ನವದೆಹಲಿ, ಫೆ.2-ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ತೀವ್ರ ಅಸ್ವಸ್ಥರಾಗಿದ್ದು, ನವದೆಹಲಿಯ ಸರ್ ಗಂಗಾರಾಂ ಆಸ್ಪತ್ರೆಗೆ ಇಂದು ಸಂಜೆ ದಾಖಲಾದರು. ವೈದ್ಯಕೀಯ ತಪಾಸಣೆಗಾಗಿ ಆಗಿಂದಾಗ್ಗೆ ಅಮೇ ರಿಕಾಗೆ ತೆರಳುತ್ತಿದ್ದ ಸೋನಿಯಾ ಆರೋಗ್ಯದಲ್ಲಿ ಇಂದು ಸಂಜೆ ಏರು ಪೇರಾಗಿದ್ದು, ಆಸ್ಪತ್ರೆಗೆ ದಾಖಲಾದರು ಎಂದು ಮೂಲಗಳಿಂದ ತಿಳಿದು ಬಂದಿದೆ. ಅವರ ಆರೋಗ್ಯ ಕುರಿತು ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.
