ವಿಶೇಷ ವಾರ್ಷಿಕ ಸಂಗೀತೋತ್ಸವ
ಮೈಸೂರು

ವಿಶೇಷ ವಾರ್ಷಿಕ ಸಂಗೀತೋತ್ಸವ

January 17, 2020

ಮೈಸೂರು, ಜ.16(ಎಂಕೆ)- ನಗರದ ಸರಸ್ವತಿಪುರಂನಲ್ಲಿರುವ ರೋಟರಿ ಪಶ್ಚಿಮ ಶಾಲೆ ಸಭಾಂಗಣದಲ್ಲಿ ಶ್ರುತಿಮಂಜರಿ ಪ್ರತಿಷ್ಠಾನದ ‘ಇಪ್ಪತ್ತೆರಡನೆಯ ವಾರ್ಷಿಕ ಸಂಗೀತೋತ್ಸವಕ್ಕೆ’ ಇಂಫಾಲ್ ಕೇಂದ್ರಿಯ ಕೃಷಿ ವಿವಿ ಉಪಕುಲಪತಿ ಡಾ.ಎಸ್. ಅಯ್ಯಪ್ಪನ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಮ್ಮ ನಾಡಿನ ಕಲೆ, ಸಾಹಿತ್ಯ ಮತ್ತು ನಾಗರಿಕತೆ ಸದಾ ಹರಿಯುವ ನೀರಿನಂತೆ. ಹರಿದ ಕಡೆಯೆಲ್ಲವು ಹೊಸತನದೊಂದಿಗೆ ತನ್ನ ವಿಸ್ತಿರ್ಣವನ್ನು ಹೆಚ್ಚಿಸಿಕೊಳ್ಳುತ್ತಿರುತ್ತದೆ. ಸಂಗೀತ ಸ್ವರಗಳು ಕಿವಿಗೆ, ಹೃದಯಕ್ಕೆ ಮುದ ನೀಡುತ್ತವೆ ಎಂದರು.

ನಂತರ ವಿದ್ವಾನ್ ಹೆಚ್.ಎಲ್.ಶಿವಶಂಕರಸ್ವಾಮಿ ಮತ್ತು ತಂಡದವರಿಂದ ನಡೆದ ‘ಲಯ ಲಹರಿ’ ವಿಶೇಷ ವಾದ್ಯ ಸಂಗೀತ ಕಾರ್ಯಕ್ರಮ ಕೇಳುಗರ ತಲೆದೂಗುವಂತೆ ಮಾಡಿತು. ಏಕಕಾಲದಲ್ಲಿ 12 ಮಂದಿ ಕಲಾವಿದರು ತಬಲ, ಕೊಳಲು, ಘಟಂ, ಕಹೊನ್, ಗಿಟಾರ್, ರಿದಂಪ್ಯಾಡ್, ಡೋಲು ಮತ್ತಿತರ ಸಂಗೀತ ಪರಿಕರಗಳನ್ನು ನುಡಿಸುವ ಮೂಲಕ ಕಲಾಭಿಮಾನಿಗಳನ್ನು ರಂಜಿಸಿದರು. ರೋಟರಿ ಮೈಸೂರು ಪಶ್ಚಿಮ ಸಂಸ್ಥೆ ಅಧ್ಯಕ್ಷ ರೆಜಿನಾಲ್ಡ್ ವೆಸ್ಲಿ ಉಪಸ್ಥಿತರಿದ್ದರು.

Translate »