ಮೈಸೂರಲ್ಲಿ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ
ಮೈಸೂರು

ಮೈಸೂರಲ್ಲಿ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ

January 22, 2019

ಮೈಸೂರು: ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯ ದಲ್ಲಿ ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಮೈಸೂರು ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕಸಾಪ ಮೈಸೂರು ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸಮ್ಮೇಳನದ ವಿವರಗಳನ್ನು ನೀಡಿದ ಅವರು, ಹಿರಿಯ ಸಂಶೋಧಕಿ ಡಾ.ವೈ.ಸಿ. ಭಾನುಮತಿ ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಸಮ್ಮೇಳನದಲ್ಲಿ ಎರಡು ವಿಚಾರಗೋಷ್ಠಿ ಮತ್ತು ಮಹಿಳಾ ಕವಿಗೋಷ್ಠಿ ಇದೆ. ಡಾ.ಟಿ.ಸಿ. ಪೂರ್ಣಿಮಾ ಅಧ್ಯಕ್ಷತೆಯಲ್ಲಿ ಮೊದಲ ಗೋಷ್ಠಿಯಲ್ಲಿ ಮೈಸೂರು ಜಿಲ್ಲಾ ಮಹಿಳಾ ಸಾಹಿತ್ಯದ ನೆಲೆ-ಹಿನ್ನೆಲೆ’ ಕುರಿತು ಹಾಗೂ ಎಂ.ಎನ್.ಸುಮನಾ ಅಧ್ಯಕ್ಷತೆಯಲ್ಲಿ 2ನೇ ಗೋಷ್ಠಿಯಲ್ಲಿಮಹಿಳಾ ಸಬಲೀಕರಣ -ಸವಾಲುಗಳು’ ಕುರಿತು ಹಲವು ಪ್ರಮುಖರು ವಿಚಾರಗಳ ಮಂಡಿಸಲಿದ್ದಾರೆ. ಕವಯಿತ್ರಿ ಕೆ.ಆರ್.ಪ್ರೇಮಲೀಲಾ ಅಧ್ಯಕ್ಷತೆಯಲ್ಲಿ ಮಹಿಳಾ ಕವಿಗೋಷ್ಠಿ ನಡೆಯಲಿದೆ ಎಂದರು.

ಮೈಸೂರು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಹಯೋಗದಲ್ಲಿ ನಡೆಯುವ ಸಮ್ಮೇಳನಕ್ಕಾಗಿ ಕಾಲೇಜು ಆವರಣದಲ್ಲಿ ತಿರುಮಲಾಂಬ ಮಹಾದ್ವಾರ, ಕಾದಂ ಬರಿಕಾರ್ತಿ ತ್ರಿವೇಣಿ ವೇದಿಕೆಯಲ್ಲಿ ಸಂಚಿ ಹೊನ್ನಮ್ಮ ಸಭಾಂಗಣದಲ್ಲಿ ಸಮ್ಮೇಳನ ನಡೆಯಲಿದೆ. ಅಂದು ಬೆಳಿಗ್ಗೆ 8.30 ಗಂಟೆಗೆ ಧ್ವಜಾರೋಹಣ ನಡೆಯಲಿದೆ. ಬಳಿಕ 9 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಜಿಪಂ ಹಂಗಾಮಿ ಅಧ್ಯಕ್ಷ ಸಾ.ರಾ.ನಂದೀಶ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮೆರವಣಿಗೆ ಕಾಲೇಜಿನಿಂದ ಹೊರಟು ಮೆಟ್ರೋಪೋಲ್ ವೃತ್ತ, ಶಿವರಾಂ ಪೇಟೆ, ಚಿಕ್ಕ ಗಡಿಯಾರ, ದೇವರಾಜ ಅರಸು ರಸ್ತೆ ಮೂಲಕ ಮತ್ತೆ ಮಹಾರಾಣಿ ಕಲಾ ಕಾಲೇಜು ತಲುಪಲಿದೆ ಎಂದು ತಿಳಿಸಿದರು.
ಬೆಳಿಗ್ಗೆ 11 ಗಂಟೆಗೆ ಸಮ್ಮೇಳನದ ಉದ್ಘಾ ಟನೆಯನ್ನು ಉನ್ನತ ಶಿಕ್ಷಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇ ಗೌಡ ನೆರವೇರಿಸಲಿದ್ದಾರೆ. ಮೇಯರ್ ಪುಷ್ಪಲತಾ ಜಗನ್ನಾಥ್ ಅವರು `ಭಾವಾಂತ ರಾಳ’ ಕೃತಿ ಬಿಡುಗಡೆ ಮಾಡಲಿದ್ದಾರೆ. ಬಳಿಕ ಸಮ್ಮೇಳನಾಧ್ಯಕ್ಷರ ನುಡಿ, ಮಹಾರಾಣಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಸಿ.ಎಚ್. ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವರಾದ ಸಾ.ರಾ.ಮಹೇಶ್, ಸಿ.ಎಸ್. ಪುಟ್ಟರಾಜು, ಶಾಸಕ ಎಲ್.ನಾಗೇಂದ್ರ, ಕರ್ನಾಟಕ ಸಂಸ್ಕøತ ವಿವಿ ಕುಲಪತಿ ಡಾ. ಪದ್ಮಾಶೇಖರ್, ಶಾಸಕ ತನ್ವೀರ್‍ಸೇಟ್, ಸಂಸದ ಪ್ರತಾಪಸಿಂಹ ಇನ್ನಿತರರು ಭಾಗ ವಹಿಸಲಿದ್ದಾರೆ ಎಂದರು.

ಮಧ್ಯಾಹ್ನ 12.30 ಗಂಟೆಗೆ ಮೊದಲ ವಿಚಾರ ಗೋಷ್ಠಿ, ಮಧ್ಯಾಹ್ನ 2.30 ಗಂಟೆಗೆ 2ನೇ ವಿಚಾರ ಗೋಷ್ಠಿ, ಸಂಜೆ 4 ಗಂಟೆಗೆ ಮಹಿಳಾ ಕವಿಗೋಷ್ಠಿ ನಡೆಯಲಿದೆ. ಇದೇ ಸಂದರ್ಭ ದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಪ್ರೊ. ಬಿ.ಎಸ್.ರುಕ್ಕಮ್ಮ, ಟಿ.ಕೆ.ಇಂದೂಬಾಯಿ, ಮಂಗಳಾ ಸತ್ಯನ್ (ಸಾಹಿತ್ಯ), ಸುನೀತಾ ಚಂದ್ರಕುಮಾರ್ (ಸುಗಮ ಸಂಗೀತ), ಭಾಗೀರಥಿ ಬಾಯಿ ಕದಂ (ರಂಗ ಭೂಮಿ), ಡಾ.ವಸುಂಧರಾ ದೊರೆಸ್ವಾಮಿ (ನೃತ್ಯ), ಶಾಂತಾ ಜಗದೀಶ್ (ಗಾಯನ), ಹೇಮ ಲತಾ ನಿಜಗುಣ (ಸಮಗ್ರ ಕೃಷಿ), ಎಂ.ಎ. ನೀಲಾಂಬಿಕಾ (ಶಿಕ್ಷಣ), ಎಂ.ಎ. ಹೇಮಲತಾ (ಮಹಿಳಾ ಸಂಘಟನೆ), ಡಾ. ಜೆ.ಕಮಲಾ ರಾಮನ್ (ವೈದ್ಯಕೀಯ), ಟಿ.ಸೌಮ್ಯ ರಾಣಿ (ಕ್ರೀಡೆ) ಇವರನ್ನು ಅಭಿ ನಂದಿಸಲಾಗುತ್ತದೆ ಎಂದು ಹೇಳಿದರು.

ಸಂಜೆ 5 ಗಂಟೆಗೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕಿ ಡಾ.ಪ್ರೀತಿ ಶ್ರೀಮಂಧರ್‍ಕುಮಾರ್ ಸಮಾರೋಪ ಭಾಷಣ ಮಾಡುವರು ಎಂದರು. ಸುದ್ದಿ ಗೋಷ್ಠಿಯಲ್ಲಿ ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮ.ನ.ಲತಾ ಮೋಹನ್, ಮಹಾ ರಾಣಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ಎಚ್.ಪ್ರಕಾಶ್, ಪ್ರಾಧ್ಯಾಪಕ ಪ್ರೊ. ಬಸವರಾಜು ಉಪಸ್ಥಿತರಿದ್ದರು.

Translate »