ಕಾಂಗ್ರೆಸ್ ನಾಯಕರ ಮೇಲೆ ಸೌಮ್ಯಾ ರೆಡ್ಡಿ ಕಿಡಿಕಿಡಿ
ಮೈಸೂರು

ಕಾಂಗ್ರೆಸ್ ನಾಯಕರ ಮೇಲೆ ಸೌಮ್ಯಾ ರೆಡ್ಡಿ ಕಿಡಿಕಿಡಿ

ಬೆಂಗಳೂರು, ಜು. 13- ತಮ್ಮ ತಂದೆಯನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿಗೆ ರಾಮಲಿಂಗಾ ರೆಡ್ಡಿಯವರ ಪುತ್ರಿ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಕಿಡಿಕಾರಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ತಂದೆಯ ನಿರ್ಧಾರ ಏನು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಅವರು 45 ವರ್ಷ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅವರನ್ನು ಕಾಂಗ್ರೆಸ್ ಮುಖಂಡರು ಹೇಗೆ ನಡೆಸಿಕೊಂಡಿ ದ್ದಾರೆ ಎಂಬುದನ್ನು ನಮ್ಮ ತಂದೆಯವರೇ ತಿಳಿಸಿದ್ದಾರೆ. ಅವರ ಮನಸ್ಸಿಗೆ ನೋವಾಗಿದೆ. ಅದರಿಂದಾಗಿ ಅವರು ರಾಜೀನಾಮೆ ನೀಡಿದ್ದಾರೆ. ಅವರು ರಾಜೀನಾಮೆ ಹಿಂಪಡೆಯುತ್ತಾರಾ? ಇಲ್ಲವಾ? ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ ಎಂದರು. ಎಐಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ರುವ ತಾವು, ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ರಾಜ್ಯದ ಪರಿಸ್ಥಿತಿ ಬಗ್ಗೆ ವಿವರಿಸಿದ್ದೇನೆ. ಇಲ್ಲಿನ ಸಮಸ್ಯೆಯನ್ನು ಬಗೆಹರಿಸುವಂತೆ ಕೇಳಿದ್ದೇನೆ ಎಂದರು. ನಾನಾಗಲೀ, ನನ್ನ ತಂದೆಯಾಗಲೀ ಅಭಿವೃದ್ಧಿ ಕಾರ್ಯಗಳನ್ನು ಈಗಲೂ ಮಾಡುತ್ತಲೇ ಇದ್ದೇವೆ. ರಾಜೀನಾಮೆ ಕೊಟ್ಟಿರುವ ಶಾಸಕರಾದ ಅವರ ಬಳಿಗೆ ಜನರು ಬರುತ್ತಲೇ ಇದ್ದಾರೆ. ಜನರ ಸಮಸ್ಯೆಗಳಿಗೆ ತಂದೆ ಸ್ಪಂದಿಸುತ್ತಲೇ ಇದ್ದಾರೆ ಎಂದ ಅವರು, ತಂದೆಯವರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜನರು ಅವರನ್ನು ಗೆಲ್ಲಿಸಿದ್ದಾರೆ ಎಂದು ಸೌಮ್ಯಾ ರೆಡ್ಡಿ ಹೇಳಿದರು.

July 14, 2019

Leave a Reply

Your email address will not be published. Required fields are marked *