ಮೈಸೂರು ಮೃಗಾಲಯದಲ್ಲಿ ಹಾವು ಸಂರಕ್ಷಣೆ ಸಂಬಂಧ ತರಬೇತಿ
ಮೈಸೂರು

ಮೈಸೂರು ಮೃಗಾಲಯದಲ್ಲಿ ಹಾವು ಸಂರಕ್ಷಣೆ ಸಂಬಂಧ ತರಬೇತಿ

July 3, 2019

ಮೈಸೂರು,ಜು.2(ಎಂಟಿವೈ)- ಹಾವು ಗಳ ಸಂರಕ್ಷಣೆಯಲ್ಲಿ ತೊಡಗಿದ್ದಾಗ ಎಚ್ಚ ರಿಕೆ ವಹಿಸುವುದರೊಂದಿಗೆ, ಸಾರ್ವಜನಿ ಕರಲ್ಲಿ ಹಾವುಗಳ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ಬಗ್ಗೆ ಜಾಗೃತಿ ಮೂಡಿಸುವಂತೆ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಸಲಹೆ ನೀಡಿದ್ದಾರೆ.

ಮೈಸೂರಿನ ಮೃಗಾಲಯ ಸಭಾಂಗಣ ದಲ್ಲಿ ಮಂಗಳವಾರ ಬೆಳಿಗ್ಗೆ `ಹಾವು ಸಂರಕ್ಷಣೆಗಾರ’ರಿಗೆ ಆಯೋಜಿಸಿದ್ದ ತರ ಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಹಾವು ಹಿಡಿಯುವವರಿಗೆ ಸುರಕ್ಷತೆಯ ಬಗ್ಗೆ ತರಬೇತಿ ನೀಡುವುದು ಅಗತ್ಯ. ಹಾವು ಹಿಡಿಯುವ ವೇಳೆ ಕೈಗೊಳ್ಳಲೇಬೇಕಾದ ಕ್ರಮಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ರಾಜ್ಯದಾದ್ಯಂತ ಹಾವು ಸಂರಕ್ಷಣೆಯಲ್ಲಿ ತೊಡಗಿರುವವರ ಮಾಹಿತಿಯುಳ್ಳ ವೆಬ್ ಸೈಟ್ ತೆರೆಯುವುದಕ್ಕೆ ಪ್ರಯತ್ನಿಸಬೇಕು. ಯಾವ ಬಗೆಯ ಹಾವು, ಅವುಗಳ ಜೀವನ ಶೈಲಿ, ವಿಷಯುಕ್ತ ಹಾಗೂ ವಿಷವಿಲ್ಲದ ಹಾವುಗಳ ಬಗ್ಗೆ ಜನರಲ್ಲಿ ಮಾಹಿತಿ ನೀಡ ಬೇಕು. ಇದರಿಂದ ಜನರಲ್ಲಿರುವ ತಪ್ಪು ಕಲ್ಪನೆ ಹೋಗಲಾಡಿಸಬಹುದು. ಅಭದ್ರತೆ ಯಿಂದ ಹಾವು ಸಂರಕ್ಷಣೆಗಾರರು ಬಳಲು ತ್ತಿರುವುದರಿಂದ ಗೌರವ ಧನ ನೀಡಲು ಕ್ರಮ ಕೈಗೊಂಡರೆ ಹಲವು ಮಂದಿಗೆ ನೆರವಾ ಗುತ್ತದೆ ಎಂದು ಅಭಿಪ್ರಾಯಪಟ್ಟರು.

ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್ ಕುಮಾರ್ ಮಾತನಾಡಿ, ಮೈಸೂರಿನ ಮೃಗಾಲಯದ ವತಿಯಿಂದ ಹಾವು ಸಂರಕ್ಷಣಾಗಾರರಿಗೆ ಆಯೋಜಿಸಿರುವ ತರಬೇತಿ ಕಾರ್ಯಾ ಗಾರ ಮುಂದಿನ ದಿನಗಳಲ್ಲಿ ನಿರಂತರ ವಾಗಿ ಮುಂದುವರೆಯಲಿದೆ. ಆಯಾಯ ಬಡಾವಣೆ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಹಾವು ಸಂರಕ್ಷಣೆಯಲ್ಲಿ ತೊಡ ಗಿರುವವರನ್ನು ಗುರುತಿಸಿ, ಅವರಿಗೆ ಅಗತ್ಯ ತರಬೇತಿ ನೀಡಿ ಪ್ರಮಾಣ ಪತ್ರ ನೀಡುವ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಾವುಗಳ ಬಗೆಗಿನ ತಪ್ಪು ಕಲ್ಪನೆಯಿಂದಾಗಿ ಕೆಲವು ಘಟನೆಗಳು ನಡೆ ಯುತ್ತಿದೆ. ಮೂಢ ನಂಬಿಕೆಯಿಂದಾಗಿ ಹಾವು ಗಳಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಹಾವು ಗಳ ಸಂರಕ್ಷಣೆಯಲ್ಲಿ ತೊಡಗಿರುವವರಿಗೆ ಕೌಶಲ್ಯ ಹೆಚ್ಚಿಸುವ ಅಗತ್ಯತೆಯನ್ನು ಮನ ಗಂಡು ಈ ಕಾರ್ಯಾಗಾರ ಹಮ್ಮಿ ಕೊಳ್ಳಲಾಗಿದೆ ಎಂದು ತಿಳಿಸಿದರು.

ಅಸೂಯೆ ಇರಬಾರದು: ಉರಗ ತಜ್ಞ ಸ್ನೇಕ್ ಶ್ಯಾಮ್ ಮಾತನಾಡಿ, ಹಾವು ಸಂರಕ್ಷಣೆ ಮಾಡಲು ಮುಂದಾಗುವವರು ಮೊದಲು ಹಾವು ಇರುವ ಸ್ಥಳದ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಅದಕ್ಕೆ ಗಾಯವಾ ಗಿದೆಯಾ ಎಂಬ ಮಾಹಿತಿ ಪಡೆದು ಎಚ್ಚರಿಕೆ ಯಿಂದ ರಕ್ಷಣಾ ಕಾರ್ಯದಲ್ಲಿ ತೊಡಗಿಸಿ ಕೊಳ್ಳಬೇಕು. 100 ಅಥವಾ 1000 ಹಾವು ಹಿಡಿದಿದ್ದರೂ, ಮೊದಲನೇ ಹಾವು ಹಿಡಿಯುವಾಗ ಎಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿರುತ್ತೀರೋ ಅಷ್ಟೇ ಎಚ್ಚರಿಕೆ ಯಿಂದ ಪ್ರತಿ ಹಾವನ್ನು ಹಿಡಿಯುವಾಗ ಜಾಗ್ರತೆ ವಹಿಸಬೇಕು. ತಂತ್ರಜ್ಞಾನ ಮುಂದು ವರೆದಿರುವುದರಿಂದ ಇಂದು ಬೆರಳ ತುದಿ ಯಲ್ಲಿಯೇ ಹಾವುಗಳ ವಿಧ, ವಿಷಯುಕ್ತ ಹಾವುಗಳು, ವಿಷವಿಲ್ಲದ ಹಾವುಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಸಲಹೆ ನೀಡಿದ ಅವರು, ಯಾವುದೇ ಬಡಾವಣೆಗಳಲ್ಲಿ ಹಾವಿರುವ ಮಾಹಿತಿ ಬಂದರೆ ಯಾರು ಸ್ಥಳಕ್ಕೆ ಬೇಗ ತಲುಪುತ್ತಾರೋ ಅವರು ಹಾವನ್ನು ಸಂರಕ್ಷಿಸಬೇಕು. ಬೇರೊಬ್ಬರು ಹಾವು ಹಿಡಿಯಲು ಬಂದಿದ್ದರೆ ಅವರೊಂದಿಗೆ ಜಗಳ ವಾಡಬಾರದು. ನಮ್ಮಲ್ಲಿ ಇತ್ತೀಚೆಗೆ ನಮ್ಮ ಬಡಾವಣೆಗೆ ಯಾಕೆ ಬಂದೆ ಎಂದು ಜಗಳವಾಡುವ ಮನಸ್ಥಿತಿ ಹೆಚ್ಚಾಗುತ್ತಿದೆ. ಇಂತಹ ಸಣ್ಣತನ, ಅಸೂಯೆ, ಹೊಟ್ಟೆಕಿಚ್ಚು ಬಿಡಬೇಕು ಎಂದರು.

ಹಾವಿಗಿಂತ, ಹಾವು ಹಿಡಿಯುವವರ ಸಂಖ್ಯೆ ಹೆಚ್ಚು: ಉರಗ ಸಂರಕ್ಷಣಾ ತಜ್ಞ ಸುಮಂತ್ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿ, ಬೆಂಗಳೂರಿನಲ್ಲಿ ಹಾವಿಗಿಂತ ಹಾವು ಸಂರಕ್ಷಿಸುವವರ ಸಂಖ್ಯೆಯೇ ಹೆಚ್ಚಾಗಿದೆ. ಒಂದು ಹಾವು ಹಿಡಿದರೆ 4 ರಿಂದ 8 ಸಾವಿರ ರೂ. ಪಡೆಯಲಾಗುತ್ತಿದೆ ಎಂಬ ಮಾಹಿತಿ ಇದೆ. ಹಣ ಸಂಪಾದಿಸುವು ದಕ್ಕಾಗಿಯೇ ಒಂದು ಕಡೆ ಹಿಡಿದ ಹಾವನ್ನು ಮತ್ತೊಂದೆಡೆ ಬಿಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ದೇಶದಲ್ಲಿ ವರ್ಷಕ್ಕೆ 10 ಲಕ್ಷ ಹಾವು ಕಡಿತದ ಪ್ರಕರಣ ದಾಖಲಾಗುತ್ತಿದೆ. ಅದರಲ್ಲಿ 40 ರಿಂದ 50 ಸಾವಿರ ಜನ ಹಾವು ಕಡಿತಕ್ಕೆ ಒಳ ಗಾಗಿ ಮೃತಪಡುತ್ತಿದ್ದಾರೆ. 1.50ರಿಂದ 2 ಲಕ್ಷ ಜನರು ಕೈ, ಕಾಲು ಸೇರಿದಂತೆ ಅಂಗಾಂಗ ಕಳೆದುಕೊಳ್ಳುತ್ತಿದ್ದಾರೆ. ರೈತರು, ಗಾರೆ ಮತ್ತು ಕೂಲಿ ಕೆಲಸ ಮಾಡು ವವರೇ ಹೆಚ್ಚಿನ ಸಂಖ್ಯೆಯಲ್ಲಿ ಹಾವು ಕಡಿತಕ್ಕೆ ಬಲಿಯಾಗುತ್ತಿದ್ದಾರೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯ ವಿದೆ. ಹಾವು ರಕ್ಷಿಸಿದಾಗ ಅದರ ಬಗ್ಗೆ ಮಾಹಿತಿ ನೀಡುವುದಕ್ಕೆ ಪ್ರಯತ್ನಿಸಬೇಕು. ಕೇವಲ ಮೂರ್ನಾಲ್ಕು ನಿಮಿಷದೊಳಗೆ ಹಾವನ್ನು ಹಿಡಿದು ವಾಪಸ್ಸಾಗುವವರನ್ನು ಸಂರಕ್ಷಕರು ಎಂದು ಹೇಳಲು ಸಾಧ್ಯವಿಲ್ಲ ಎಂದರು.

ವಾಟ್ಸಾಪ್, ಫೇಸ್‍ಬುಕ್ ಹಾಗೂ ಇನ್ನಿತರ ಸಾಮಾಜಿಕ ಜಾಲ ತಾಣಗಳಲ್ಲಿ ಮೂರು, ಐದು, ಏಳು ಹೆಡೆ ಸರ್ಪ ಕಂಡಿದೆ, ಹಾವಿನ ದ್ವೇಷ ಹನ್ನೆರಡು ವರ್ಷ ಎನ್ನುವ ಸಂದೇಶ ರವಾನೆಯಾಗುತ್ತಿದೆ. ಇದೆಲ್ಲ ಸುಳ್ಳು. ಕೆಲವು ಹಾವುಗಳು ಹಾಲು ಕುಡಿಯು ವುದಿಲ್ಲ. ಮನುಷ್ಯರಿಂದ ದೂರ ಇರಲು ಹಾವುಗಳು ಬಯಸುತ್ತವೆ. ನಾಗರಹಾವು ಸೇರಿದಂತೆ ವಿಷಯುಕ್ತ ಹಾವು ಮನುಷ್ಯ ರಿಂದ ಅಪಾಯವಿದೆ ಎಂದು ಅರಿತಾಗ ಶಬ್ದ ಮಾಡಿ ಎದುರಿಸುತ್ತವೆ. ಕೊನೆ ಹಂತದಲ್ಲಿ ಕಚ್ಚುತ್ತವೆ. ಹಲವು ಪ್ರಕರಣಗಳಲ್ಲಿ ವಿಷ ರಿಲೀಸ್ ಆಗಿರುವುದಿಲ್ಲ ಎಂದು ವಿವರಿಸಿದರು. ಹುಣಸೂರಿನ ಹಾವುಗಳ ಸಂರಕ್ಷಣಾ ತಜ್ಞ ಜರ್ರಿ ಮಾರ್ಟಿನ್, ಸುಧೀರ್ ಮಾತ ನಾಡಿದರು. ಕಾರ್ಯಾಗಾರದಲ್ಲಿ ಮೈಸೂರು, ಮಂಡ್ಯ, ಚಾಮ ರಾಜನಗರ, ಕೊಡಗು, ಹಾಸನ, ತುಮಕೂರು, ಶಿವಮೊಗ್ಗ ಸೇರಿದಂತೆ ವಿವಿಧೆಡೆಗಳಿಂದ 80ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

Translate »