ಹಲ್ಮಿಡಿ ಶಾಸನದ ಪ್ರತಿರೂಪ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಮೈಸೂರು

ಹಲ್ಮಿಡಿ ಶಾಸನದ ಪ್ರತಿರೂಪ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

January 14, 2020

ಮೈಸೂರು, ಜ.13- ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಲಿಮಿಟೆಡ್‍ನ ಸಿಎಸ್‍ಆರ್ ಅನುದಾನದಡಿ ಕರ್ನಾ ಟಕ ಕಲಾಮಂದಿರದಲ್ಲಿ ಹಲ್ಮಿಡಿ ಶಾಸನದ ಪ್ರತಿರೂಪ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಬ್ಯಾಂಕ್ ನೋಟ್ ಪೇಪರ್ ಮಿಲ್‍ನ ವ್ಯವಸ್ಥಾಪಕ ನಿರ್ದೇಶಕ ಕೆ.ಜಿ.ವಿಶ್ವನಾಥ್ ಗುದ್ದಲಿ ಪೂಜೆ ನೆರವೇರಿಸಿದರು.

ಕಲಾಮಂದಿರದ ಅಂದವನ್ನು ಹೆಚ್ಚಿಸಲು ರೂ. 80 ಲಕ್ಷಗಳ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ. ಹಲ್ಮಿಡಿ ಶಾಸನದ ಪ್ರತಿ ರೂಪ, ಶೌಚಾಲಯದ ಉನ್ನತೀಕರಣ, ಕಲಾಮಂದಿರದ ಧ್ವನಿ ಮತ್ತು ಬೆಳಕಿನ ಉನ್ನತೀಕರಣ, ಕಲಾಮಂದಿರದ ಉದ್ಯಾನ ಅಭಿವೃದ್ಧಿ ಕಾಮಗಾರಿಗಳು, ತಾಲೀಮು ಕೊಠಡಿ ನಿರ್ಮಾಣ, ಮಳೆ ನೀರು ಕೊಯ್ಲು ಕಾಮಗಾರಿ, ಕಲಾಮಂದಿರಕ್ಕೆ ಪಾರಂಪರಿಕ ಬಣ್ಣ ಬಳಿ ಯುವ ಕಾಮಗಾರಿ, ರಂಗಾಯಣಕ್ಕೆ ಇಂಟರ್‍ಲಾಕ್ ಹಾಗೂ ಅಭಿವೃದ್ಧಿ ಕಾಮಗಾರಿಗಳು ಹಾಗೂ ಇಂಟರ್‍ಲಾಕ್ ಪೇವರ್ಸ್ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಜನರಲ್ ಮ್ಯಾನೇಜರ್ ಶ್ರೀಧರ್‍ಕುಮಾರ್, ಕೆ.ಅನಂತ ಹೆಗಡೆ, ಕಾರ್ಯದರ್ಶಿ ಲಕ್ಷ್ಮೀಶ್ ಬಾಬು, ವಾದಿರಾಜ್, ರಾಘವೇಂದ್ರ, ಕೆಆರ್‍ಐಡಿಎಲ್ ಸಂಸ್ಥೆಯ ಮುಖ್ಯಸ್ಥ ಮಲ್ಲಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹನೂರು ಚೆನ್ನಪ್ಪ ಹಾಗೂ ಇತರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Translate »