ನಿಧಾನಗತಿ ನ್ಯಾಯದಾನ: ಪ್ರೊ. ಹೆಚ್.ಎಂ.ರಾಜಶೇಖರ್ ವಿಷಾದ
ಮೈಸೂರು

ನಿಧಾನಗತಿ ನ್ಯಾಯದಾನ: ಪ್ರೊ. ಹೆಚ್.ಎಂ.ರಾಜಶೇಖರ್ ವಿಷಾದ

December 13, 2019

ಮೈಸೂರು, ಡಿ.12(ಎಂಟಿವೈ)- ವಿವಿಧ ನ್ಯಾಯಾಲಯಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಹಾಗೂ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಶೇ.80ರಷ್ಟು ಬಾಕಿ ಉಳಿದಿವೆ ಎಂದು ರಾಜ್ಯಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಪೆÇ್ರ.ಹೆಚ್.ಎಂ. ರಾಜಶೇಖರ ವಿಷಾದಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗವು ಗುರುವಾರ ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ `ಭಾರತದಲ್ಲಿ ಮಾನವ ಹಕ್ಕುಗಳ ಸಮಸ್ಯೆ ಮತ್ತು ಸವಾಲುಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾ ಟಿಸಿದ ಅವರು, ಎರಡನೇ ಮಹಾಯುದ್ಧ ದಲ್ಲಿ 16 ದಶಲಕ್ಷ ಸೈನಿಕರು ಹಾಗೂ 18 ದಶಲಕ್ಷ ನಾಗರಿಕರು ಮೃತಪಟ್ಟರು. ಇದ ರಿಂದ 1948ರಲ್ಲಿ ಪ್ಯಾರಿಸ್‍ನಲ್ಲಿ ಭಾರತವೂ ಸೇರಿದಂತೆ ವಿಶ್ವ ನಾಯಕರು ಸಭೆ ನಡೆಸಿ ವಿಶ್ವಸಂಸ್ಥೆಯಲ್ಲಿ ಮಾನವ ಹಕ್ಕು ರಕ್ಷಣೆಗೆ ಸಹಿ ಹಾಕಿದರು. ಅಲ್ಲದೆ ಮಾನವ ಹಕ್ಕು ಗಳನ್ನು ಗಟ್ಟಿಗೊಳಿಸಲು ಭಾರತದ ಸಂವಿ ಧಾನದಲ್ಲಿ ಹಲವು ವಿಧಿ, ನಿಯಮಗಳನ್ನು ಅಳವಡಿಸಲಾಗಿದೆ. ಆದರೆ ಅವುಗಳÀನ್ನು ಪರಿಣಾಮಕಾರಿಯಾಗಿ ಜಾರಿಗೆ ತರು ವಲ್ಲಿ ವಿಫಲವಾಗಿz್ದÉೀವೆ. ಇದಕ್ಕೆ ನಿಧಾನ ಗತಿಯ ನ್ಯಾಯಾಂಗ ವ್ಯವಸ್ಥೆ ಕಾರಣ ಎಂದು ಆಕ್ಷೇಪಿಸಿದರು.

ತ್ವರಿತಗತಿಯ ನ್ಯಾಯಾಲಯ(ಫಾಸ್ಟ್ ಟ್ರ್ಯಾಕ್ ಕೋರ್ಟ್), ನ್ಯಾಯಾಂಗ ವ್ಯವಸ್ಥೆ ಸರಳೀಕರಣ, ಹೆಚ್ಚುವರಿ ನ್ಯಾಯಾಲಯ ಸ್ಥಾಪನೆ, ನ್ಯಾಯಾಧೀಶರ ನೇಮಕದ ಬಗ್ಗೆ ಮಾತನಾಡುತ್ತಿz್ದÉೀವೆ. ಆದರೆ ನಿಧಾನ ಗತಿ ನ್ಯಾಯ ದಾನದ ಸಮಸ್ಯೆ ಕುರಿತಂತೆ ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಮಾನವ ಹಕ್ಕುಗಳ ರP್ಷÀಣೆಗೆ ಹಲವು ಸ್ವಾಯತ್ತ ಸಂಸ್ಥೆ, ಸರ್ಕಾರ ಮತ್ತು ಸರ್ಕಾ ರೇತರ ಸಂಸ್ಥೆಗಳಿವೆ. ಆದರೆ ಅವು ಶಕ್ತಿಯುತ ವಾಗಿಲ್ಲ. ಕೇವಲ ವರದಿ ನೀಡುವ ಏಜೆನ್ಸಿ ಗಳಾಗಿವೆ. ಅಲ್ಲಿಯೂ ಮೂಲ ಸೌಕರ್ಯ ಗಳಿಲ್ಲ. ಸೂಕ್ತ ಸಮಯಕ್ಕೆ ಸಿಬ್ಬಂದಿಗಳ ನೇಮಕ ವಾಗುತ್ತಿಲ್ಲ. ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧÀ್ಯP್ಷÀರ ನೇಮಕಕ್ಕೆ ಒಂದು ವರ್ಷ ವಿಳಂಬ ಮಾಡಿರುವುದೇ ಮಾನವ ಹಕ್ಕು ರಕ್ಷಣೆ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಕಿಡಿಕಾರಿದರು.

ನಿರ್ಭಯಾ ಪ್ರಕರಣ ನಂತರ ಅತ್ಯಾಚಾರ ಹತೋಟಿಗೆ ತರಲು ಹಲವಾರು ಕಠಿಣ ಕಾನೂನು ಜಾರಿಗೆ ತರಲಾಯಿತು. ಆದರೂ ಮಹಿಳೆಯರ ಮೇಲಿನ ದೌರ್ಜನ್ಯ ನಿರಂ ತರ ನಡೆಯುತ್ತಿದೆ. ಹೈದಾರಾಬಾದ್ ದಿಶಾ ಪ್ರಕರಣ ಇದಕ್ಕೆ ಉದಾಹರಣೆ ಎಂದರು.

ಕಾರ್ಯಕ್ರಮದಲ್ಲಿ ಮದ್ರಾಸ್ ವಿವಿ ಕಾನೂನು ವಿಭಾಗದ ಅಧÀ್ಯP್ಷÀ ಡೇವಿಡ್ ಅಮ್ರೋಸ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಮೈಸೂರು ವಿವಿ ಮಾನವ ಸಂಪ ನ್ಮೂಲ ಅಭಿವೃದ್ಧಿ ಕೇಂದ್ರ ನಿರ್ದೇಶಕಿ ಡಾ. ಮಿಡತಲಾ ರಾಣಿ, ವಿಭಾಗದ ಅಧÀ್ಯP್ಷÀ ಡಾ.ಕೃಷ್ಣ ಹೊಂಬಾಳ್, ಪೆÇ್ರ.ಎಚ್.ಬಿ. ಮಲ್ಲಿಕಾರ್ಜುನಸ್ವಾಮಿ, ಪೆÇ್ರ.ಜಿ.ಟಿ.ರಾಮ ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

Translate »