ಇಂದು ವಿಶೇಷ ಶಾಸ್ತ್ರೀಯ ನೃತ್ಯ ಪ್ರದರ್ಶನ
ಮೈಸೂರು

ಇಂದು ವಿಶೇಷ ಶಾಸ್ತ್ರೀಯ ನೃತ್ಯ ಪ್ರದರ್ಶನ

August 18, 2019

ಮೈಸೂರು,ಆ.17-ಮೈಸೂರು ಬಿ.ನಾಗರಾಜ್‍ರವರ ಸಾರಥ್ಯ ದಲ್ಲಿ ಸಂಯೋಜನೆಗೊಂಡಿ ರುವ ಆರ್ಟಿಕ್ಯುಲೇಟ್ ಫೆಸ್ಟಿ ವಲ್ (ನೃತ್ಯೋತ್ಸವ) ನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ವೀಣೆ ಶೇಷಣ್ಣ ಭವನ, ಗಾನ ಭಾರತಿ ಆವರಣದಲ್ಲಿ ಪ್ರತಿ ತಿಂಗಳ 3ನೇ ಭಾನುವಾರದಂದು ಆಯೋಜನೆಗೊಳ್ಳುತ್ತಿದೆ. ಈ ವಿಶೇಷ ನೃತ್ಯೋತ್ಸವದಲ್ಲಿ 5 ಮಂದಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರಾಗಿರುವ ಶಾಸ್ತ್ರೀಯ ನೃತ್ಯ ಕಲಾಕಾರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರಾವಣ ಮಾಸದ ಪ್ರಯುಕ್ತ ನಗರದ ಜನತೆಗೆ ವಿಶೇಷ ಮೆರುಗನ್ನು ನೀಡಲಿದ್ದಾರೆ. ಈ ನೃತ್ಯ ಸರಣಿಯ 39ನೆಯ ಸಂಚಿಕೆಯು ಆ.18 ಭಾನುವಾರದಂದು ಸಂಜೆ 6 ಗಂಟೆಗೆ ಪ್ರಾರಂಭವಾಗಲಿದೆ. ಭರತನಾಟ್ಯವನ್ನು ದ್ವಂದ್ವ ಮಾದರಿ ಯಲ್ಲಿ ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ದಂಪತಿ ದೀಪಕ್‍ಕುಮಾರ್ ಹಾಗೂ ಪ್ರೀತಿಕಲಾ ಪ್ರಸ್ತುತಪಡಿ ಸಲಿದ್ದಾರೆ. ಸ್ವಿಜûರ್‍ಲ್ಯಾಂಡಿನ ಓಂಕಾರ್ ಸ್ಕೂಲ್ ಆಫ್ ಇಂಡಿ ಯನ್ ಡಾನ್ಸ್‍ನ ಲಯೇಟೀ ಟಿಯಾ ಸಿಯಿಫರ್ಟ್ ಭರತ ನಾಟ್ಯ ಏಕವ್ಯಕ್ತಿ ಪ್ರಕಾರದಲ್ಲಿ ಪ್ರದರ್ಶಿಸಲಿದ್ದಾರೆ. ಬೆಂಗಳೂರಿನ ಕಲಾಕುಟೀರಂ ಸ್ಕೂಲ್ ಆಫ್ ಡಾನ್ಸ್‍ನ ಸ್ಪೂರ್ತಿ ಏಕವ್ಯಕ್ತಿ ಶೈಲಿ ಯಲ್ಲಿ ಭರತನಾಟ್ಯ ನಡೆಸಲಿದ್ದಾರೆ. ಪುಣೆಯ ಅಮೀನಾ ಜಗದೀಶ್ ಪಟಾಣ್‍ಕರ್ ಏಕವ್ಯಕ್ತಿ ಮಾದರಿಯಲ್ಲಿ ಕಥಕ್ ನೃತ್ಯವನ್ನು ಪ್ರದ ರ್ಶಿಸಲಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿರುತ್ತದೆ. ನೃತ್ಯಾಸ ಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸ ಬೇಕೆಂದು ಮೈಸೂರು ಬಿ.ನಾಗರಾಜ್ ತಿಳಿಸಿದ್ದಾರೆ.

 

Translate »