ರಿಂಗ್ ರಸ್ತೆಯ ಬೀದಿದೀಪ ನೀವೇ ನಿರ್ವಹಿಸಿ ಮುಡಾ ಆಯುಕ್ತರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ತಾಕೀತು
ಮೈಸೂರು

ರಿಂಗ್ ರಸ್ತೆಯ ಬೀದಿದೀಪ ನೀವೇ ನಿರ್ವಹಿಸಿ ಮುಡಾ ಆಯುಕ್ತರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ತಾಕೀತು

December 25, 2019

ಮೈಸೂರು,ಡಿ.24(ಆರ್‍ಕೆ)-ರಿಂಗ್ ರಸ್ತೆ ಬೀದಿದೀಪಗಳನ್ನು ನಿರ್ವಹಿಸಿ, ಅವು ರಾತ್ರಿ ವೇಳೆ ಬೆಳಗುವಂತೆ ನೋಡಿಕೊಳ್ಳಿ ಎಂದು ಮುಡಾ ಆಯುಕ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಾಕೀತು ಮಾಡಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ದಸರಾ ವೇಳೆ ಬಲ್ಬ್‍ಗಳನ್ನು ಹಾಕಿ ರಿಪೇರಿ ಮಾಡಿದ್ದೀರಿ.

ನಂತರ ಅಲ್ಲಿ ಯಾವ ದೀಪಗಳೂ ಉರಿಯುತ್ತಿಲ್ಲವಾದ್ದರಿಂದ ಕಗ್ಗತ್ತಲು ಕವಿ ದಿದ್ದು, ಅಪಘಾತಗಳು ಸಂಭವಿಸುತ್ತಿವೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ ಎಂದರು.

ನಂತರ ವಿದ್ಯುತ್ ಬಿಲ್ ಪಾವತಿಸದ ಕಾರಣ ಚೆಸ್ಕಾಂನವರು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆಂಬ ಆರೋಪವಿದೆ. ನಿಮಗೆ ಅನುದಾನದ ಕೊರತೆ ಇದ್ದರೆ ಹೇಳಿ, ಕೊಡಿಸುತ್ತೇನೆ. ಆದರೆ ರಿಂಗ್ ರಸ್ತೆಯಲ್ಲಿ ಕಗ್ಗತ್ತಲು ಆವರಿಸುವುದು ಸರಿ ಯಲ್ಲ. ಇನ್ನು ಮುಂದೆ ನೀವೇ ಬೀದಿ ದೀಪ ನಿರ್ವಹಿಸಬೇಕು ಎಂದು ಸಚಿವರು ಮುಡಾ ಆಯುಕ್ತರಿಗೆ ತಾಕೀತು ಮಾಡಿದರು.

ರಿಂಗ್ ರಸ್ತೆ ಒಳಗೆ ಬರುವ ಬಡಾವಣೆ ಗಳನ್ನು ಸಂಪೂರ್ಣ ಅಭಿವೃದ್ಧಿ ಮಾಡಿ ಹಸ್ತಾಂತರಿಸಿದ್ದರೆ ಪಾಲಿಕೆಯವರು ನಿರ್ವಹಿಸುತ್ತಿದ್ದರು. ಕಂದಾಯ ವಸೂಲು ಮಾಡುವ ನೀವು ಅಲ್ಲಿಗೆ ನೀರು, ಚರಂಡಿ, ರಸ್ತೆ, ವಿದ್ಯುತ್ ಸೌಲಭ್ಯ ಕಲ್ಪಿಸಬೇಕಲ್ಲವೆ? ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡರು ಮುಡಾ ಅಧಿಕಾರಿಗಳನ್ನು ಪ್ರಶ್ನಿಸಿದರು.

ಖಾಸಗಿ ಬಡಾವಣೆಗಳಿಗೆ ಪ್ಲಾನ್ ಅಪ್ರೂವಲ್ ಮಾಡಿ, ಸಿಎ ನಿವೇಶನ ಪಡೆದುಕೊಳ್ಳುತ್ತೀರಿ. ಅಲ್ಲಿಗೆ ಮೂಲ ಸೌಲಭ್ಯ ಒದಗಿಸುವುದಿಲ್ಲ. ಹಾಗಾದರೆ ಅಲ್ಲಿ ವಾಸಿಸುವ ಜನರ ಪಾಡೇನಾಗ ಬೇಕು. ಚಾಮುಂಡೇಶ್ವರಿ ಕ್ಷೇತ್ರದ ಬಹು ತೇಕ ಬಡಾವಣೆಗಳಲ್ಲಿ ಈ ಸಮಸ್ಯೆಗೆ ನೀವೇ ಕಾರಣ ಎಂದೂ ಜಿಟಿಡಿ, ಮುಡಾ ಆಯುಕ್ತರ ತರಾಟೆಗೆ ತೆಗೆದುಕೊಂಡರು.

ಈ ಕುರಿತು ಶಾಸಕ ನಾಗೇಂದ್ರ ಅವರೂ ಪಾಲಿಕೆ ಹಾಗೂ ಮುಡಾ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಮೈಸೂರು ನಗರ ದಾದ್ಯಂತ ಒಳಚರಂಡಿಗಳು ಕಟ್ಟಿಕೊಂಡು ಮ್ಯಾನ್‍ಹೋಲ್‍ಗಳಲ್ಲಿ ನೀರು ಉಕ್ಕಿ ಹರಿಯುತ್ತಿವೆ. ಚೆನ್ನಾಗಿರುವ ರಸ್ತೆಗಳನ್ನು ಅಗೆದು ಅವಾಂತರ ಮಾಡಲಾಗುತ್ತಿದೆ ಎಂದೂ ಆರೋಪಿಸಿದರು.

ಏಕಲವ್ಯನಗರದ ನರ್ಮ್ ಮನೆಗಳಲ್ಲಿ ಅನಧಿಕೃತವಾಗಿ ಕೆಲವರು ನೆಲೆಸಿದ್ದಾರೆ. ನಿಜವಾದ ಫಲಾನುಭವಿಗಳಿಗೆ ಆಶ್ರಯ ವಿಲ್ಲ ಎಂದು ಏಕಲವ್ಯನಗರದ ಕೆಲ ನಿವಾಸಿಗಳು ಸಚಿವರನ್ನು ಭೇಟಿ ಮಾಡಿ ದೂರು ನೀಡಿದರು. ಈ ನಡುವೆ ಮಧ್ಯೆಪ್ರವೇಶಿಸಿದ ಜಿ.ಟಿ. ದೇವೇಗೌಡರು, ನರ್ಮ್ ಮನೆಗಳಲ್ಲಿ ಬಗೆಹರಿಸಲಾರದಂತಹ ಸಮಸ್ಯೆಗಳಿವೆ. ಒಂದು ದಿನ ಬಿಡುವು ಮಾಡುಕೊಂಡು ನೀವೇ ಬಂದರೆ ಮಾತ್ರ ಸಮಸ್ಯೆ ಬಗೆಹರಿಸಬಹುದು ಎಂದರು.

ಸಮಯ ನೋಡಿಕೊಂಡು ನಾನೇ ಬರುತ್ತೇನೆ. ಆದರೆ, ನಿಜವಾದ ಫಲಾನು ಭವಿಗಳಿಗೆ ಮನೆ ಸಿಗಬೇಕು. ಅವರಿಗೆ ದಾಖಲಾತಿ ಪರಿಶೀಲಿಸಿ ಹಕ್ಕುಪತ್ರ ನೀಡಿ, ಅಲ್ಲಿಗೆ  ಮೂಲ ಸೌಲಭ್ಯ ಕಲ್ಪಿಸಿ. ಅನಧಿ ಕೃತವಾಗಿ ಆಶ್ರಯ ಪಡೆದಿರುವವರನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸೋಣ ಎಂದು ಸಚಿವರು ತಿಳಿಸಿದರು.

ಒಟ್ಟಾರೆ ಮೈಸೂರು ನಗರದಲ್ಲಿ ನೀರು, ರಸ್ತೆ, ಒಳಚರಂಡಿ, ಬೀದಿದೀಪಗಳಂತಹ ಮೂಲ ಸೌಲಭ್ಯಕ್ಕೆ ಕೊರತೆಯಾಗದಂತೆ ನೋಡಿಕೊಂಡು ಸರಿಯಾಗಿ ನಿರ್ವಹಿಸ ಬೇಕು ಎಂದೂ ಸೋಮಣ್ಣ ಜಿಲ್ಲಾಧಿಕಾರಿ ಗಳಿಗೆ ಸೂಚನೆ ನೀಡಿದರು.

Translate »