ಮೂರು ದಿನ ಮುಂಚೆಯೇ ಮೈಸೂರಿನಲ್ಲಿ ಸಂಕ್ರಾಂತಿ ಕಬ್ಬು ಮಾರಾಟ ಜೋರು
ಮೈಸೂರು

ಮೂರು ದಿನ ಮುಂಚೆಯೇ ಮೈಸೂರಿನಲ್ಲಿ ಸಂಕ್ರಾಂತಿ ಕಬ್ಬು ಮಾರಾಟ ಜೋರು

January 14, 2020

ಮೈಸೂರು, ಜ.13(ಆರ್‍ಕೆ)- ಹಬ್ಬ ಮೂರು ದಿನ ವಿರುವಾಗಲೇ ಮೈಸೂರಿನಲ್ಲಿ ಸಂಕ್ರಾಂತಿ ಕಬ್ಬು ಮಾರಾಟ ವಾಗುತ್ತಿದೆ. ಹಿಂದೂ ಸಂಪ್ರದಾಯದ ಪ್ರಕಾರ ಉತ್ತ ರಾಯಣ ಆರಂಭದ ಮಕರ ಸಂಕ್ರಾಂತಿ ಹಬ್ಬವನ್ನು ಜನವರಿ 15ರಂದು ಸಡಗರದಿಂದ ಆಚರಿಸಲಾಗು ತ್ತದೆ. ಎಳ್ಳು-ಬೆಲ್ಲದ ಜೊತೆಗೆ ಸಿಹಿ ನೀಡುವ ಕಬ್ಬನ್ನು ವಿತರಿಸಿ ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಶುಭಾಶಯ ಹೇಳುವುದು ವಾಡಿಕೆ.

ಭಾನುವಾರ(ಜ.12)ವೇ ರೈತರು ಸಂಕ್ರಾಂತಿಯ ಮೆದು ಕಪ್ಪು ಕಬ್ಬನ್ನು ಮೈಸೂರಿಗೆ ತಂದು ಪ್ರಮುಖ ವೃತ್ತ, ರಸ್ತೆಗಳ ಫುಟ್‍ಪಾತ್‍ಗಳ ಮೇಲಿರಿಸಿಕೊಂಡು ಮಾರಾಟ ಮಾಡುತ್ತಿದ್ದು, ಇಂದು ಬೆಳಿಗ್ಗೆಯಿಂದಲೇ ಗ್ರಾಹಕರು ಸಂಕ್ರಾಂತಿ ಕಬ್ಬನ್ನು ಖರೀದಿಸುತ್ತಿದ್ದುದು ಕಂಡು ಬಂದಿತು. ತಿ.ನರಸೀಪುರ, ಪಾಂಡವಪುರ, ಹೊಳೇನರಸೀಪುರ ಹಾಗೂ ಸುತ್ತಮುತ್ತಲ ರೈತರು ಕಬ್ಬಿನ ಜಲ್ಲೆಗಳನ್ನು ತೊಂಡೆ ಸಮೇತ ತಂದು ಮೈಸೂ ರಿನ ಜೆ.ಕೆ.ಮೈದಾನ, ಅಗ್ರಹಾರ ಸರ್ಕಲ್, ಮಹಾತ್ಮ ಗಾಂಧಿ ರಸ್ತೆ, ವಿ.ವಿ. ಮೊಹಲ್ಲಾದ ಮಾತೃಮಂಡಳಿ ಸರ್ಕಲ್, ರಾಮಕೃಷ್ಣನಗರದ ಸರ್ಕಲ್, ಹೆಬ್ಬಾಳಿನ ಮುಡಾ ಮಾರುಕಟ್ಟೆ ಸೇರಿದಂತೆ ಹಲವೆಡೆ ಸಂಕ್ರಾಂತಿ ಕಬ್ಬು ಮಾರಾಟ ಮಾಡಲಾಗುತ್ತಿದೆ.

ಚಿಕ್ಕ ಚಿಕ್ಕ ಗೆಣ್ಣುಗಳನ್ನು ಹೊಂದಿರುವ ಕಬ್ಬಿನ ಜಲ್ಲೆ ಗಳು ಸುಮಾರು 6ರಿಂದ 8 ಅಡಿ ಉದ್ದವಿದ್ದು, ತೊಂಡೆ ಹಸಿರಾಗಿದೆ. ಬುಧವಾರ ಸಂಕ್ರಾಂತಿ ಹಬ್ಬವಿರು ವುದರಿಂದ ಇಂದು ಬೆಳಿಗ್ಗೆಯಿಂದಲೇ ಜನರು ಕಬ್ಬನ್ನು ಖರೀದಿಸುತ್ತಿರುವುದು ಕಂಡುಬಂದಿತು.

ಒಂದು ಕಬ್ಬಿನ ಜಲ್ಲೆ 50ರಿಂದ 60 ರೂ.ಗಳಿಗೆ ಮಾರಾಟವಾಗುತ್ತಿದೆÉ. ನಾಳೆ (ಜ.14) ಮತ್ತು ಜ. 15ರ ಸಂಕ್ರಾಂತಿ ಹಬ್ಬದ ದಿನದಂದು ಬೇಡಿಕೆ ಹೆಚ್ಚಾಗಿ ದರ ಏರಿಕೆಯಾಗಬಹುದೆಂದು ಕೆಲವರು ಇಂದೇ ಕಬ್ಬಿನ ಜಲ್ಲೆಗಳನ್ನು ಖರೀದಿಸಿ ಎರಡು ಗೆಣ್ಣುಗಳಿ ಗೊಂದರಂತೆ ತುಂಡರಿಸಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಾಮಾನ್ಯವಾಗಿ ಗೆಣ್ಣು ಚಿಕ್ಕದಾಗಿ ರುವ ಸಂಕ್ರಾಂತಿ ಕಬ್ಬು ಕಪ್ಪು ಮತ್ತು ಕೆಂಪು ಬಣ್ಣ ದಾಗಿದ್ದು, ಸಿಹಿ ಸಕ್ಕರೆ ಕಬ್ಬಿಗಿಂತ ಕಡಿಮೆ ಇರುತ್ತದೆ. ಎಳ್ಳು ಬೆಲ್ಲದೊಂದಿಗೆ ತುಂಡು ಕಪ್ಪು ಕಬ್ಬು ನೀಡಿ ಸಂಕ್ರಾಂತಿ ಹಬ್ಬದಂದು ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಶುಭಾಶಯ ವಿನಿಮಯ ಮಾಡಿ ಕೊಳ್ಳುವುದು ವಾಡಿಕೆಯಾಗಿದೆ.

ಅದೇ ರೀತಿ ಕೊಬ್ಬರಿ, ಬೆಲ್ಲ, ಕಡಲೆಕಾಯಿ ಬೀಜ, ಉರಿದ ಕಡಲೆ, ಬಿಳಿ ಎಳ್ಳು, ಸಕ್ಕರೆ ಅಚ್ಚು, ಸಾಸುವೆ ಪೆಪ್ಪರ್‍ಮೆಂಟ್, ಪೇಪರ್ ಕವರ್, ಪ್ಲಾಸ್ಟಿಕ್, ಸ್ಟೀಲ್ ಬಾಕ್ಸ್‍ಗಳ ಮಾರಾಟವೂ ಶಿವರಾಂಪೇಟೆ ರಸ್ತೆಯಲ್ಲಿ ಬಲು ಜೋರಾಗಿ ನಡೆಯುತ್ತಿದೆ.

ಸೇವಂತಿಗೆ ಹೂ, ಹಣ್ಣು, ತರಕಾರಿ ಮಾರಾಟವೂ ಮೈಸೂರಲ್ಲಿ ಜೋರಾಗಿ ನಡೆಯುತ್ತಿದೆ. ದನಕರುಗಳ ಕಿಚ್ಚು ಹಾಯಿಸಲು ಬಣ್ಣ ಬಣ್ಣದ ಪೇಪರ್‍ಗಳು, ಅಲಂಕಾರಿಕ ವಸ್ತುಗಳನ್ನು ಚಿಕ್ಕಗಡಿಯಾರ, ಶಿವರಾಂ ಪೇಟೆ, ದೇವರಾಜ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.

Translate »