ಮೈಸೂರು: ಕಳೆದ ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿ ಗಳಿಗೆ ನಾಳೆ (ಜೂ.11)ಯಿಂದ ಜೂ. 20ರವರೆಗೆ ಪೂರಕ (ಸಪ್ಲಿಮೆಂಟರಿ) ಪರೀಕ್ಷೆ ನಡೆಯಲಿದೆ.
2018-19ನೇ ಸಾಲಿನ ದ್ವಿತೀಯ ಪರೀಕ್ಷೆ ಯಲ್ಲಿ ನಪಾಸಾದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶವಾಗಿರುವ ಪೂರಕ ಪರೀಕ್ಷೆಯ ಮೊದಲ ದಿನ(ಜೂ.11) ಬೆಳಿಗ್ಗೆ 1015ಕ್ಕೆ ಸಮಾಜಶಾಸ್ತ್ರ, ಅಕೌಂಟೆನ್ಸಿ, ಗಣಿತ, ಮಧ್ಯಾಹ್ನ 2.20ಕ್ಕೆ ಗೃಹ ವಿಜ್ಞಾನ (ಹೋಮ್ ಸೈನ್ಸ್) ಪರೀಕ್ಷೆಗಳು ನಡೆಯ ಲಿವೆ. ಜೂ.12ರಂದು ಬೆಳಿಗ್ಗೆ ಇಂಗ್ಲಿಷ್, ಮಧ್ಯಾಹ್ನ ಇನ್ಫಾರ್ಮೇಷನ್ ಟೆಕ್ನಾಲಜಿ, ರಿಟೈಲ್, ಆಟೋಮೊಬೈಲ್, ಹೆಲ್ತ್‍ಕೇರ್, ಬ್ಯೂಟಿ ಅಂಡ್ ವೆಲ್‍ನೆಸ್, ಜೂ.13 ರಂದು ಬೆಳಿಗ್ಗೆ ಅರ್ಥಶಾಸ್ತ್ರ, ಭೌತಶಾಸ್ತ್ರ, ಮಧ್ಯಾಹ್ನ ಮನಃಶಾಸ್ತ್ರ, ಜೂ.14ರಂದು ಬೆಳಿಗ್ಗೆ ಐಚ್ಛಿಕ ಕನ್ನಡ, ಎಲೆಕ್ಟ್ರಾನಿಕ್ಸ್, ಕಂಪ್ಯೂ ಟರ್ ಸೈನ್ಸ್, ಮಧ್ಯಾಹ್ನ ಭೂಗೋಳ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಭೂವಿಜ್ಞಾನ, ಜೂ.15ರಂದು ಬೆಳಿಗ್ಗೆ ಕನ್ನಡ, ಮಧ್ಯಾಹ್ನ ಉರ್ದು, ಸಂಸ್ಕøತ, ಜೂ.17ರಂದು ಲಾಜಿಕ್, ಬ್ಯುಸಿನೆಸ್ ಸ್ಟಡೀಸ್, ರಸಾಯನಶಾಸ್ತ್ರ, ಎಜುಕೇಷನ್(ಶಿಕ್ಷಣ), ಜೂ.18ರಂದು ಬೆಳಿಗ್ಗೆ ಇತಿಹಾಸ, ಸ್ಟ್ಯಾಟಿಸ್ಟಿಕ್ಸ್, ಜೀವ ಶಾಸ್ತ್ರ, ಜೂ.19ರಂದು ಬೆಳಿಗ್ಗೆ ರಾಜ್ಯಶಾಸ್ತ್ರ, ಬೇಸಿಕ್ ಮ್ಯಾಥ್ಸ್, ಜೂ.20ರಂದು ಬೆಳಿಗ್ಗೆ ಹಿಂದಿ, ಮಧ್ಯಾಹ್ನ ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಅರೇಬಿಕ್ ಹಾಗೂ ಫ್ರೆಂಚ್ ಪರೀಕ್ಷೆ ನಡೆಯಲಿದೆ.
ಜಿಲ್ಲೆಯಲ್ಲಿ 11 ಸಾವಿರ ವಿದ್ಯಾರ್ಥಿಗಳು: ಮೈಸೂರು ಜಿಲ್ಲೆಯಲ್ಲಿ 6,706 ವಿದ್ಯಾರ್ಥಿ ಗಳು, 4,609 ವಿದ್ಯಾರ್ಥಿನಿಯರು ಸೇರಿ ದಂತೆ ಒಟ್ಟು 11,315 ಮಂದಿ ಪೂರಕ ಪರೀಕ್ಷೆ ಎದುರಿಸಲಿದ್ದಾರೆ. ಇವರಲ್ಲಿ ಕಲಾ ವಿಭಾಗದ 3,681, ವಿಜ್ಞಾನ ವಿಭಾಗದ 3,948 ಹಾಗೂ ವಾಣಿಜ್ಯ ವಿಭಾಗದ 3,686 ವಿದ್ಯಾರ್ಥಿಗಳಿದ್ದಾರೆ. ಮೈಸೂರು ನಗರದಲ್ಲಿ 7 ಸೇರಿದಂತೆ ಜಿಲ್ಲೆಯ 14 ಕೇಂದ್ರಗಳಲ್ಲಿ ಪೂರಕ ಪರೀಕ್ಷೆ ನಡೆ ಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕಿ ರತ್ನಾ ಅವರು `ಮೈಸೂರು ಮಿತ್ರ’ನಿಗೆ ತಿಳಿಸಿ ದ್ದಾರೆ. ಜುಲೈ ಮೊದಲ ವಾರವೇ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ.