ಇಂದು ನಡೆಯುವುದನ್ನು 400 ವರ್ಷಗಳ  ಹಿಂದೆಯೇ ಹೇಳಿದ್ದ ಕಾಲಜ್ಞಾನಿ ಸರ್ವಜ್ಞ
ಮೈಸೂರು

ಇಂದು ನಡೆಯುವುದನ್ನು 400 ವರ್ಷಗಳ ಹಿಂದೆಯೇ ಹೇಳಿದ್ದ ಕಾಲಜ್ಞಾನಿ ಸರ್ವಜ್ಞ

February 21, 2019

ಮೈಸೂರು: 20-21ನೇ ಶತ ಮಾನದಲ್ಲಿ ಸಮಾಜ ಹೇಗಿರುತ್ತದೆ ಎಂಬುದನ್ನು 400 ವರ್ಷಗಳ ಹಿಂದೆಯೇ ಸರ್ವಜ್ಞ ಹೇಳಿದ್ದಾರೆಂದರೆ ನಿಜಕ್ಕೂ ಅವರು ಸರ್ವಜ್ಞಾನಿ, ಕಾಲಜ್ಞಾನಿ ಎಂದು ಅಂಕಣಕಾರ ಗುಬ್ಬಿಗೂಡು ರಮೇಶ್ ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಂತ ಕವಿ ಸರ್ವಜ್ಞ ಜಯಂತ್ಯೋತ್ಸವ ಸಮಿತಿ ಜಂಟಿ ಆಶ್ರಯದಲ್ಲಿ ಮೈಸೂರು ಕಲಾ ಮಂದಿರದ ಕಿರುರಂಗಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಸರ್ವಜ್ಞನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮುಖ್ಯ ಭಾಷಣ ಮಾಡಿದರು.

ಸರ್ವಜ್ಞ ತನ್ನನ್ನು ತಾನು ಬಹು ಎತ್ತರಕ್ಕೆ ಏರಿಸಿ ಕೊಳ್ಳುವುದಕ್ಕೋಸ್ಕರ ಬರೆದದ್ದಲ್ಲ. ಇಡೀ ಅಖಂಡ ಕರ್ನಾಟಕದ ಸ್ವಚ್ಛತೆಗೆ ಬರೆದರು. ಕನ್ನಡ ಸಾಹಿತ್ಯದ ಎರಡು ಸಾವಿರ ವರ್ಷಗಳ ಚರಿತ್ರೆಯಲ್ಲಿ ಸರ್ವಜ್ಞ ತ್ರಿಪದಿಗಳ ಮಹಾಕಾವ್ಯ ಬರೆದರು ಎಂದರು.
16 ಶತಮಾನಗಳ ದಾರ್ಶನಿಕರನ್ನು, ಬರಹಗಾರ ರನ್ನು ಕರ್ನಾಟಕದ ಜನ ನೋಡಿದ್ದರೂ, ಪಂಪ, ರನ್ನ, ಪೊನ್ನ, ಜನ್ನ, ಬಸವಣ್ಣ ಎಲ್ಲರೂ ಬಂದು ಹೋದರು. ಆದರೆ ಒಬ್ಬ ಸರ್ವಜ್ಞ ಕರ್ನಾಟಕದಲ್ಲಿ ಇದುವರೆಗೆ ಉಳಿದುಕೊಂಡಿದ್ದಾನೆ ಎಂದರೆ ಸರ್ವಜ್ಞನ ಹೆಸರನ್ನು ಕೇಳದ ಕನ್ನಡಿಗರಿಲ್ಲ. ಲಂಗೋಟಿ ಕಟ್ಟಿಕೊಂಡು ಕರ್ನಾಟಕ ಸುತ್ತುವ ವೈರಾಗ್ಯ ಮನಸ್ಥಿತಿಯ ಸರ್ವಜ್ಞನಿಗೆ ಹೆಸರು ಬಂದಿದೆ ಎಂದರೆ ಅದು ಸುಲಭದ ಮಾತಲ್ಲ ಎಂದರು.

ಸರ್ವಜ್ಞನ ಬಾಯಲ್ಲಿ ಆರ್ಥಶಾಸ್ತ್ರ, ವೈದ್ಯಶಾಸ್ತ್ರ, ಮನಶಾಸ್ತ್ರ, ಧರ್ಮ, ಜಾತ್ಯಾತೀತತೆ ಬಂದಿದೆ. 400-420 ವರ್ಷಗಳ ಹಿಂದೆಯೇ ಯಾವ ಸಿದ್ಧತೆಯನ್ನೂ ಮಾಡಿಕೊಳ್ಳದೆ ಜನ ಸಾಮಾನ್ಯರು ಸುಲಭವಾಗಿ ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಬರೆದವರು ಸರ್ವಜ್ಞ. 7,070 ತ್ರಿಪದಿಗಳನ್ನು ಬರೆದಿದ್ದಾರೆ ಎನ್ನಲಾಗಿದ್ದರೂ ಅಷ್ಟೂ ಸಿಕ್ಕಿಲ್ಲ. ಸಿಕ್ಕಿದ್ದೆಲ್ಲವನ್ನೂ ಸಂಗ್ರಹಿಸಿ, ಪ್ರಕ ಟಿಸುವ ಕೆಲಸವನ್ನು ವಿದ್ವಾಂಸರು ಮಾಡುತ್ತಾ ಬಂದಿ ದ್ದಾರೆ ಎಂದು ಹೇಳಿದರು.

ಶಾಸಕ ಎಲ್.ನಾಗೇಂದ್ರ ದೀಪ ಬೆಳಗಿಸಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕುಂಬಾರರು ತಮ್ಮ ಶಕ್ತಿಯನ್ನು ವೃದ್ಧಿಸಿಕೊಂಡರೆ ಸರ್ಕಾರಗಳು ಸಹ ನಿಮ್ಮತ್ತ ಗಮನಹರಿಸಲು ಸಾಧ್ಯವಾಗುತ್ತದೆ. ಹಾಗಾಗಿ ಸಂಘ ಟಿತರಾಗಿ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದು ಕುಂಬಾರ ಸಮಾಜಕ್ಕೆ ಕರೆ ನೀಡಿದರು.

ಮೈಸೂರಿನ ಅಪೊಲೋ ಆಸ್ಪತ್ರೆ ಎದುರಿನ ಸಮಾ ಜದ ಹಾಸ್ಟೆಲ್ ಸ್ವತ್ತು ಕೆಲವರ ಕಪಿಮುಷ್ಠಿಯಲ್ಲಿ ಸಿಲುಕಿ ಸಮಾಜಕ್ಕೆ ಮಾರಕವಾಗಿತ್ತು. ತಾವು ಮುಡಾ ಅಧ್ಯಕ್ಷ ರಾಗಿದ್ದ ವೇಳೆ ಅಂದಿನ ಮುಖ್ಯಮಂತ್ರಿ ಸದಾನಂದ ಗೌಡರ ಸೂಚನೆ ಮೇರೆಗೆ ತಾವು ಆ ಆಸ್ತಿಯನ್ನು ಸಮಾಜಕ್ಕೆ ಉಳಿಸಿಕೊಟ್ಟಿದ್ದಾಗಿ ತಿಳಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇ ಶಕ ಹೆಚ್.ಚನ್ನಪ್ಪ ಸ್ವಾಗತಿಸಿದರು. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ಅಧ್ಯಕ್ಷ ವೈ.ಡಿ.ರಾಜಣ್ಣ ಸಂತ ಕವಿ ಸರ್ವಜ್ಞನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ದರು. ನಗರಪಾಲಿಕೆ ಸದಸ್ಯರಾದ ಉಷಾ ಕುಮಾರ್, ಅಶ್ವಿನಿ ಶರತ್, ಕುಲಾಲಗುಂಡ ಬ್ರಹ್ಮಾರ್ಯ ಕುಂಬಾರ ಸಂಘದ ಅಧ್ಯಕ್ಷ ಹೆಚ್.ಎಸ್.ಪ್ರಕಾಶ್, ಕೆಪಿಎಸ್‍ಸಿ ಮಾಜಿ ಅಧ್ಯಕ್ಷ ಕೃಷ್ಣಪ್ರಸಾದ್, ಕುಂಭಾರ ಸಮಾಜದ ಮುಖಂಡರಾದ ರಾಮು, ಡಾ.ಗೋವಿಂದಶೆಟ್ಟಿ, ಕೇರ್ಗಳ್ಳಿ ನಾಗಣ್ಣ, ಕೆ.ಪಿ.ವೆಂಕಟೇಶ್, ಬಾಲಕೃಷ್ಣ, ದೇವರಾಜು, ರಾಘವೇಂದ್ರ, ಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ ಸ್ವಾಗತಿಸಿದರು.

Translate »