ನಿಗಮದ ಕಚೇರಿ ಎದುರು ಸಮತಾ ಸೈನಿಕ ದಳ ಪ್ರತಿಭಟನೆ
ಮೈಸೂರು

ನಿಗಮದ ಕಚೇರಿ ಎದುರು ಸಮತಾ ಸೈನಿಕ ದಳ ಪ್ರತಿಭಟನೆ

January 14, 2020

ಮೈಸೂರು, ಜ.13(ಆರ್‍ಕೆಬಿ)- ಡಾ.ಬಿ.ಆರ್.ಅಂಬೇಡ್ಕರ್ ನಿಗಮದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಹಗರಣಗಳ ಸಿಓಡಿ ತನಿಖೆಗೆ ಆಗ್ರಹಿಸಿ ಸಮತಾ ಸೈನಿಕ ದಳ ಜಿಲ್ಲಾ ಘಟಕ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮೈಸೂರಿನ ಸರಸ್ವತಿಪುರಂನ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಸಂಘಟನೆಯ ಅಧ್ಯಕ್ಷ ವಿ.ಗಣೇಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಂಬೇ ಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ನಿಗಮ ದಲ್ಲಿನ ವ್ಯಾಪಕ ಭ್ರಷ್ಟಾಚಾರದಿಂದಾಗಿ ಅಂಬೇಡ್ಕರ್ ಹೆಸರಿಗೆ ಕಳಂಕ ಉಂಟಾಗುತ್ತಿದೆ. ನಿಗಮ ಭ್ರಷ್ಟಾಚಾರ ಮುಕ್ತವಾಗುವುದಾದರೆ ಮಾತ್ರ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಅಂಬೇಡ್ಕರ್ ಹೆಸರು ಮುಂದುವರಿಯಲಿ. ಇಲ್ಲವಾದರೆ ಇದಕ್ಕೆ ಇದರ ಮೂಲ ಹೆಸರೇ ನಾಮಕರಣವಾಗಲಿ ಎಂದು ಒತ್ತಾಯಿಸಿದರು.

ನಿಗಮದ ಎಲ್ಲಾ ಯೋಜನೆಗಳ ಫಲಾನುಭವಿಗಳನ್ನು ಆಯಾ ಕ್ಷೇತ್ರಗಳ ಶಾಸಕರು ಆಯ್ಕೆ ಮಾಡುವ ವ್ಯವಸ್ಥೆಯನ್ನು ಕೂಡಲೇ ರದ್ದುಪಡಿಸಿ, ನೇರವಾಗಿ ನಿಗಮದ ಆಯಾ ಜಿಲ್ಲಾ ವ್ಯವಸ್ಥಾಪಕರೇ ಆಯ್ಕೆ ಮಾಡಿ ನಿಗಮದ ವರಿಷ್ಠಾಧಿಕಾರಿಗಳಿಂದ ಒಪ್ಪಿಗೆ ಪಡೆಯುವ ವ್ಯವಸ್ಥೆ ಜಾರಿಯಾಗಬೇಕು. ಶಾಸಕರು ತಮ್ಮ ಹಿಂಬಾಲಕರನ್ನು ಮಾತ್ರ ಆಯ್ಕೆ ಮಾಡುವ ಕೆಟ್ಟ ವ್ಯವಸ್ಥೆಯಿಂದಾಗಿ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋ ಪಿಸಿದರು. ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಡಿ.ಶಿವಮಾದು, ರಾಜು, ಎಸ್. ಸೆಂದಿಲ್‍ಕುಮಾರ್, ಎಸ್.ವೆಂಕಟರಮಣ, ಆರ್.ಸಂಪತ್‍ಕುಮಾರ್, ಕೆ.ವಿ.ವೆಂಕ ಟೇಶ್, ಆರ್.ಕುಮಾರ್, ಎಂ.ಎನ್.ಮುತ್ತುರಾಜ್, ದೀಪಾ ಇನ್ನಿತರರು ಭಾಗವಹಿಸಿದ್ದರು.