ಶ್ರೀ ಸತ್ಯನಾರಾಯಣಸ್ವಾಮಿಗೆ ಬೆಳ್ಳಿ ಕವಚ ಸಮರ್ಪಣೆ
ಮೈಸೂರು

ಶ್ರೀ ಸತ್ಯನಾರಾಯಣಸ್ವಾಮಿಗೆ ಬೆಳ್ಳಿ ಕವಚ ಸಮರ್ಪಣೆ

January 21, 2019

ಮೈಸೂರು: ಮೈಸೂರಿನ ಬಿ.ಎಂ.ಶ್ರೀನಗರದದ 2ನೇ ಮುಖ್ಯರಸ್ತೆಯಲ್ಲಿರುವ ಶ್ರೀ ಮಹಾ ಗಣಪತಿ ದೇವಾಲಯದಲ್ಲಿ ಶ್ರೀ ಸತ್ಯ ನಾರಾಯಣಸ್ವಾಮಿಗೆ ಬೆಳ್ಳಿ ಕವಚ ಸಮರ್ಪಣೆ ಸಮಾರಂಭ ನೆರವೇರಿತು.

ಭಾನುವಾರ ಸಂಜೆ 6 ಗಂಟೆಗೆ ಶ್ರೀ ಸತ್ಯನಾರಾಯಣಸ್ವಾಮಿಗೆ ಪಂಚಾಮೃತ ಅಭಿಷೇಕ, ಸತ್ಯನಾರಾಯಣ ಪೂಜೆ ಇನ್ನಿತರ ಪೂಜಾ ಕೈಂಕರ್ಯಗಳ ಬಳಿಕ ದೇವರಿಗೆ ಬೆಳ್ಳಿ ಕವಚ ದಾರಣೆ ಮಾಡಲಾಯಿತು. ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ಸ್ಥಳೀಯ ಕಾರ್ಪೊರೇಟರ್ ವಿ.ರಮೇಶ್, ಮಾಜಿ ಕಾರ್ಪೊರೇಟರ್ ದೇವರಾಜು, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‍ನ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ರಾಜಪ್ಪ, ಉಪಾಧ್ಯಕ್ಷ ಪಾಪಣ್ಣ, ಖಜಾಂಚಿ ದೇವೇ ಗೌಡ, ರಾಮಲಿಂಗು, ಶ್ರೀನಿವಾಸ್, ಮಹ ದೇವು, ಸಿದ್ದರಾಜು, ಶಿವರುದ್ರಪ್ಪ, ಭದ್ರೀಶ್ ಸೇರಿದಂತೆ ನೂರಾರು ಭಕ್ತರು ಭಾಗವಹಿ ಸಿದ್ದರು. ಬೆಳ್ಳಿ ಕವಚ ದಾರಣೆ ಬಳಿಕ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಈ ಸಂದರ್ಭದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕ ಎಲ್. ನಾಗೇಂದ್ರ, ಬಿ.ಎಂ.ಶ್ರೀನಗರ ಸಂಪರ್ಕಿ ಸುವ ಮೇಟಗಳ್ಳಿ ಮುಖ್ಯರಸ್ತೆ ಕಿರಿದಾ ಗಿದ್ದು, ಪರ್ಯಾಯ ಅರವತ್ತು ಅಡಿ ರಸ್ತೆ ಸಂಪರ್ಕ ಕಾಮಗಾರಿಗೆ ಮುಡಾ ಅನುಮೋದನೆ ಸಿಕ್ಕಿದೆ. ಬಿ.ಎಂ.ಶ್ರೀನಗರ ಮುಖ್ಯರಸ್ತೆ ಅಭಿವೃದ್ಧಿಗೆ ಶಾಸಕರ ನಿಧಿ ಯಿಂದ 5 ಕೋಟಿ ರೂ. ಮಂಜೂರಾಗಿದೆ. ಶೀಘ್ರ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳ ಲಾಗುವುದು ಎಂದು ಭರವಸೆ ನೀಡಿದರು.

Translate »