70ನೇ ಗಣರಾಜ್ಯೋತ್ಸವಕ್ಕೆ ಬಿಗ್‍ಬಜಾರ್‍ನಿಂದ ಗ್ರಾಹಕರಿಗೆ ವಿಶೇಷ ರಿಯಾಯಿತಿ ಕೊಡುಗೆ
ಮೈಸೂರು

70ನೇ ಗಣರಾಜ್ಯೋತ್ಸವಕ್ಕೆ ಬಿಗ್‍ಬಜಾರ್‍ನಿಂದ ಗ್ರಾಹಕರಿಗೆ ವಿಶೇಷ ರಿಯಾಯಿತಿ ಕೊಡುಗೆ

January 22, 2019

ಮೈಸೂರು: ಮೈಸೂರಿನ ಬಿಗ್‍ಬಜಾರ್ ಫ್ಯೂಚರ್ ಗ್ರೂಪ್‍ನ ಹೈಪರ್‍ಮಾರ್ಕೆಟ್ ಸರಣಿಗಳಲ್ಲಿ ಒಂದಾದ ಬಿಗ್‍ಬಜಾರ್ ಗಣರಾಜ್ಯೋತ್ಸವದ ಅಂಗ ವಾಗಿ ಜ.23ರಿಂದ 27ರವರೆಗೆ ಅತ್ಯಂತ ಕಡಿಮೆ ಬೆಲೆಯ 5 ದಿನಗಳು ಎಂಬ ಮೆಗಾ ಶಾಪಿಂಗ್ ಉತ್ಸವ ಹಮ್ಮಿಕೊಂಡಿದ್ದು, ಗ್ರಾಹಕರು ರೂ.3000ಕ್ಕೆ ಮೇಲ್ಪಟ್ಟು ಖರೀದಿಸಿ ಹೆಚ್ಚುವರಿ ಶೇ.20 ರಿಯಾಯಿತಿ ಹಾಗೂ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಮೇಲೆ ಅತ್ಯಾಕರ್ಷಕ ಕೊಡುಗೆ ಮತ್ತು ರಿಯಾಯಿತಿಗಳಿವೆ ಎಂದು ಮೈಸೂರಿನ ಜೆಎಲ್‍ಬಿ ರಸ್ತೆ ಬಿಗ್ ಬಜಾರ್ ಮಾರುಕಟ್ಟೆ ವ್ಯವಸ್ಥಾಪಕ ಎಂ.ರವಿಚಂದ್ರನ್ ತಿಳಿಸಿದರು.

ಬಿಗ್ ಬಜಾರ್ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಹಕರು ರಿಯಾಯಿತಿಯನ್ನು ಫ್ಯೂಚರ್ ಪೇ ಮೂಲಕ ಪಡೆಯಬಹುದಾಗಿದ್ದು, ರುಪೇ ಕಾರ್ಡ್ ಮೂಲಕ ಪಾವತಿಸುವ ಗ್ರಾಹಕರು ಕನಿಷ್ಠ ರೂ.500ರಿಂದ 2500ದವರೆಗೆ ಖರೀದಿಸಿದರೆ, ಶೆ.7 ತ್ವರಿತ ರಿಯಾಯಿತಿ, ಕನಿಷ್ಠ ರೂ.5000ದಿಂದ 7,500ರವರೆಗೆ ಖರೀದಿಸಿದರೆ ಶೇ.10 ತ್ವರಿತ ರಿಯಾಯಿತಿ ಪಡೆಯಬಹುದು ಹಾಗೂ ಹೆಚ್ಚುವರಿ ಶೇ.20 ರಿಯಾಯಿತಿ ಸಹ ಪಡೆಯಬಹುದು ಎಂದರು. ಪೇಟಿಎಂ ಮೂಲಕ ಬಿಗ್ ಬಜಾರ್ ಇ-ಗಿಫ್ಟ್ ಖರೀಸಿದ, ಪೇಟಿಎಂನಲ್ಲಿ ಶೆ.50ರಷ್ಟು ಕ್ಯಾಷ್ ಬ್ಯಾಕ್ ಪಡೆಯಬಹುದು. ಬಿಗ್‍ಬಜಾರ್‍ನಲ್ಲಿ ಶಾಪಿಂಗ್ ಮಾಡಲು ಅದೇ ಇ-ಗಿಫ್ಟ್ ವೋಚರ್‍ಗಳನ್ನು ಬಳಸಬಹುದಾಗಿದೆ. ಹಾಗೂ ಹೆಚ್ಚುವರಿ ಶೇ.20 ರಿಯಾಯಿತಿಯನ್ನು ಸಹ ಪಡೆಯಬಹುದು ಎಂದು ಹೇಳಿದರು. ಉಡುಪುಗಳು, ಕೊರಿಯೋ ಎಲ್‍ಇಡಿ ಟಿವಿ, ಮೊಬೈಲ್‍ಗಳು, ಗೃಹೋಪಯೋಗಿ ಉತ್ಪನ್ನಗಳು, ಪಿಜನ್ 3 ಬರ್ನರ್ ಗ್ಯಾಸ್ ಸ್ಟೊವ್ ಸೇರಿದಂತೆ ನಾನಾ ವಸ್ತುಗಳ ಮೇಲೆ ರಿಯಾಯಿತಿ ಇರುತ್ತದೆ ಎಂದರು. ಗೋಷ್ಠಿಯಲ್ಲಿ ಮಾರುಕಟ್ಟೆ ವ್ಯವಸ್ಥಾಪಕರಾದ ಸಿ.ಎಂ.ರವೀಂದ್ರನಾಥ್, ಸಹಾ ಯಕ ಪಿ.ಆರ್.ಪುನೀತ್‍ಕುಮಾರ್, ಗೋಕುಲಂ ಹ್ಯಾಬಿಟೇಟ್ ಮಾಲ್‍ನ ಮಾರುಕಟ್ಟೆ ವ್ಯವಸ್ಥಾಪಕ ನವೀನ್‍ಕುಮಾರ್, ಸಹಾಯಕ ಮಂಜುನಾಥ್ ಉಪಸ್ಥಿತರಿದ್ದರು.

Translate »