ಸಿಎಎ ಬೆಂಬಲಿಸಿ ಬಿಜೆಪಿ ಅಂಚೆ ಕಾರ್ಡ್ ಚಳವಳಿ
ಮೈಸೂರು

ಸಿಎಎ ಬೆಂಬಲಿಸಿ ಬಿಜೆಪಿ ಅಂಚೆ ಕಾರ್ಡ್ ಚಳವಳಿ

January 14, 2020

ಮೈಸೂರು,ಜ.13(ಎಂಟಿವೈ)- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಮೈಸೂ ರಿನ ಅಶೋಕ ರಸ್ತೆಯಲ್ಲಿರುವ ಕೇಂದ್ರ ಅಂಚೆ ಕಚೇರಿ ಬಳಿ ಬಿಜೆಪಿ ಎಸ್‍ಸಿ ಮೋರ್ಚಾದ ಕಾರ್ಯಕರ್ತರು ಅಂಚೆ ಕಾರ್ಡ್ ಚಳವಳಿ ನಡೆಸಿದರು.

ದೇಶದ ಭದ್ರತೆಗೆ ಪೌರತ್ವ ತಿದ್ದುಪಡಿ ಕಾಯ್ದೆ ಪೂರಕವಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹತ್ವದ ನಿರ್ಧಾರ ಕೈಗೊಂಡು ಸಿಎಎ ಜಾರಿಗೆ ತಂದಿದ್ದಾರೆ. ವಿವಿಧ ದೇಶ ಗಳಿಂದ ಭಾರತಕ್ಕೆ ಅಕ್ರಮವಾಗಿ ನುಸುಳಿ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡ ಗಿದ್ದವರಿಗೆ ಕಂಟಕವಾಗಿ ಪರಿಣಮಿಸಲಿ ರುವ ಈ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಅನಿವಾರ್ಯ ವಾಗಿದೆ. ಓಟ್ ಬ್ಯಾಂಕ್ ರಾಜಕಾರಣಕ್ಕೆ ವಿರೋಧ ಪಕ್ಷಗಳ ಕಾರ್ಯಕರ್ತರು ಕಾಯ್ದೆ ವಿರೋಧಿಸುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರು.

ದೇಶದ ಭದ್ರತೆಗೆ ಸವಾಲಾಗಿರುವ ವಲ ಸಿಗರು ಹಾಗೂ ಭಯೋತ್ಪಾದನಾ ಚಟು ವಟಿಕೆ ಹತ್ತಿಕ್ಕಲು ಈ ಕಾಯ್ದೆಯನ್ನು ಜಾರಿ ಗೊಳಿಸುವಂತೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಷಾ ಬೆಂಬಲಿಸಿ ಅಂಚೆ ಕಾರ್ಡ್ ಚಳವಳಿ ಮಾಡುತ್ತಿರುವು ದಾಗಿ ತಿಳಿಸಿದರಲ್ಲದೆ, ಮೋದಿ ಪರ ಹಾಗೂ ಭಾರತಾಂಭೆ ಪರ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಬಿಜೆಪಿ ಎಸ್‍ಸಿ ಮೋರ್ಚಾದ ಅಧ್ಯಕ್ಷ ನಾಗರಾಜು, ಪ್ರಧಾನ ಕಾರ್ಯದರ್ಶಿ ಮುರುಳಿ, ಪ್ರಧಾನ ಕಾರ್ಯ ದರ್ಶಿ ಎಂ.ಆನಂದರಾಜು, ರಾಜ್ಯ ಕಾರ್ಯ ದರ್ಶಿ ಪಿ.ಗಿರಿಧರ್, ಮಾಜಿ ಮೇಯರ್ ಸಂದೇಶ್‍ಸ್ವಾಮಿ, ಸೋಮಸುಂದರ್ ಸೇರಿ ದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »