಾರ್ಥ ರಾಜಕಾರಣಿಗಳಿಂದ ತುಂಬಿಹೋಗಿದೆ. ರಾಜಕಾರಣದಿಂದಾಗಿ ಧರ್ಮದ ದಾರಿ ತಪ್ಪಿದೆ. ದೇಶ ಎದುರಿಸುತ್ತಿರುವ ಇಂತಹ ಗಂಭೀರ ಸಮಸ್ಯೆಗಳನ್ನೂ ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಬ್ರೂಟಸ್‍ಗಳು ನಮ್ಮಲ್ಲಿದ್ದಾರೆ. ನಾವು ಎಚ್ಚರದಿಂದ ಇರಬೇಕು ನಿಸ್ವಾರ್ಥ, ದೇಶಭಕ್ತಿ, ಧರ್ಮ ಪರಿ ಪಾಲನೆ, ಅಭಿವೃದ್ಧಿಗೆ ದೀಕ್ಷೆ ಇವುಗಳನ್ನು ಹೊತ್ತ ಯುವಕರು ರಾಜಕೀಯ ಹೊಕ್ಕಿ, ಅದಕ್ಕೆ ಹೊಸ ರಂಗು ಕೊಡಬೇಕು ಧಾರ್ಮಿಕ ಪ್ರಜ್ಞೆ ಮುಕ್ತಿಗೊಂದು ಮಾರ್ಗ. ಭಾಷೆ ಅಭಿವ್ಯಕ್ತಿಗೊಂದು ಸೇತುವೆ. ರಾಜಕಾರಣಿಗಳಿಗೆ ಇವೇ ಡಿವೈಡ್ ಅಂಡ್ ರೂಲ್ ಅಸ್ತ್ರ ಎಂದು ಭ್ರಷ್ಟರ ಬಗ್ಗೆ ಎಚ್ಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »