ಡಾ. ಸಿ. ಶಿವಕುಮಾರಸ್ವಾಮಿಯವರ ‘ವೇದಾಗಮಗಳು ಮತ್ತು ಚೆನ್ನಬಸವಣ್ಣ’ ಕೃತಿಗೆ 2018ನೇ ಸಾಲಿನ ‘ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ’
ಮೈಸೂರು

ಡಾ. ಸಿ. ಶಿವಕುಮಾರಸ್ವಾಮಿಯವರ ‘ವೇದಾಗಮಗಳು ಮತ್ತು ಚೆನ್ನಬಸವಣ್ಣ’ ಕೃತಿಗೆ 2018ನೇ ಸಾಲಿನ ‘ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ’

September 21, 2019

ಮೈಸೂರು, ಸೆ. 20- ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ನೀಡುವ 2018ನೇ ಸಾಲಿನ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿಗೆ ಡಾ. ಸಿ.ಶಿವಕುಮಾರಸ್ವಾಮಿಯವರ ‘ವೇದಾಗ ಮಗಳು ಮತ್ತು ಚೆನ್ನಬಸವಣ್ಣ’ ಕೃತಿ ಆಯ್ಕೆಯಾಗಿದೆ.

ಡಾ. ಸಿ.ಶಿವಕುಮಾರಸ್ವಾಮಿಯವರು ನಿವೃತ್ತ ಸಂಸ್ಕøತ ಪ್ರಾಧ್ಯಾಪಕರು, ವಿದ್ವಾಂಸರು, ಸಂಶೋ ಧಕರು ಹಾಗೂ ವಾಗ್ಮಿಗಳು. ಸಂಸ್ಕøತ ಸಾಹಿತ್ಯ, ಅಲಂಕಾರಶಾಸ್ತ್ರ, ವೀರಶೈವ ಧರ್ಮ-ದರ್ಶನ ಗಳನ್ನು ಕುರಿತು ಆಳವಾದ ಸಂಶೋಧನೆ ನಡೆಸಿದ್ದು, ಸಂಪಾದನೆ, ವಿಮರ್ಶೆ, ಅನುವಾದ, ನಿಘಂಟು ಕ್ಷೇತ್ರಗಳಲ್ಲಿ 45ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. 150ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ, ವಿದ್ಯಾವಿಶಾರದ, ಕೌಡಿಮಠ ಸಂಸ್ಕøತ ಸಾಹಿತ್ಯ ಪುರಸ್ಕಾರ, ಧರ್ಮಸಾಹಿತ್ಯ ವಿಭೂಷಣ, ಸಾಹಿತ್ಯಸಿರಿ, ಡಾ.ಮಲ್ಲಿಕಾರ್ಜುನ ಪರಡ್ಡಿ ಪ್ರಶಸ್ತಿಗಳು ಇವರಿಗೆ ಸಂದಿವೆ. ಈಗ ಈ ಪಟ್ಟಿಗೆ ‘ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ’ಯೂ ಸೇರ್ಪಡೆಯಾಗಿದೆ. ಜೆಎಸ್‍ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ 1983ರಿಂದ ಪ್ರತಿ ವರ್ಷವೂ ಸಾಹಿತ್ಯ, ಧರ್ಮ, ಸಂಸ್ಕøತಿ ಕುರಿತಂತೆ ಪ್ರಕಟವಾಗುವ ಉತ್ತಮ ಕೃತಿಗೆ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈವರೆಗೆ 30 ಗೌರವಧನ, ಸ್ವಸ್ತಿವಾಚನ ಹಾಗೂ ಪ್ರಶಸ್ತಿಫಲಕಗಳನ್ನು ಸದ್ಯದಲ್ಲೇ ಏರ್ಪಡಿಸಲಿರುವ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು.

Translate »