ಡಿಸಿ ಕಚೇರಿ ಮುಂದೆ ದಿನಗೂಲಿ ನೌಕರರ ಪ್ರತಿಭಟನೆ
ಮೈಸೂರು

ಡಿಸಿ ಕಚೇರಿ ಮುಂದೆ ದಿನಗೂಲಿ ನೌಕರರ ಪ್ರತಿಭಟನೆ

January 14, 2020

ಮೈಸೂರು,ಜ.13(ಎಂಟಿವೈ)- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ಸದಸ್ಯರು ಪ್ರತಿಭಟಿಸಿದರು.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವು ವರ್ಷದಿಂದ ದಿನಗೂಲಿ, ಗುತ್ತಿಗೆ ಆಧಾರ ದಲ್ಲಿ ಸೇವೆ sಸಲ್ಲಿಸುತ್ತಿರುವ ನೌಕರರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಖಾಯಂ ಮಾಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ. ಇದರಿಂದ ಗುತ್ತಿಗೆ ನೌಕರರ ಜೀವನ ಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ಹೊರಗುತ್ತಿಗೆ ಪದ್ಧತಿ ರದ್ದು ಮಾಡ ಬೇಕು. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡು ತ್ತಿರುವ ನೌಕರರನ್ನು ಖಾಯಂಗೊಳಿಸ ಬೇಕು. ಹೊರಗುತ್ತಿಗೆ ನೌಕರರನ್ನು ಅವರು ಕೆಲಸ ಮಾಡುತ್ತಿರುವ ಜಾಗಗಳಲ್ಲಿಯೇ ಖಾಯಂಗೊಳಿಸಬೇಕು. ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸರ್ವೋಚ್ಛ ನ್ಯಾಯಾಲಯದ ತೀರ್ಪಿ ನಂತೆ ಶೇ.100ರಷ್ಟು ತುಟ್ಟಿಭತ್ಯೆ ಹಾಗೂ ಮನೆ ಬಾಡಿಗೆ ಭತ್ಯೆ ಮಂಜೂರು ಮಾಡ ಬೇಕು. ದಿನಗೂಲಿ ನೌಕರರಾಗಿ ಸೇವೆಗೆ ಸೇರಿ, ಖಾಯಂಗೊಂಡ ನಂತರ ನಿವೃತ್ತಿಯಾ ದವರಿಗೆ ಯಾವುದೇ ತಾರತಮ್ಯವಿಲ್ಲದೆ 8 ವರ್ಷಗಳ ಗರಿಷ್ಠ ಹೆಚ್ಚುವರಿ ಅರ್ಹತಾ ಸೇವೆ ನೀಡಬೇಕು ಎಂಬುದು ಸೇರಿದಂತೆ ಒಟ್ಟು 22 ಬೇಡಿಕೆಗಳನ್ನು ಫೆ.13ರೊಳಗೆ ಈಡೇರಿಸಬೇಕು. ಇಲ್ಲದಿದ್ದರೆ, ಎಲ್ಲಾ ಇಲಾಖೆ ಗಳ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೌಕರರು, ದಿನಗೂಲಿಯಿಂದ ಖಾಯಂಗೊಂಡು ನಿವೃತ್ತಿಯಾಗಿರುವ ಸಿಬ್ಬಂದಿಗಳೊಂದಿಗೆ ಮಾರ್ಚ್ 11ರಂದು ಬೆಂಗಳೂರಿನಲ್ಲಿ ಮೂರು ದಿನಗಳ ಧರಣಿ ಸತ್ಯಾಗ್ರಹ ನಡೆಸುವುದಾಗಿ ಪ್ರತಿಭಟನಾ ಕಾರರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ಅಧ್ಯಕ್ಷ ಜಿ. ರಮೇಶ್, ಪದಾಧಿಕಾರಿಗಳಾದ ಎಸ್.ಎಂ. ಜಯಶೇಖರ್, ಸಿ.ರಾಜಣ್ಣ, ನಾರಾಯಣ ಗೌಡ, ಗಂಗಾಧರ್, ಕೆ.ಶಿವಣ್ಣ ಸೇರಿದಂತೆ ಇತರರು ಪಾಲ್ಗೊಂಡಿದ್ದರು.